AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಪರಿಹಾರ ಮೊತ್ತ ಕಡಿಮೆಯಾಯ್ತು: ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಮಾಧಾನ

ಐದು ಸಾವಿರ ರೂಪಾಯಿ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಹತ್ತು ಸಾವಿರ ರೂಪಾಯಿ ಪರಿಹಾರ ಹಾಗೂ ಎರಡು ತಿಂಗಳಿಗೆ ಆಗುವಷ್ಟು ಪುಡ್ ಕಿಟ್​ಗಾಗಿ ಬೇಡಿಕೆ ಇಡಲಾಗಿತ್ತು ಎಂದು ಸಂಘಟನೆಗಳು ಹೇಳಿವೆ.

ಲಾಕ್​ಡೌನ್ ಪರಿಹಾರ ಮೊತ್ತ ಕಡಿಮೆಯಾಯ್ತು: ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಮಾಧಾನ
ಸಾಂದರ್ಭೀಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 03, 2021 | 7:00 PM

Share

ಬೆಂಗಳೂರು: ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್​ಡೌನ್ ಪರಿಹಾರ ಘೋಷಿಸಿರುವುದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಾಗತಿಸಿವೆ. ಶಿಕ್ಷಕರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಆದರೆ ಐದು ಸಾವಿರ ರೂಪಾಯಿ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಹತ್ತು ಸಾವಿರ ರೂಪಾಯಿ ಪರಿಹಾರ ಹಾಗೂ ಎರಡು ತಿಂಗಳಿಗೆ ಆಗುವಷ್ಟು ಪುಡ್ ಕಿಟ್​ಗಾಗಿ ಬೇಡಿಕೆ ಇಡಲಾಗಿತ್ತು ಎಂದು ಸಂಘಟನೆಗಳು ಹೇಳಿವೆ.

ಶಿಕ್ಷಕರಿಗೆ ಹತ್ತು ಸಾವಿರ ಪರಿಹಾರ ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದರು. ಆದರೆ ಈಗ ಕೇವಲ ಐದು ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹಾಗೂ ರೂಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

₹ 500 ಕೋಟಿ ಪ್ಯಾಕೇಜ್ ಘೋಷಿಸಿದ ಯಡಿಯೂರಪ್ಪ ಲಾಕ್​ಡೌನ್​ನಿಂದ ಕರ್ನಾಟಕದ ಸಾಕಷ್ಟು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೆರವಿಗೆ ಬಂದಿರುವ ರಾಜ್ಯ ಸರ್ಕಾರ 2ನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​ ಘೋಷಿಸಿದೆ.  ಮಗ್ಗಗಳ ಕಾರ್ಮಿಕರು,  ಚಲನಚಿತ್ರ, ದೂರದರ್ಶನ ಕಲಾವಿದರು, ಮೀನುಗಾರರು, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ₹ 3000 ಪರಿಹಾರ ಧನ ಘೋಷಿಸಲಾಗಿದೆ.

ಸಿ ವರ್ಗದ ದೇವಸ್ಥಾನಗಳ ಅರ್ಚಕರು, ಅಡುಗೆ ಕೆಲಸ, ಸಹಾಯಕರು, ಮಸೀದಿ ಫೇಶಿಮಾಂ, ಮೌಂಜನ್​ಗೆ ತಲಾ ₹3000 ಆಶಾ ಕಾರ್ಯಕರ್ತೆಯರಿಗೂ ತಲಾ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000, ಶಾಲಾ ಮಕ್ಕಳಿಗೆ ಜೂನ್, ಜುಲೈನಲ್ಲಿ ಹಾಲಿನ ಪುಡಿ ನೀಡಿಕೆ, ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ₹ 5000 ಸಹಾಯಧನ ಘೋಷಿಸಿದ್ದಾರೆ.

(Teachers of Private Education Express Disregard Over Economic Package Announced by Karnataka CM BS Yediyurappa)

ಇದನ್ನೂ ಓದಿ: CM Yediyurappa PC Live: 1 ವಾರ ಲಾಕ್​ಡೌನ್ ಮುಂದುವರಿಕೆ; 500 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ಇದನ್ನೂ ಓದಿ: ಸಿನಿಮಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್​; ಸಿಎಂ ಯಡಿಯೂರಪ್ಪಗೆ ಧನ್ಯವಾದ ಹೇಳಿದ ಸುನೀಲ್ ಪುರಾಣಿಕ್

Published On - 6:59 pm, Thu, 3 June 21