ಬೆಂಗಳೂರು: ಕಳೆದ ವಾರಗಳಿಂದ ನಿರಂತರವಾಗಿ ಚಿನ್ನದ ದರ ಏರುತ್ತಲೇ ಇದೆ. ಇಂದು(ಜೂನ್ 3) ದೈನಂದಿನ ಪರಿಶೀಲನೆಯಲ್ಲಿ ಗಮನಿಸಿದಾಗ ಕೆಲವು ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಸ್ಥಿರವಾಗಿದ್ದರೆ ಇನ್ನು ಕೆಲವೆಡೆ ಆಭರಣಗಳ ಬೆಲೆ ಹೆಚ್ಚಳವಾಗಿದೆ. ಹಾಗಿದ್ದಲ್ಲಿ ಇಂದಿನ ಮಾರುಕಟ್ಟೆಯಲ್ಲಿ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ವಿವರ ತಿಳಿಯೋಣ.
ಕಳೆದ ಮೇ ತಿಂಗಳಿನ ಕೊನೆಯ ವಾರದಲ್ಲಿ ಚಿನ್ನದ ದರ ನಿರಂತರವಾಗಿ ಏರಿಕೆ ಕಂಡಿತ್ತು. ಹೊಸ ತಿಂಗಳ ಪ್ರಾರಂಭದಿಂದಾದರೂ ಆಭರಣಗಳ ಬೆಲೆ ಇಳಿಕೆಯತ್ತ ಸಾಗಬಹುದು ಎಂದು ಗ್ರಾಹಕರು ನಿರೀಕ್ಷೆಯಲ್ಲಿದ್ದರು. ಆದರೀಗ ಜೂನ್ ತಿಂಗಳ ಆರಂಭದ ದಿನಗಳಲ್ಲಿ ಚಿನ್ನ ದರ ಹೆಚ್ಚಾಗುತ್ತಲೇ ಇದೆ. ಇದು ಗ್ರಾಹಕರಿಗೆ ನಿರಾಸೆ ಮೂಡಿಸಿದೆ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,100 ರೂಪಾಯಿ ಇದ್ದು ನಿನ್ನೆಯ ದರವನ್ನೇ ಕಾಯ್ದಿರಿಸಲಾಗಿದೆ. ಹಾಗೆಯೇ 24 ಕ್ಯಾರೆಟ್ 10ಗ್ರಾಂ ಚಿನ್ನಕ್ಕೆ 50,300 ರೂಪಾಯಿ ನಿಗದಿ ಮಾಡಲಾಗಿದೆ. ಬೆಳ್ಳಿ ದರದಲ್ಲಿಯೂ ಕೊಂಚ ಏರಿಕೆ ಕಂಡು ಬಂದಿದೆ. ಈ ಮೂಲಕ 1ಕೆಜಿ ಬೆಳ್ಳಿಗೆ 72,900 ರೂಪಾಯಿ ನಿಗದಿ ಮಾಡಲಾಗಿದೆ. ಸರಿ ಸುಮಾರು 1,000 ರೂ.ನಷ್ಟು ಹೆಚ್ಚಳವಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,480 ರೂಪಅಯಿಗೆ ಏರಿಕೆ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,710 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು 1ಕೆಜಿ ಬೆಳ್ಳಿಗೆ 76,500 ರೂಪಾಯಿ ನಿಗದಿ ಮಾಡಲಾಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಸುಮಾರು 100 ರೂ. ಅಂತರದಲ್ಲಿ ಇಳಿಕೆ ಕಂಡು ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,010 ರೂಪಅಯಿ ಆಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,260 ರೂಪಾಯಿಗೆ ಏರಿಕೆ ಆಗಿದೆ. ಅದೇರೀತಿ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು 1ಕೆಜಿ ಬೆಳ್ಳಿ 1,000 ರೂ. ಹೆಚ್ಚಳದ ಬಳಿಕ 72,900 ರೂಪಾಯಿ ನಿಗದಿಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 48,240 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,240 ರೂಪಾಯಿಗೆ ಏರಿಕೆ ಆಗಿದೆ. ಇನ್ನು 1ಕೆಜಿ ಬೆಳ್ಳಿ ದರ 72,900 ರೂಪಾಯಿ ಆಗಿದೆ. ಸರಿಸುಮಾರು 1,000 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದೇಶದ ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಏರಿಕೆ ಕಂಡು ಬಂದಿದೆ. ಇನ್ನು ಕೆಲವೆಡೆ ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿದೆ. ಅಂತಾಷ್ಟ್ರೀಯ ಟ್ರೆಂಡ್ ಹಾಗೂ ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿ ಆಯಾ ದಿನದ ಚಿನ್ನ ಮತ್ತು ಬೆಳ್ಳಿ ದರ ನಿರ್ಧಾರವಾಗುತ್ತದೆ. ಆಯಾ ರಾಜ್ಯಗಳಲ್ಲಿನ ಬೇಡಿಕೆಗೆ ಅನುಸಾರವಾಗಿಯೂ ಆಭರಣಗಳ ಬೆಲೆ ನಿರ್ಧಾರವಾಗಬಹುದು.
ಇದನ್ನೂ ಓದಿ: