AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 2, 3 ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಪಕ್ಕಾ; ಸಚಿವ ಮುರುಗೇಶ್ ನಿರಾಣಿ

ರಾಜ್ಯ ರೈಲ್ವೆ ಖಾತೆ ರಾಜ್ಯಕ್ಕೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ರಮೇಶ್ ಜಿಗಜಿಣಗಿ, ನಾರಾಯಣಸ್ವಾಮಿ, ಉಮೇಶ್ ಜಾಧವ್ ಮೂವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದ ನಿರಾಣಿ, ನಿನ್ನೆ ದೆಹಲಿಗೆ ಹೋಗಿದ್ದು ವೈಯುಕ್ತಿಕ ಕೆಲಸದ ಮೇಲೆ ಎಂದಿದ್ದಾರೆ.

ಕರ್ನಾಟಕದ 2, 3 ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಪಕ್ಕಾ; ಸಚಿವ ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ
TV9 Web
| Updated By: sandhya thejappa|

Updated on: Jul 07, 2021 | 9:21 AM

Share

ಬೆಂಗಳೂರು: ರಾಜ್ಯದ ಎರಡು, ಮೂರು ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಕೆಐಎ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವರು, ಜಾತಿವಾರು ಲೆಕ್ಕಾಚಾರ ಪ್ರಕಾರ ಲಿಂಗಾಯತರಿಗೆ ಒಂದು, ಪರಿಶಿಷ್ಟ ಜಾತಿಗೆ ಒಂದು ಪಕ್ಕಾ ಆಗಿದೆ. ಮತ್ತೊಂದು ಯಾರಿಗೆ ಕೊಡ್ತಾರೋ ನೋಡಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯ ರೈಲ್ವೆ ಖಾತೆ ರಾಜ್ಯಕ್ಕೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ರಮೇಶ್ ಜಿಗಜಿಣಗಿ, ನಾರಾಯಣಸ್ವಾಮಿ, ಉಮೇಶ್ ಜಾಧವ್ ಮೂವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದ ನಿರಾಣಿ, ನಿನ್ನೆ ದೆಹಲಿಗೆ ಹೋಗಿದ್ದು ವೈಯುಕ್ತಿಕ ಕೆಲಸದ ಮೇಲೆ ಎಂದಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ಕರ್ನಾಟಕದ ಕೆಲ ಸಂಸದರು ದೆಹಲಿಯಲ್ಲಿದ್ದಾರೆ. ಬಿಜೆಪಿ ಸಂಸದರಾದ ಆನೇಕಲ್ ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ, ಉಮೇಶ್ ಜಾಧವ್, ಶೋಭಾ ಕರಂದ್ಲಾಜೆ ದೆಹಲಿಗೆ ತೆರಳಿದ್ದಾರೆ. ಇವರಲ್ಲಿ ಯಾಱರಿಗೆ ಸ್ಥಾನ ಸಿಗುತ್ತೆ ಎಂಬ ಕುತೂಹಲ ಮೂಡಿದೆ.

ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದು ಇಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕೇಂದ್ರ ಸಂಪುಟ ಸಭೆಯನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ರಾಜ್ಯದ ಕೆಲ ಸಂಸದರು ದೆಹಲಿಗೆ ತಲುಪಿದ್ದಾರೆ. ರದ್ದಾದ ಸಭೆ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ

ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದು

ಮೋದಿ ಸಂಪುಟಕ್ಕೆ ಯುವಶಕ್ತಿ: ಬುಧವಾರ ಸಂಜೆ 5.30ಕ್ಕೆ ಸಂಪುಟ ಪುನಾರಚನೆಗೆ ಮುಹೂರ್ತ

(Murugesh Nirani said that 2 and 3 MPs of Karnataka could get a Union Cabinet post)