CM Yediyurappa PC Live: 1 ವಾರ ಲಾಕ್​ಡೌನ್ ಮುಂದುವರಿಕೆ; 500 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

TV9 Web
| Updated By: guruganesh bhat

Updated on: Jun 20, 2021 | 11:15 PM

Karnataka CM Yediyurappa Press Meet: ಖಾಸಗಿ ಶಾಲಾ ಶಿಕ್ಷಕರಿಗೆ ₹ 10,000 ಪರಿಹಾರ, ವಲಸೆ ಕಾರ್ಮಿಕರಿಗೆ ಕಿಟ್, ಮತ್ತಿತರ ವಲಯಗಳಿಗೂ ಪ್ಯಾಕೇಜ್​ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

CM Yediyurappa PC Live: 1 ವಾರ ಲಾಕ್​ಡೌನ್ ಮುಂದುವರಿಕೆ; 500 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

LIVE NEWS & UPDATES

  • 20 Jun 2021 11:15 PM (IST)

    ಮೂರನೇ ದಿನ ಉರುಳಿದ ವಿಕೆಟ್​ಗಳು

    ಐಸಿಸಿ ವಿಶ್ವ ಟೆಸ್ಟ್ ಚಾಂಒಇಯನ್​ಶಿಪ್​ನ ಮೂರನೇ ದಿನದ ಆಟದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್​, ಎರಡೂ ತಂಡಗಳ ವಿಕೆಟ್​ಗಳು ಉದುರಿದವು. ಭಾರತ ತನ್ನ ಪ್ರಮುಖ ವಿಕೆಟ್ ಸಹಿತ ಆಲ್​ಔಟ್ ಆದರೆ, ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರರು ಇಬ್ಬರ ವಿಕೆಟ್ ಕಳೆದುಕೊಂಡಿತು. ಆ ಕ್ಷಣಗಳನ್ನು ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡಿದೆ. ಇಲ್ಲಿದೆ ನೋಡಿ.

  • 03 Jun 2021 05:13 PM (IST)

    ಕೊವಿಡ್ ಪಾಸಿಟಿವಿಟಿ ದರ ಶೇಕಡಾ 5ರಷ್ಟು ಕಡಿಮೆಯಾದರೆ ಲಾಕ್​ಡೌನ್ ತೆರವು

    ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 5ರಷ್ಟು ಕಡಿಮೆಯಾದರೆ ಲಾಕ್​ಡೌನ್ ತೆರವುಗೊಳಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತು ಸಿಎಂ ಯಡಿಯೂರಪ್ಪೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

  • 03 Jun 2021 05:12 PM (IST)

    ಹೋಟೆಲ್​ಗಳಿಗೆ ಪಾರ್ಸೆಲ್​ಗೆ ಮಾತ್ರ ಅವಕಾಶ

    ಜೂನ್ 14ರವರೆಗೆ ಲಾಕ್​ಡೌನ್​ ನಿಯಮಗಳಲ್ಲಿ ಬದಲಾವಣೆ ಇಲ್ಲ. ಹೋಟೆಲ್​ಗಳು ಸಂಜೆಯವರೆಗೂ ತೆರೆಯಬಹುದು. ಆದರೆ ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

  • 03 Jun 2021 05:09 PM (IST)

    ಯಾರಿಗೆ ಪ್ಯಾಕೇಜ್​ನಲ್ಲಿ ಸಹಾಯಧನ?

    ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​, ತಲಾ 3000 ದಂತೆ ಮಗ್ಗಗಳ ಕಾರ್ಮಿಕರಿಗೆ ಪರಿಹಾರ, ಚಲನಚಿತ್ರ, ದೂರದರ್ಶನ ಕಲಾವಿದರಿಗೆ ತಲಾ ₹3000, ಮೀನುಗಾರರಿಗೆ ತಲಾ 3000 ರೂ, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ₹3000, ಆಶಾ ಕಾರ್ಯಕರ್ತೆಯರಿಗೂ ತಲಾ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000,ಪ್ರಾಥಮಿಕ ಅನುದಾನರಹಿತ ಶಿಕ್ಷಕರಿಗೆ ತಲಾ 5000 ರೂ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದರು.

  • 03 Jun 2021 05:06 PM (IST)

    1 ವಾರ ಲಾಕ್​ಡೌನ್ ಮುಂದುವರಿಕೆ: ಸಿಎಂ ಯಡಿಯೂರಪ್ಪ ಘೋಷಣೆ

    ರಾಜ್ಯದಲ್ಲಿ 1 ವಾರ ಲಾಕ್​ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್​ಡೌನ್ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೀನುಗಾರರಿಕೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.

  • 03 Jun 2021 05:00 PM (IST)

    350 ಕೋಟಿ ಪ್ಯಾಕೇಜ್ ಘೋಷಿಸಲಿದ್ದಾರಾ ಸಿಎಂ ಯಡಿಯೂರಪ್ಪ?

    ಸಿಎಂ ಯಡಿಯೂರಪ್ಪ ₹350 ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿರುವ ಸಿಎಂ ಯಡಿಯೂರಪ್ಪ ಈಗ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  • 03 Jun 2021 04:50 PM (IST)

    ಕೆಲವು ಜಿಲ್ಲೆ ಮಾತ್ರವೇ ಲಾಕ್? ಇನ್ನು ಕೆಲವು ಜಿಲ್ಲೆಗಳು ಅನ್​ಲಾಕ್?

    ರಾಜ್ಯದಲ್ಲಿ ಲಾಕ್ ಡೌಬ್ ಮುಂದುವರಿಕೆ ವಿಚಾರವಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಅಭಿಪ್ರಾಯ ಸರ್ಕಾರವನ್ನು ತಲುಪಿದೆ. ಸಂಪೂರ್ಣ ರಾಜ್ಯಕ್ಕೆ ಲಾಕ್ ಡೌನ್ ವಿಧಿಸುವ ಬದಲು ಇನ್ನೂ ಕೊವಿಡ್ ಪೀಡಿತ ಜಿಲ್ಲೆಗಳನ್ನು ಗುರುತಿಸಿ ಆಯಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆಗೆ ಸಿಎಂ ಯಡಿಯೂರಪ್ಪ ಓಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ‌ ಜಿಲ್ಲೆಗಳಲ್ಲಿ ಆನ್ ಲಾಕ್ ಮಾದರಿಯ ವಿನಾಯಿತಿ ನೀಡುವ ಸಾಧ್ಯತೆಯೂ ಇದ್ದು, ಕಂದಾಯ ಇಲಾಖೆ, ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಿಎಂ ಯಡಿಯೂರಪ್ಪ ಅಭಿಪ್ರಾಯ ಸಂಗ್ರಹಿಸಿದ್ದಾರೆ.

  • 03 Jun 2021 04:41 PM (IST)

    ದ್ವಿತೀಯ ಪಿಯು ಪರೀಕ್ಷೆ ನಡೆಸುವಂತೆ ಮನವಿ

    ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ. ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಂತೆ ಸಲಹೆ ನೀಡಿದ್ದು, ಹಿಂದಿನ ವರ್ಷ SSLC ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದ ಇಲಾಖೆ ಈಗ ಮತ್ತಷ್ಟು ಸೂಕ್ತ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ತಿಳಿಸಿದೆ.

  • 03 Jun 2021 04:32 PM (IST)

    ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಒದಗಿಸಲು ಸರ್ಕಾರಕ್ಕೆ ಮನವಿ

    ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಜಯ ಕರ್ನಾಟಕ ವಿಕಲಚೇತನರ ವೇದಿಕೆ ಅಧ್ಯಕ್ಷ ರವಿ ಅವರು ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಲಾಕ್​ಡೌನ್​ನಿಂದಾಗಿ ವಿಕಲಚೇತನರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಮೂರು ತಿಂಗಳ ಮಾಸಾಶನ ನೀಡುವಂತೆ ಮನವಿ ನೀಡಲಾಗಿದೆ. ಸಿಎಂ ಮೊದಲ ಪ್ಯಾಕೇಜ್ ನಲ್ಲಿ ವಿಕಲಚೇತನರಿಗೆ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಎರಡನೇ ಕಂತಿನ ಪರಿಹಾರದಲ್ಲಿ ವಿಕಲಚೇತನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಆಹಾರದ ಕಿಟ್ ನೀಡುವಂತೆ ಮನವಿ ಮಾಡಲಾಗಿದ್ದು, ವಿಕಲಚೇತನರ ಮನೆಗೆ ವ್ಯಾಕ್ಸಿನ್ ಸೌಲಭ್ಯ ನೀಡುವಂತೆಯೂ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ.

  • ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಸುದ್ದಿಗೋಷ್ಠಿ ಆರಂಭಿಸಲಿದ್ದು, ಲಾಕ್​ಡೌನ್​ನಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ 2ನೇ ಬಾರಿ ವಿಶೇಷ ಪ್ಯಾಕೇಜ್​ ಘೋಷಿಸುವ ಸಾಧ್ಯತೆಯಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ₹ 10,000 ಪರಿಹಾರ, ವಲಸೆ ಕಾರ್ಮಿಕರಿಗೆ ಕಿಟ್, ಮತ್ತಿತರ ವಲಯಗಳಿಗೂ ಪ್ಯಾಕೇಜ್​ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳಿಂದ ಸಿಎಂ ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ. ಅಲ್ಲದೇ ವಿವಿಧ ವರ್ಗಗಳು ಸಹ ತಮಗೂ ಪ್ಯಾಕೇಜ್ ಘೋಷಿಸುವಂತೆ ಮನವಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಸಾಧ್ಯತೆ ಇದೆ.

    (Karnataka CM BS Yediyurappa PC live updates on sslc puc exam and lockdown extension covid curfew in Karnataka vaccination0

    Follow us
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
    ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
    ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
    ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
    ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
    ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
    ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
    ‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
    ‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
    ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
    ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ