Covid 19 Karnataka Update: ಕರ್ನಾಟಕದಲ್ಲಿ 3709 ಮಂದಿಗೆ ಕೊರೊನಾ ಸೋಂಕು, 139 ಸಾವು
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರಕ್ಕಿಂತಲೂ ಕಡಿಮೆಯಾಗಿರುವುದು, ಬೆಂಗಳೂರಿನ ಸೋಂಕಿತರ ಸಂಖ್ಯೆ ಸಾವಿರದ ಗಡಿಯಿಂದ ಕೆಳಗಿಳಿದಿರುವುದು ಉಲ್ಲೇಖನೀಯ ಸಂಗತಿ.
ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಒಟ್ಟು 3,709 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 139 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 803 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 26 ಜನರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರಕ್ಕಿಂತಲೂ ಕಡಿಮೆಯಾಗಿರುವುದು, ಬೆಂಗಳೂರಿನ ಸೋಂಕಿತರ ಸಂಖ್ಯೆ ಸಾವಿರದ ಗಡಿಯಿಂದ ಕೆಳಗಿಳಿದಿರುವುದು ಉಲ್ಲೇಖನೀಯ ಸಂಗತಿ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,150,29ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 26,622,50 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಸೋಂಕಿನಿಂತ ಮೃತಪಟ್ಟವರ ಒಟ್ಟು ಸಂಖ್ಯೆಯು 34,164ಕ್ಕೆ ಏರಿಕೆಯಾಗಿದೆ. 1,18,592 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 803 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯು 12,07,096ಕ್ಕೆ ಏರಿಕೆಯಾಗಿದೆ. ಈ ಪೈಕಿ 11,222,52 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 26 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಸೋಂಕಿನಿಂದ ಈವರೆಗೆ 15,499 ಜನರು ಸಾವನ್ನಪ್ಪಿದ್ದಾರೆ. 69,344 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 3709 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 803 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬಾಗಲಕೋಟೆ 7, ಬಳ್ಳಾರಿ 44, ಬೆಳಗಾವಿ 134, ಬೆಂಗಳೂರು ಗ್ರಾಮಾಂತರ 103, ಬೀದರ್ 6, ಚಾಮರಾಜನಗರ 52, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 163, ಚಿತ್ರದುರ್ಗ 77, ದಕ್ಷಿಣ ಕನ್ನಡ 374, ದಾವಣಗೆರೆ 90, ಧಾರವಾಡ 30, ಗದಗ 21, ಹಾಸನ 309, ಹಾವೇರಿ 13, ಕಲಬುರಗಿ 14, ಕೊಡಗು 161, ಕೋಲಾರ 65, ಕೊಪ್ಪಳ 25, ಮಂಡ್ಯ 124, ಮೈಸೂರು 486, ರಾಯಚೂರು 15, ರಾಮನಗರ 20, ಶಿವಮೊಗ್ಗ 169, ತುಮಕೂರು 144, ಉಡುಪಿ 81, ಉತ್ತರ ಕನ್ನಡ 114, ವಿಜಯಪುರ 16, ಯಾದಗಿ ಜಿಲ್ಲೆಯಲ್ಲಿ 11 ಪ್ರಕರಣಗಳು ಪತ್ತೆಯಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 139 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ 26, ದಕ್ಷಿಣ ಕನ್ನಡ 15, ಮೈಸೂರು 11, ಕೋಲಾರ, ದಾವಣಗೆರೆ ತಲಾ 9, ಮಂಡ್ಯ 8, ಧಾರವಾಡ, ಹಾಸನ, ಬಳ್ಳಾರಿಯಲ್ಲಿ ತಲಾ 7, ಉತ್ತರ ಕನ್ನಡ, ತುಮಕೂರು, ಬೆಳಗಾವಿಯಲ್ಲಿ ತಲಾ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ತಲಾ 3, ಚಿತ್ರದುರ್ಗ, ಹಾವೇರಿ, ಕೊಡಗು, ವಿಜಯಪುರ, ಉಡುಪಿ ತಲಾ ಇಬ್ಬರು, ರಾಯಚೂರು, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34,164 ಜನರು ಸಾವನ್ನಪ್ಪಿದ್ದಾರೆ.
ಇಂದಿನ 22/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/qcD25Qtbv3
@CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/yImgjUnkB8
— K’taka Health Dept (@DHFWKA) June 22, 2021
(Coronavirus Numbers Karnataka 3709 people infected 139 died of covid on june 22)
ಇದನ್ನೂ ಓದಿ: ಈಗಲೇ ಶಾಲೆಗಳ ಆರಂಭದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಂಭವ: ಟಾಸ್ಕ್ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್
ಇದನ್ನೂ ಓದಿ: ಸೂಪರ್ ಸೋಮವಾರ, ಕೇವಲ 24 ಗಂಟೆಯಲ್ಲಿ 86 ಲಕ್ಷ ಡೋಸ್ ಕೊರೊನಾ ಲಸಿಕೆ ವಿಶ್ವದ ಯಾವುದೇ ದೇಶದಲ್ಲೂ ನೀಡಿಲ್ಲ
Published On - 8:55 pm, Tue, 22 June 21