AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್​; ಸಿಎಂ ಯಡಿಯೂರಪ್ಪಗೆ ಧನ್ಯವಾದ ಹೇಳಿದ ಸುನೀಲ್ ಪುರಾಣಿಕ್

ಕೊವಿಡ್​ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್​ ಸಿನಿಮಾಗಳು ರಿಲೀಸ್​ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು.

ಸಿನಿಮಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್​;  ಸಿಎಂ ಯಡಿಯೂರಪ್ಪಗೆ ಧನ್ಯವಾದ ಹೇಳಿದ ಸುನೀಲ್ ಪುರಾಣಿಕ್
ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಿಎಂಗೆ ಪುರಾಣಿಕ್ ಮನವಿ
ರಾಜೇಶ್ ದುಗ್ಗುಮನೆ
|

Updated on:Jun 03, 2021 | 5:59 PM

Share

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು 500 ಕೋಟಿ ರೂಪಾಯಿಗಳ ಲಾಕ್​ಡೌನ್ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ. ಈ ಪ್ಯಾಕೇಜ್​ನಲ್ಲಿ ಚಿತ್ರರಂಗದ ಕಾರ್ಮಿಕರನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ತಲಾ 3000 ರೂಪಾಯಿ ನೀಡಲಾಗುತ್ತಿದೆ.

ಕೊರೊನಾ ವೈರಸ್​ ನಿಯಂತ್ರಣಕ್ಕೆ ಹೇರಿರುವ ಲಾಕ್​ಡೌನ್​ನಿಂದ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ, ಇವರಿಗೆ ವಿಶೇಷ ಪ್ಯಾಕೇಜ್​ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಸರ್ಕಾರ ಇದಕ್ಕೆ ಈಗ ಸ್ಪಂದಿಸಿದೆ.

ಕೊವಿಡ್​ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್​ ಸಿನಿಮಾಗಳು ರಿಲೀಸ್​ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ, ಶೂಟಿಂಗ್​ ಕೂಡ ಶುರುವಾಗಿತ್ತು. ಹೀಗಾಗಿ, ಎಲ್ಲವೂ ಮತ್ತೆ ಮೊದಲಿನಂತಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಏಕಾಏಕಿ ಕೊವಿಡ್​ ಎರಡನೇ ಅಲೆ ಹೆಚ್ಚಿದ್ದರಿಂದ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಿನಿಮಾ ಕಾರ್ಮಿಕರಿಗೆ 2ನೇ ಹಂತದಲ್ಲಿ ಪ್ಯಾಕೇಜ್ ರಿಲೀಸ್​ ಮಾಡುತ್ತಿದ್ದೇವೆ. ಇದರಲ್ಲಿ ಸಿನಿಮಾ ತಂತ್ರಜ್ಞರು, ಕಾರ್ಮಿಕರ ಸೇರ್ಪಡೆ ಮಾಡುತ್ತಿದ್ದೇವೆ ಎಂದಿದ್ದರು. ಅಂತೆಯೇ ಸರ್ಕಾರ ಈಗ ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿ ನೀಡುತ್ತಿದೆ. ಕರ್ನಾಟಕದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Lockdown Guidelines: ಜೂನ್ 14ರವರೆಗೆ ಲಾಕ್​ಡೌನ್ ಮುಂದುವರಿಕೆ; 500 ಕೋಟಿ ಆರ್ಥಿಕ ಪ್ಯಾಕೇಜ್: ಸಿಎಂ ಯಡಿಯೂರಪ್ಪ ಘೋಷಣೆ

Published On - 5:54 pm, Thu, 3 June 21

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​