Gold Silver Rate Today | ಬೆಂಗಳೂರು: ಚಿನ್ನ ಖರೀದಿಸುವ (Gold Rate) ಆಸೆ ಇದ್ದಾಗ ದರ ಎಷ್ಟಿದೆ ಎಂಬುದರ ಕುರಿತಾಗಿ ಕುತೂಹಲ ಮೂಡುವುದು ಸಹಜ. ಜತೆಗೆ ಚಿನ್ನದಂತಹ ಅಷ್ಟು ದುಬಾರಿ ವಸ್ತುವನ್ನು ಕೊಳ್ಳುವಾಗ ದರ ವಿವರದ ಜತೆಗೆ ದಿನವನ್ನೂ ನೋಡುವ ಸಂಪ್ರದಾಯ ಭಾರತೀಯರಲ್ಲಿದೆ. ಹಾಗಿದ್ದಾಗ ಇಂದು (ಗುರವಾರ, ಜೂನ್ 24) ಚಿನ್ನ, ಬೆಳ್ಳಿ ಬೆಲೆ (Silver Rate) ಎಷ್ಟಿದೆ ಎಂಬುದನ್ನು ನೋಡೋಣ.
ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಚಿನ್ನ ಖರೀದಿಸುವ ಆಸೆ ಎಲ್ಲರಿಗೂ ಇರುತ್ತದೆ. ಚಿನ್ನ ಖರೀದಿ ಮಾಡಲೆಂದು ಅದೆಷ್ಟೋ ವರ್ಷಗಳಿಂದ ಚಿನ್ನವನ್ನು ಕೂಡಿಡುತ್ತಾ ಬಂದಿರುತ್ತೇವೆ. ನಾವು ಕೂಡಿಟ್ಟಿರುವ ಹಣಕ್ಕೆ ನಾವು ಆಸೆ ಪಟ್ಟ ಚಿನ್ನದ ಹಾರವೋ.. ಬಳೆಗಳೋ.. ಅಥವಾ ಉಂಗುರವನ್ನು ಖರೀದಿ ಮಾಡಬಹುದು ಅಂದನಿಸಿದಾಗ ಚಿನ್ನ ಖರೀದಿಸುತ್ತೇವೆ. ಹಾಗಿರುವಾಗ ನೀವು ಕೂಡಿಟ್ಟ ಹಣಕ್ಕೆ ಚಿನ್ನವನ್ನು ಖರೀದಿಸಬಹುದೇ? ಎಂಬುದನ್ನು ಯೋಚಿಸಿ. ದರ ವಿವರವನ್ನು ಗಮನಿಸಿ.
ಬೆಂಗಳೂರು ನಗರದಲ್ಲಿ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆ ಮೂಲಕ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,100 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,41,000 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,81,100 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿ ಬೆಲೆ 67,900 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,550 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,45,500 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,600 ರೂಪಾಯಿಗೆ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 4,86,000 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,600 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 400 ರೂಪಾಯಿ ಏರಿಕೆ ಬಳಿಕ 73,400 ರೂಪಾಯಿ ನಿದಿಯಾಗಿದೆ.
ದೆಹಲಿಯಲ್ಲಿ ಇಂದು ಚಿನ್ನದ ಬೆಲೆ ಸ್ಥಿರತೆಯನ್ನು ಕಾಪಾಡಿಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,250 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,62,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,340 ರೂಪಾಯಿ ಇದ್ದು, 100 ಗ್ರಾಂ ಚಿನ್ನದ ದರ 5,03,400 ರೂಪಾಯಿ ಇದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,150 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,61,500 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,150 ರೂಪಾಯಿಗೆ ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ 4,71,500 ರೂಪಾಯಿಗೆ ಏರಿಕೆಯಾಗಿದೆ. 300 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಒಟ್ಟಾರೆಯಾಗಿ ಕೆಲವು ನಗರಗಳಲ್ಲಿ ಚಿನ್ನದ ದರ ಏರಿಕೆ ಕಂಡು ಬಂದರೆ ಇನ್ನು ಕೆಲವು ನಗರಗಳಲ್ಲಿ ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಬೆಳ್ಳಿ ದರದಲ್ಲಿಯೂ ಪ್ರಮುಖ ಎಲ್ಲಾ ನಗರಗಳಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಆಭರಣದ ಬೆಲೆ ವಿವರ ಇಲ್ಲಿದೆ
Gold Rate Today: ವೀಕೆಂಡ್ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ
Published On - 8:28 am, Thu, 24 June 21