ಮೈಸೂರಿನಲ್ಲಿ ಐಎಎಸ್ vs ಐಎಎಸ್: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ
‘ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಅವರು ಕೊವಿಡ್ ಸಂಬಂಧ ನಡೆಯುತ್ತಿದ್ದ ಸಭೆಗಳಿಗೆ ಗೈರಾಗುತ್ತಿದ್ದರು’ ಎಂದು ರೋಹಿಣಿ ಸಿಂಧೂರಿ ಹೇಳಿದರು.
ಮೈಸೂರು: ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾನಾಗ್ ಗುರುವಾರ ತಮ್ಮ ವಿರುದ್ಧ ಮಾಡಿರುವ ಕಿರುಕುಳದ ಆರೋಪಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ವಿರುದ್ಧ ಅವರು ಮಾಡಿರುವ ಕಿರುಕುಳದ ಆರೋಪ ಆಧಾರರಹಿತ’ ಎಂದು ಹೇಳಿದ್ದಾರೆ.
‘ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಅವರು ಕೊವಿಡ್ ಸಂಬಂಧ ನಡೆಯುತ್ತಿದ್ದ ಸಭೆಗಳಿಗೆ ಗೈರಾಗುತ್ತಿದ್ದರು’ ಎಂದು ರೋಹಿಣಿ ಸಿಂಧೂರಿ ಹೇಳಿದರು. ‘ಕೊವಿಡ್ ಕೇರ್ ಸೆಂಟರ್ ಆರಂಭಿಸಿಲ್ಲವೆಂಬ ಆರೋಪಕ್ಕೂ ಯಾವುದೇ ಪುಷ್ಟಿಯಿಲ್ಲ. ಕೇವಲ 20 ದಿನಗಳಲ್ಲೇ 18 ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದೇವೆ. ಮೈಸೂರಿನಲ್ಲೇ 3 ಕೊವಿಡ್ ಕೇರ್ ಸೆಂಟರ್ ಇದೆ’ ಎಂದು ವಿವರಿಸಿದರು.
Karnataka | “It is untrue that there was harassment from me…,” says Mysuru Deputy Commissioner Rohini Sindhuri, after allegations of harassment levelled against her by Shilpa Nag who resigned as Mysuru City Corp Commissioner today pic.twitter.com/khtQiVdn1C
— ANI (@ANI) June 3, 2021
ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್ಬೈ ಇಂತಹ (ರೋಹಿಣಿ ಸಿಂಧೂರಿ) ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಮೈಸೂರು ಮಹಾನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನೇರವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿ ನನ್ನ ಮೇಲಿನ ಕೋಪಕ್ಕೆ ಬೇರೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಒಬ್ಬ ಅಧಿಕಾರಿಯ ಅಹಂನಿಂದ ಪರ್ಸನಲ್ ಆಗಿ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದ್ದರು.
ಎಲ್ಲರಿಗೂ ಒಂದು ಸಹನೆ ಇರುತ್ತದೆ. ಪ್ರತಿದಿನ ನಮ್ಮ ಅಧಿಕಾರಿಗಳನ್ನು ಸಭೆಗೆ ಕರೆದು ಅವಮಾನ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಆಯುಕ್ತೆ ಶಿಲ್ಪಾ ನಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
(Mysore DC Rohini Sindhuri Clarifies on Allegations Made By IAS Officer Shilpa Nag)
ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಂತಹ ದುರಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ -ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್ಬೈ
ಇದನ್ನೂ ಓದಿ: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ
Published On - 7:44 pm, Thu, 3 June 21