Gold Silver Rate Today | ಬೆಂಗಳೂರು: ಕಳೆದ ಒಂದು ವಾರದಿಂದ ಗಮನಿಸಿದಾಗ ಚಿನ್ನದ ದರ ದಿನೇ ದಿನೇ ಏರುತ್ತಲೇ ಇತ್ತು. ಇಂದು ( ಬುಧವಾರ, ಜುಲೈ 7) ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಬರೋಬ್ಬರಿ 1,000 ರೂಪಾಯಿ ಏರಿಕೆ ಕಂಡು ಬಂದಿದೆ. ಇದು ಗ್ರಾಹಕರಿಗೆ ಕೊಂಚ ಬೇಸರದ ವಿಚಾರ. ಚಿನ್ನ ಖರೀದಿಸಬೇಕು ಎಂಬ ಆಸೆ ಇರುವುದು ಮಾಮೂಲಿ ವಿಚಾರ. ಜತೆಗೆ ದರ ಇಳಿಕೆಯತ್ತ ಇರಬೇಕು ಎಂಬ ನಿರೀಕ್ಷೆಯೂ ಸಹಜ. ಆದರೆ ಚಿನ್ನಾಭರಣದ ಬೆಲೆ ಸಾಮಾನ್ಯವಾಗಿ ಏರಿಳಿತ ಕಾಣುತ್ತಲೇ ಇರುತ್ತದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬೇಕು ಎಂದೆನಿಸಿದರೆ ಖರೀದಿಸುವ ಕುರಿತಾಗಿ ಯೋಚಿಸಿ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,400 ರೂಪಾಯಿಗೆ ಏರಿಕೆ ಆಗಿದೆ. 100 ರೂಪಾಯಿ ಚಿನ್ನದ ದರ 4,44,000 ರೂಪಾಯಿಗೆ ಏರಿದೆ. ಬರೋಬ್ಬರಿ 900 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ (ಅಪರಂಜಿ ಚಿನ್ನ) 10 ಗ್ರಾಂ ಚಿನ್ನದ ದರ 48,440 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,84,400ರೂಪಾಯಿಗೆ ಹೆಚ್ಚಳವಾಗಿದೆ. ಸರಿಸುಮಾರು 1,000 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರದಲ್ಲಿಯೂ ಸಹ ಕೊಚ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿ ಬೆಲೆ 70,600 ರೂಪಾಯಿ ನಿಗದಿ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,200 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,52,000 ರೂಪಾಯಿಗೆ ಏರಿಕೆ ಆಗಿದೆ. ಬರೋಬ್ಬರಿ 4,700 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,310 ರೂಪಾಯಿ ಏರಿಕೆ ಆಗಿದೆ. 100 ಗ್ರಾಮ ಚಿನ್ನದ ದರ 5,100 ರೂಪಾಯಿ ಹೆಚ್ಚಳದ ಬಳಿಕ 4,93,100 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆ 75,200 ರೂಪಾಯಿ ಆಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ ಸರಿಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಕೊಂಚವೇ ಏರಿಕೆ ಕಂಡಿದ್ದು, 46,550 ರೂಪಾಯಿ ನಿದಿಯಾಗಿದೆ. 100 ಗ್ರಾಂ ಚಿನ್ನದ ದರ 4,65,500 ರೂಪಾಯಿಗೆ ಏರಿಕೆ ಆಗಿದೆ. ಸರಿಸುಮಾರು 500 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,550 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,05,500 ರೂಪಾಯಿಗೆ ಹೆಚ್ಚಳವಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆ ಆಗಿದೆ. ಆ ಮೂಲಕ ಕೆಜಿ ಬೆಳ್ಳಿಗೆ 70,600 ರೂಪಾಯಿ ನಿಗದಿಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,750 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನದ ದರ 4,67,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,750 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,77,500 ರೂಪಾಯಿ ಆಗಿದೆ. ಸರಿಸುಮಾರು 3,200 ರೂಪಾಯಿ ನಿಗದಿ ಮಾಡಲಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಬಳಿಕ, 70,600 ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:
Gold Rate Today: ಚಿನ್ನದ ದರ ಅಲ್ಪವೇ ಏರಿದೆ ಅಷ್ಟೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವ ಕುರಿತು ಯೋಚಿಸಬಹುದು