Gold Rate Today: ವೀಕೆಂಡ್​ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ

| Updated By: shruti hegde

Updated on: Jun 20, 2021 | 8:39 AM

Gold Silver Price Today: ಒಟ್ಟಾರೆಯಾಗಿ ಸಮಾರು ಎಲ್ಲಾ ಪ್ರಮುಖ ನಗರಗಳಲ್ಲಿಯೂ ಚಿನ್ನದ ದರ ಇಳಿಕೆ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

Gold Rate Today: ವೀಕೆಂಡ್​ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
Follow us on

Gold Silver Rate Today | ಬೆಂಗಳೂರು: ಚಿನ್ನ ಪ್ರಿಯರಿಗಂತು ಚಿನ್ನ(Gold Rate) ಕೊಳ್ಳುವತ್ತ ಆಸೆ ಹೆಚ್ಚು . ಚಿನ್ನ ಖರೀದಿಸುವ ಕುರಿತಾಗಿ ದರ ವಿವರ ಪರಿಶೀಲನೆಗೆ ಕಾತುರರಾಗಿರುತ್ತಾರೆ. ಅವರಿಗಿರುವುದು ಒಂದೇ ಆಸೆ.. ಆಭರಣಗಳ ಬೆಲೆ ಯಾವಾಗ ಇಳಿಕೆಯತ್ತ ಸಾಗುತ್ತದೆ ಎಂಬುದು. ಹೀಗಿರುವಾಗ ಇಂದು (ಭಾನುವಾರ, ಜೂನ್​ 20) ಆಭರಣಗಳ ಬೆಲೆ ಎಷ್ಟಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬುದರ ಕುರಿತಾಗಿ ತಿಳಿಯಿರಿ. ಆ ಬಳಿಕ ನೀವು ಕೂಡಿಟ್ಟ ಹಣಕ್ಕೆ ಚಿನ್ನ ಖರೀದಿಸಬಹುದು ಎಂದೆನಿಸದರೆ ಮುಂದಿನ ಆಲೋಚನೆ ಮಾಡಬಹುದು.

ಅದೆಷ್ಟೋ ವರ್ಷಗಳಿಂದಲೂ ಚಿನ್ನಾಭರಣ ಕೊಳ್ಳಲೆಂದೇ ಹಣವನ್ನು ಕೂಡಿಟ್ಟಿರುತ್ತೀರಿ. ಚಿನ್ನದ ದರ ಇಳಿಕೆಯತ್ತ ಸಾಗಲು ಕಾಯುತ್ತಿರುತ್ತೀರಿ. ಕೇವಲ ಆಭರವನ್ನು ಅಲಂಕಾರಕ್ಕಾಗಿ ತೊಟ್ಟು ಖುಷಿ ಪಡುವುದರ ಕತೆಗೆ ಕಷ್ಟ ಕಾಲದಲ್ಲೆ ಸಹಾಯವಾಗುತ್ತದೆ ಎಂಬ ಭರವಸೆಯೂ ಇದೆ. ಹಾಗಾಗಿಯೇ ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಕುರಿತಾಗಿ ಹೆಚ್ಚು ಕುತೂಹಲ ಮೂಡುತ್ತದೆ.

ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,990 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನಕ್ಕೆ 4,39,900 ರೂಪಾಯಿಗೆ ಇಳಿದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,990 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,79,900 ರೂಪಾಯಿಗೆ ಕುಸಿತ ಕಂಡಿದೆ. ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿ ಇದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,290 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,42,900 ರೂಪಾಯಿಗೆ ಕುಸಿತ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,290 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,82,900 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೆಜಿ ಬೆಳ್ಳಿ ಬೆಲೆ 73,100 ರೂಪಾಯಿ ಇದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,140 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,61,400 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,330 ರೂಪಾಯಿಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರದಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದ್ದು 5,03,300 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ಕೆಜಿ ಬೆಳ್ಳೆ ಬೆಲೆ 67,600 ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,220 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನಕ್ಕೆ 4,62,200 ರೂಪಾಯಿ ದಾಖಲಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,220 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,72,200 ರೂಪಾಯಿ ಇದೆ. ಹಾಗೂ ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿ ಇದೆ. ಒಟ್ಟಾರೆಯಾಗಿ ಸಮಾರು ಎಲ್ಲಾ ಪ್ರಮುಖ ನಗರಗಳಲ್ಲಿಯೂ ಚಿನ್ನದ ದರ ಇಳಿಕೆ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ಇದನ್ನೂ ಓದಿ:

Gold Rate Today: ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​; ಶುಭ ಶುಕ್ರವಾರದಂದು ಚಿನ್ನದ ದರ ಇಳಿಕೆ

Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ

(Gold price dicreased today on 2021 june 20 and silver price check gold rate in Bangalore Delhi Mumbai and your city in kannada)