ದೇಶದಲ್ಲೇ ಅತಿ ಹೆಚ್ಚು ಲಸಿಕೆ ಪಡೆದ ಬೆಂಗಳೂರಿಗರು; ಲಸಿಕೆ ಅಭಿಯಾನದಲ್ಲಿ ದೆಹಲಿ, ಮುಂಬೈ ನಗರಗಳನ್ನು ಹಿಂದಿಕ್ಕಿದ ರಾಜ್ಯ ರಾಜಧಾನಿ

ಇವರೆಗೆ ಬೆಂಗಳೂರಿನ 28.3 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಈ ಲಸಿಕೆ ಅಭಿಯಾನದಲ್ಲಿ ದೆಹಲಿ, ಮುಂಬೈ ನಗರಗಳನ್ನು ಸಿಲಿಕಾನ್​ ಸಿಟಿ ಹಿಂದಿಕ್ಕಿದ್ದು, ಆ ಮೂಲಕ ಬೆಂಗಳೂರು ಹೆಚ್ಚು ಕೊವಿಡ್ ಲಸಿಕೆ ನೀಡಿದ ಹೆಮ್ಮೆಗೆ ಪಾತ್ರವಾಗಿದೆ.

ದೇಶದಲ್ಲೇ ಅತಿ ಹೆಚ್ಚು ಲಸಿಕೆ ಪಡೆದ ಬೆಂಗಳೂರಿಗರು; ಲಸಿಕೆ ಅಭಿಯಾನದಲ್ಲಿ ದೆಹಲಿ, ಮುಂಬೈ ನಗರಗಳನ್ನು ಹಿಂದಿಕ್ಕಿದ ರಾಜ್ಯ ರಾಜಧಾನಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jun 04, 2021 | 11:08 AM

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಈಗಾಗಲೇ ಲಸಿಕೆ ಅಭಿಯಾನ ಆರಂಭವಾಗಿದೆ. ಅದರಂತೆ ದೇಶದಾದ್ಯಂತ ಲಸಿಕೆ ವಿತರಣೆಯಾಗುತ್ತಿದೆ. ಇನ್ನು ಲಸಿಕೆ ಪಡೆಯಲು ಅನುಕೂಲವಾಗವ ನಿಟ್ಟಿನಲ್ಲಿ ಭಾರತದಲ್ಲಿ ಕೊವಿಡ್ -19 ಲಸಿಕೆ ವಿತರಣೆ ನೋಂದಣಿಗೆಂದು ರೂಪಿಸಿರುವ ಬೆಬ್​ಪೋರ್ಟಲ್ COWIN ಸಾಮರ್ಥ್ಯ ಹೆಚ್ಚಳವಾಗಿದೆ. ಪ್ರತಿದಿನ ಒಂದು ಕೋಟಿ ನೋದಣಿ ಮತ್ತು 50 ಲಸಿಕೆ ವಿತರಣೆ ದಾಖಲಿಸುವ ಸಾಮರ್ಥ್ಯ ಇದೀಗ ಕೋವಿನ್ ವೆಬ್​ಪೋರ್ಟಲ್​ಗೆ ಇದೆ . ಸದ್ಯ ಲಸಿಕೆ ಪಡೆದವರ ಅಂಕಿಅಂಶ ಬಿಡುಗಡೆಯಾಗಿದ್ದು, ಇಡೀ ದೇಶದಲ್ಲಿ ಬೆಂಗಳೂರಿನ ಜನರು ಅತಿಹೆಚ್ಚು ಲಸಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇವರೆಗೆ ಬೆಂಗಳೂರಿನ 28.3 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಈ ಲಸಿಕೆ ಅಭಿಯಾನದಲ್ಲಿ ದೆಹಲಿ, ಮುಂಬೈ ನಗರಗಳನ್ನು ಸಿಲಿಕಾನ್​ ಸಿಟಿ ಹಿಂದಿಕ್ಕಿದ್ದು, ಆ ಮೂಲಕ ಬೆಂಗಳೂರು ಹೆಚ್ಚು ಕೊವಿಡ್ ಲಸಿಕೆ ನೀಡಿದ ಹೆಮ್ಮೆಗೆ ಪಾತ್ರವಾಗಿದೆ. ಇನ್ನು ರಾಜ್ಯದಲ್ಲಿ 197 ಪ್ರಯೋಗಾಲಯಗಳಲ್ಲಿ 3 ಕೋಟಿ‌ಗೂ ಅಧಿಕ ಕೊವಿಡ್ ಟೆಸ್ಟ್ ನಡೆಸಲಾಗಿದೆ.

ಲಸಿಕೆ ಪಡೆದ ನಗರಗಳ ಪಟ್ಟಿ: ಬೆಂಗಳೂರು     28.3 ಲಕ್ಷ ಮುಂಬೈ          27.9ಲಕ್ಷ ಪುಣೆ                 23 ಲಕ್ಷ ಚೆನ್ನೈ              14.28 ಲಕ್ಷ ಕೋಲ್ಕತಾ       14.50 ಲಕ್ಷ

ಜೂನ್​ನಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ 45.09 ಲಕ್ಷ ಡೋಸ್ ಲಸಿಕೆ ನೀಡಿಕೆ ಭರವಸೆ ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ 45.09 ಲಕ್ಷ ಡೋಸ್ ಲಸಿಕೆ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ಸರ್ಕಾರವು ಲಸಿಕಾ ಕಂಪನಿಗಳಿಂದ ನೇರವಾಗಿ 13.71 ಲಕ್ಷ ಡೋಸ್ ಖರೀದಿ ಮಾಡಲಿದೆ. ಜೂನ್ ತಿಂಗಳಲ್ಲಿ ಒಟ್ಟು ಕರ್ನಾಟಕಕ್ಕೆ 58.80 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಕೇಂದ್ರದ ಕೋಟಾದಿಂದ ರಾಜ್ಯಕ್ಕೆ 37.60 ಲಕ್ಷ ಡೋಸ್ ಕೊವಿಶೀಲ್ಡ್, 7.40 ಲಕ್ಷ ಡೋಸ್ ಕೊವ್ಯಾಕ್ಸಿನ್ ಬರಲಿದೆ. ಕರ್ನಾಟಕ ಸರ್ಕಾರದಿಂದ 10.86 ಲಕ್ಷ ಡೋಸ್ ಕೊವಿಶೀಲ್ಡ್, 2.84 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳು ಲಸಿಕಾ ಕೇಂದ್ರಗಳಿಗೆ ತಲುಪಲಿದೆ.

ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗುತ್ತಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ‘ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ. ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ:

ಮೇ 1ರಿಂದ ಮೂರನೇ ಹಂತದ ಕೊವಿಡ್​ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಲಸಿಕೆ ಪಡೆಯುವಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ; ಮತ್ತಷ್ಟು ಸುಲಭವಾಯ್ತು ವ್ಯಾಕ್ಸಿನ್ ಪಡೆಯುವ ಪ್ರಕ್ರಿಯೆ

Published On - 11:02 am, Fri, 4 June 21