ಬೆಂಗಳೂರು: ಕಳೆದೆಡರು ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿ ದರ ಏರುತ್ತಲೇ ಇದೆ. ಇಂದು (ಜೂನ್ 4) ಮತ್ತೆ ಆಭರಣಗಳ ಬೆಲೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,200 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,400 ರೂಪಾಯಿಗೆ ಏರಿಕೆ ಆಗಿದೆ. ಚಿನ್ನಕ್ಕೆಂದೇ ಹಣ ಕೂಡಿಟ್ಟು ಚಿನ್ನ ಖರೀಸಿದಬೇಕು ಎಂಬ ಆಸೆಯುಳ್ಳವರು ವಿವಿಧ ನಗರಗಳಲ್ಲಿನ ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬುದರ ಕುರಿತಾಗಿ ಪರಿಶೀಲಿಸಿ.
ಸಾಮಾನ್ಯವಾಗಿ ಎಲ್ಲರಿಗೂ ಆಭರಣಗಳೆಂದರೆ ಇಷ್ಟ. ಯಾವುದೇ ಒಂದು ವಯಸ್ಸಿಗೆ ಸೀಮಿತವಾಗದೇ ಎಲ್ಲರಿಗೂ ವ್ಯಾಮೋಹವಿರುವ ಆಭರಣ ಚಿನ್ನ. ಅದರಲ್ಲಿಯೂ ಹೂಡಿಕೆ ಮಾಡುವ ಪದ್ಧತಿ ಈಗಿನದ್ದಲ್ಲ. ಮೊದಲಿನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಇದೆ. ಕೇವಲ ಚಿನ್ನ ತೊಟ್ಟು ಸಂಭ್ರಮಿಸುವುದರ ಹೊರತಾಗಿಯೂ ಕಷ್ಟಕಾಲದಲ್ಲಿ ನೆರವಾಗುವುದು ಎಂಬ ಭರವಸೆಯಿಂದ ಅದೆಷ್ಟೋ ಜನರು ಚಿನ್ನ ಮೇಲೆ ಹೂಡಿಕೆ ಮಾಡುತ್ತಾರೆ.
ಕೊರೊನಾ ಹಾವಳಿಯಿಂದಾಗಿ ಅಂಗಡಿಗಳೆಲ್ಲ ಬಂದ್ ಆಗಿರುವುದರಿಂದ ಆಭರಣಗಳಲ್ಲಿ ಬೇಡಿಕೆ ಕಡಿಮೆ ಆಗಿದೆ. ಹೀಗಿರುವಾಗ ಸಹಜವಾಗಿಯೇ ಪೂರೈಕೆಯಲ್ಲಿಯೂ ಕಡಿಮೆ ಕಾಣಬಹುದು. ಹಾಗಾಗಿ ಚಿನ್ನದ ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿತು.
ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ಸಾಮಾನ್ಯವಾಗಿ ಎಲ್ಲಾ ನಗರದಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,550 ರೂ. ನಿಗದಿಮಾಡಲಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ 50,790 ರೂಪಾಯಿ ದಾಖಲಾಗಿದೆ. ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, 1ಕೆಜಿ ಬೆಳ್ಳಿಗೆ 7,500 ರೂಪಾಯಿ ನಿಗದಿ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,100 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,350 ರೂಪಾಯಿ ದಾಖಲಾಗಿದೆ. ಹಾಗೆಯೇ 1ಕೆಜಿ ಬೆಳ್ಳಿ ದರ 72,000 ರೂಪಾಯಿಗೆ ಏರಿಕೆಯಾಗಿದೆ.
ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,200 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,400 ರೂಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ದರವೂ ಜಿಗಿತ ಕಂಡಿದ್ದು 1ಕೆಜಿ ಬೆಳ್ಳಿ 900 ರೂಪಾಯಿ ಏರಿಕೆ ಬಳಿಕ 77,500 ರೂಪಾಯಿ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದೇಶದ ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಏರಿಕೆ ಕಂಡು ಬಂದಿದೆ. ಅಂತಾಷ್ಟ್ರೀಯ ಟ್ರೆಂಡ್ ಹಾಗೂ ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿ ಆಯಾ ದಿನದ ಚಿನ್ನ ಮತ್ತು ಬೆಳ್ಳಿ ದರ ನಿರ್ಧಾರವಾಗುತ್ತದೆ. ಆಯಾ ರಾಜ್ಯಗಳಲ್ಲಿನ ಬೇಡಿಕೆಗೆ ಅನುಸಾರವಾಗಿಯೂ ಆಭರಣಗಳ ಬೆಲೆ ನಿರ್ಧಾರವಾಗಬಹುದು.
ಇದನ್ನೂ ಓದಿ:
Gold Silver Rate Today: ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
Published On - 8:34 am, Fri, 4 June 21