Gold Silver Rate Today | ಬೆಂಗಳೂರು: ಜೂನ್ ತಿಂಗಳ ಎರಡನೇ ವಾರದಿಂದ ಚಿನ್ನದ ದರ(Gold Price) ಇಳಿಕೆ ಕಾಣಲು ಪ್ರಾರಂಭಿಸಿತು. ಕಳೆದ ಒಂದು ವಾರದಿಂದ ಸತತವಾಗಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತ್ತು. ಇಂದು (ಬುಧವಾರ, ಜೂನ್ 23) ಚಿನ್ನದ ದರ ಕೊಂಚ ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿಯೂ(Silver Price) ಸಹ ಏರಿಕೆ ಕಂಡು ಬಂದಿದೆ.
ಚಿನ್ನಾಭರಣ ಕೊಳ್ಳಲೆಂದು ಹಣವನ್ನೇನೋ ಕೂಡಿಟ್ಟಿರುತ್ತೇವೆ. ಆದರೆ ಚಿನ್ನದ ದರ ಇಳಿಕೆಯತ್ತ ಸಾಗುವುದು ಯಾವಾಗ ಎಂಬ ಕುತೂಹಲ ಇದ್ದೇ ಇರುತ್ತದೆ. ಕೆಲವರು ಸಮಾರಂಭಗಳಿಗೆ ಉಡುಗೊರೆಯಾಗಿ ಚಿನ್ನವನ್ನು ಕೊಡಲು ಬಯಸುತ್ತಾರೆ. ಇನ್ನು ಕೆಲವರು ತಮ್ಮ ಸ್ನೇಹಿತರ ಹುಟ್ಟುಹಬ್ಬಕ್ಕೆ ಆಭರಣಗಳನ್ನು ಗಿಫ್ಟ್ ಕೊಡವ ಆಸೆ ಹೊಂದಿರಬಹುದು. ಇಲ್ಲವೇ, ತಾನು ದುಡಿದ ಹಣದಲ್ಲಿ ನಮ್ಮನ್ನು ಹೆತ್ತ ತಂದೆ-ತಾಯಿಗೆ ಚಿನ್ನದ ಹಾರವನ್ನು ನೀಡುವ ಆಸೆಯಿರಬಹುದು. ಹೀಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ? ನೀವು ಕೂಡಿಟ್ಟ ಹಣಕ್ಕೆ ಚಿನ್ನವನ್ನು ಖರೀದಿ ಮಾಡಬಹುದೇ ಎಂಬುದರ ಕುರಿತಾಗಿ ಯೋಚಿಸಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 200 ರೂಪಾಯಿ ಏರಿಕೆ ಕಂಡಿದೆ. ಆ ಮೂಲಕ 44,100 ರೂಪಾಯಿ ನಿದಿಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರದಲ್ಲಿ 2,000 ರೂಪಾಯಿ ಏರಿಕೆ ಕಂಡು ಬಂದಿದ್ದು, 4,41,000 ರೂಪಾಯಿ ಏರಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆ ಕಂಡು ಬಂದಿದ್ದು, 67,800 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,400 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನದ ದರ 4,44,000 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,440 ರೂಪಾಯಿಗೆ ಏರಿಕೆಯಾಗಿದ್ದು 100 ಗ್ರಾಂ ಚಿನ್ನದ ದರ 4,84,400 ರೂಪಾಯಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಇಳಿಕೆ ಕಂಡು ಬಂದಿದ್ದು, 100 ರೂಪಾಯಿ ಇಳಿಕೆ ಕಂಡ ಕೆಜಿ ಬೆಳ್ಳಿ ಬೆಲೆಗೆ 73,000 ರೂಪಾಯಿ ನಿಗದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46.250 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,62,500 ರೂಪಾಯಿಗೆ ಹೆಚ್ಚಳವಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,340 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 5,03,400 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 400 ರೂಪಾಯಿಯಷ್ಟು ಏರಿಕೆ ಕಂಡುಬಂದಿದೆ. ಕೆಜಿ ಬೆಳ್ಳಿ ಬೆಲೆ 67,800 ರೂಪಾಯಿಗೆ ಏರಿಕೆಯಾಗಿದೆ. 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ದರ ಅಲ್ಪ ಇಳಿಕೆ ಕಂಡು ಬಂದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,120 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನಕ್ಕೆ 4,71,200 ರೂಪಾಯಿ ನಿಗದಿಯಾಗಿದೆ. 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 67,800 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡುಬಂದಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಆಭರಣದ ಬೆಲೆ ವಿವರ ಇಲ್ಲಿದೆ
Gold Rate Today: ವೀಕೆಂಡ್ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ