ಐಪಿಎಸ್-ಐಎಫ್ಎಸ್ ಅಧಿಕಾರಿ ದಂಪತಿ ಕಾನೂನು ಸಮರ; ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ದೂರು ದಾಖಲಿಸಿದ ವರ್ತಿಕಾ

ಐಪಿಎಸ್-ಐಎಫ್ಎಸ್ ಅಧಿಕಾರಿ ದಂಪತಿ ಕಾನೂನು ಸಮರ; ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ದೂರು ದಾಖಲಿಸಿದ ವರ್ತಿಕಾ
ವರ್ತಿಕಾ ಕಟಿಯಾರ್

ತನ್ನ ಅಧಿಕಾರ ಹಾಗೂ ಪ್ರಭಾವ ಬಳಸಿಕೊಂಡು ಮಗನನ್ನು ನೋಡಲು ಬಿಡುತ್ತಿಲ್ಲವೆಂದು ಭಾರತೀಯ ವಿದೇಶಾಂಗ ಇಲಾಖೆ(ಐಎಫ್ಎಸ್) ಅಧಿಕಾರಿ ನಿತಿನ್ ಸುಭಾಶ್ ರಾಷ್ಟ್ರೀಯ ಮಕ್ಕಳ‌ ರಕ್ಷಣಾ ಆಯೋಗ‌ದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರವೀಣ್ ಸೂದ್ಗೆ ದೂರು ನೀಡಿದ್ದಾರೆ.

TV9kannada Web Team

| Edited By: Ayesha Banu

Jun 04, 2021 | 11:49 AM

ಬೆಂಗಳೂರು: ಐಪಿಎಸ್-ಐಎಫ್ಎಸ್ ಅಧಿಕಾರಿ ದಂಪತಿ ನಡುವೆ ಕಾನೂನು ಸಮರ ಮುಂದುವರೆದಿದೆ. ಬೆಂಗಳೂರಿನಲ್ಲಿ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿರುವ ವರ್ತಿಕಾ ಕಟಿಯಾರ್, ತನ್ನ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ‌ ರಕ್ಷಣಾ ಆಯೋಗ‌ಕ್ಕೆ ವರ್ತಿಕಾ ಪತಿ ದೂರು ನೀಡಿದ್ದಾರೆ. ಅಲ್ಲದೆ ಪ್ರಾಥಮಿಕ ವಿಚಾರಣೆ ನಡೆಸಿ ವರ್ತಿಕಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಜಿಪಿ‌ ಪ್ರವೀಣ್ ಸೂದ್ಗೆ ಆಯೋಗ ಶಿಫಾರಸ್ಸು ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ವರ್ತಿಕಾ ಗಂಡನ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ.

ತನ್ನ ಅಧಿಕಾರ ಹಾಗೂ ಪ್ರಭಾವ ಬಳಸಿಕೊಂಡು ಮಗನನ್ನು ನೋಡಲು ಬಿಡುತ್ತಿಲ್ಲವೆಂದು ಭಾರತೀಯ ವಿದೇಶಾಂಗ ಇಲಾಖೆ(ಐಎಫ್ಎಸ್) ಅಧಿಕಾರಿ ನಿತಿನ್ ಸುಭಾಶ್ ರಾಷ್ಟ್ರೀಯ ಮಕ್ಕಳ‌ ರಕ್ಷಣಾ ಆಯೋಗ‌ದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರವೀಣ್ ಸೂದ್ಗೆ ದೂರು ನೀಡಿದ್ದಾರೆ.

ಗಂಡನ ವಿರುದ್ಧ ಮತ್ತೊಂದು ದೂರು ಕಳೆದ ಫೆಬ್ರವರಿಯಲ್ಲಿ ವರದಕ್ಷಿಣೆ ಕಿರುಕುಳ ಆರೋಪಿಸಿ ವರ್ತಿಕಾ ಕಟಿಯಾರ್, ತಮ್ಮ ಪತಿ ನಿತಿನ್ ಸುಭಾಶ್ ಹಾಗೂ ಕುಟುಂಬಸ್ಥರು ಸೇರಿದಂತೆ 7 ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ದೆಹಲಿ ಪೊಲೀಸರಿಗೆ ಹಸ್ತಾಂತರವಾಗಿತ್ತು. ಈಗ ಮತ್ತೆ ಕಳೆದ ಮೇ 28ರಂದು ವಾಟ್ಸಾಪ್ ಗ್ರೂಪ್ ಕಾಲ್ನಲ್ಲಿ ಆ್ಯಸಿಡ್ ಹಾಕುವುದಾಗಿ ಆ್ಯಸಿಡ್ ದಾಳಿ, ಜೀವ ಬೆದರಿಕೆ, ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ವರ್ತಿಕಾ ಗಂಡನ ಮೇಲೆ ಗಂಭೀರ ಆರೋಪ ಮಾಡಿದ್ದರು.

ಮೇ 29 ರಂದು ಲಾಕ್ಡೌನ್ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಬೆಂಗಳೂರಿನ ಕಚೇರಿಗೆ ಆಗಮಿಸಿ ದೈಹಿಕವಾಗಿ ಹಲ್ಲೆ ಮಾಡುವುದಕ್ಕೆ‌ ಸಂಚು ಮಾಡಲಾಗಿದ್ದು ನನ್ನ ಪೋಷಕರಿಗೆ ಕರೆ ಮಾಡಿ ಮನೆ ವಿಳಾಸ ತಿಳಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಈಗ ಮತ್ತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವರ್ತಿಕಾ ತನ್ನ ಗಂಡನ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಐಎಎಸ್​ vs ಐಎಎಸ್​: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ  

Follow us on

Related Stories

Most Read Stories

Click on your DTH Provider to Add TV9 Kannada