ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಇಂದು ಬುಧವಾರವೂ ಮುಂದುವರೆದಿದ್ದು ಚಿನ್ನದ ಆಭರಣದಲ್ಲಿ ದರ ಏರಿಕೆ ಕಂಡಿದೆ. ಆಯಾ ದೇಶದ ಆಭರಣದ ಬೇಡಿಕೆ ತಕ್ಕಂತೆ ದರ ವ್ಯತ್ಯಾಸವಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ಬೇಡಿಕೆ ಹೇಗಿದೆ? ಜತೆಗೆ ದರ ವಿವರದ ಕುರಿತಾಗಿ ತಿಳಿಯೋಣ. ಕಳೆದ ವಾರಗಳಿಂದ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನವನ್ನು ಗಮನಿಸಿದರೆ ಪ್ರತಿ ದಿನವೂ ಚಿನ್ನದ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಕಳೆದ ಮೂರು ತಿಂಗಳ ದರ ಪರಿಶೀಲನೆಯಲ್ಲಿ ಮೇ ತಿಂಗಳಿನಲ್ಲಿ ಗರಿಷ್ಠ ಮಟ್ಟ ತಲುಪಿದೆ. ಈ ಮೂಲಕ ಆಭರಣ ಪ್ರಿಯರಿಗೆ ನಿರಾಸೆ ಉಂಟಾಗಿದೆ.
ಚಿನ್ನದ ದರ ಇಳಿಕೆಯತ್ತ ಮುಖ ಮಾಡುವುದು ಯಾವಾಗ? ಎಂಬುದು ಚಿನ್ನ ಪ್ರಿಯರ ಎದುರಿರುವ ಪ್ರಶ್ನೆ. ಬೆಲೆ ಇಳಿಕೆಯತ್ತ ಸಾಗುವುದನ್ನೇ ಗ್ರಾಹಕರು ಕಾಯುತ್ತ ಕುಳಿತಿರುವುದಂತೂ ಸತ್ಯ. ಹಾಗಿದ್ದಾಗ ಇಂದಿನ ದರ ವಿವರದ ಕುರಿತು ಗಮನಿಸೋಣ. ನೀವು ಕೂಡಿಟ್ಟು ಬಂದಿದ್ದ ಹಣಕ್ಕೆ ಚಿನ್ನ ಕೊಳ್ಳಬಹುದು ಎಂದೆನಿಸಿದರೆ ಆ ಕುರಿತು ಯೋಚಿಸಬಹುದು.
ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ಬೆಂಗಳೂರು ನಗರದಲ್ಲಿ ನಿನ್ನೆ(ಮಂಗಳವಾರ) 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,150 ರೂಪಾಯಿ ಇತ್ತು. ಇಂದು(ಬುಧವಾರ) ಸರಿಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡಿದೆ. ಈ ಮೂಲಕ ದರ 45,450 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,260 ರೂಪಾಯಿ ಇತ್ತು. ಇಂದು 330 ರೂಪಾಯಿ ಏರಿಕೆಯ ಬಳಿಕ 49,590 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ನಿನ್ನೆ 45,550 ರೂಪಾಯಿ ಇದ್ದ ಚಿನ್ನದ ದರ ಇಂದು 45,750 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,690 ರೂಪಾಯಿ ಇದ್ದು, ಇಂದು 210 ರೂಪಾಯಿ ದರ ಏರಿಕೆಯ ಬಳಿಕ 49,900 ರೂಪಾಯಿ ಆಗಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 46,500 ರೂಪಾಯಿ ಇತ್ತು. ಇಂದು 310 ರೂಪಾಯಿ ದರ ಏರಿಕೆಯ ಬಳಿಕ 46,810 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 50,500 ರೂಪಾಯಿ ಇತ್ತು. 210 ರೂಪಾಯಿ ಏರಿಕೆಯ ಬಳಿಕ ಇಂದು 50,710 ರೂಪಾಯಿ ಆಗಿದೆ.
ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,150 ರೂಪಾಯಿ ಇದ್ದು, ಇಂದು 300 ರೂಪಾಯಿ ದರ ಏರಿಕೆಯ ಬಳಿಕ 45,450 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,260 ರೂಪಾಯಿಯಿಂದ 49,590 ರೂಪಾಯಿಗೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,640 ರೂಪಾಯಿ ಇದ್ದು ಇಂದು 45,650 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,640 ರೂಪಾಯಿಯಿಂದ 46,650 ರೂಪಾಯಿಗೆ ಹೆಚ್ಚಳವಾಗಿದೆ.
ವಿವಿಧ ನಗರಗಳಲ್ಲಿನ ಬೆಳ್ಳಿ ದರ ಮಾಹಿತಿ
ವಾಣಿಜ್ಯ ನಗರಿ ಮುಂಬೈನಲ್ಲಿ 1ಕೆಜಿ ಬೆಳ್ಳಿ ದರ 1,000 ರೂಪಾಯಿ ಕುಸಿತದಿಂದ 73,400 ರೂಪಾಯಿಗೆ ಇಳಿಕೆಯಾಗಿದೆ. ಹೈದರಾಬಾದ್ನಲ್ಲಿ ಸ್ಥಿರತೆ ಕಾಪಾಡಿಕೊಂಡ ಬೆಳ್ಳಿ ದರ 1ಕೆಜಿಗೆ 78,500 ರೂಪಾಯಿ ಹೊಂದಿದೆ. ದೆಹಲಿಯಲ್ಲಿ 1,000 ರೂಪಾಯಿ ಇಳಿಕೆಯ ಬಳಿಕ 1ಕೆಜಿ ಬೆಳ್ಳಿ ದರ 73,000 ರೂಪಾಯಿ ಆಗಿದೆ. ಚೆನ್ನೈನಲ್ಲಿ 1ಕೆಜಿ ಬೆಳ್ಳಿ ದರ ಇಂದು 78,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ದರ ಕುಸಿತ ಕಂಡಿದ್ದು, 1,000 ರೂಪಾಯಿ ಇಳಿಕೆಯ ಬಳಿಕ 1ಕೆಜಿ ಬೆಳ್ಳಿ 73,000 ರೂಪಾಯಿಗೆ ಇಳಿದಿದೆ.