ಬೆಂಗಳೂರು: ಕೊರೊನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ, ನಿಂಯತ್ರಣಕ್ಕಾಗಿ ಸರ್ಕಾರ ಕಟ್ಟು-ನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ. ಲಾಕ್ಡೌನ್ ಕೂಡಾ ಜಾರಿಯಲ್ಲಿದೆ. ಕರ್ನಾಟಕದ ಕೆಲವು ಜಿಲ್ಲೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಹೀಗಿರುವಾಗ ಅನಗತ್ಯವಾಗಿ ಹೊರಗಡೆ ಸುತ್ತಾಡುವಂತಿಲ್ಲ. ಜತೆಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನಿತರ ವಸ್ತುಗಳ ಖರೀದಿಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ಆಭರಣಗಳನ್ನು ಕೊಳ್ಳಲಾಗುತ್ತಿಲ್ಲ ಎಂಬ ಬೇಸರ ಕೆಲವು ಗ್ರಾಹಕದ್ದಾಗಿದೆ.
ಇದೊಂದು ಕಾರಣವಾದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುವಿಕೆ ಜನರನ್ನು ಚಿಂತೆಗೀಡು ಮಾಡಿದೆ. ಈ ನಿಟ್ಟಿನಲ್ಲಿ ಜನರು ಖುಷಿಯ ಆಚರಣೆಗಳನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ ಮದುವೆ ಸಮಾರಂಭಗಳು-ಮನೆಯಲ್ಲಿನ ವಿಶೇಷ ಆಚರಣೆಗಳು, ಹಬ್ಬ-ಹರಿದಿನಗಳಿಗೆಲ್ಲ ಮೊದಲಿನಷ್ಟು ಸಂಭ್ರಮದಲ್ಲಿ ನಡೆಯುತ್ತಿಲ್ಲ. ಹೀಗಾಗಿ ಚಿನ್ನ, ಬೆಳ್ಳಿ ಖರೀದಿಗೆ ಜನರು ಅಷ್ಟಾಗಿ ಮುಂದಾಗಿಲ್ಲ. ಇದರಿಂದಾಗಿ ಚಿನ್ನದ ಬೇಡಿಕೆಯೂ ಸಹ ಕುಸಿತ ಕಂಡಿದೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬುದನ್ನು ನೊಡೋಣ. ಜತೆಗೆ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದರ ಕುರಿತಾಗಿ ತಿಳಿಯೋಣ.
ವಿವಿಧ ನಗರಗಳಲ್ಲಿನ ಚಿನ್ನದ ದರ ಮಾಹಿತಿ
ಕಳೆದ ತಿಂಗಳಿನಲ್ಲಿ ಚಿನ್ನದ ದರ ಏರಿಕೆಯತ್ತ ಸಾಗಿತ್ತು. ಹಾಗೆಯೇ ಮೇ ತಿಂಗಳಿನಲ್ಲಿಯೂ ದರ ಏರಿಳಿತ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರವಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,600 ರೂಪಾಯಿ ಇದೆ ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,750 ರೂಪಾಯಿ ಇದೆ. ಚೆನ್ನೈನಲ್ಲಿ ಚಿನ್ನದ ದರ ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ ಕೊಂಚ ಏರಿಕೆ ಆಗಿದ್ದು 45,910 ರೂಪಾಯಿ ಆಗಿದೆ. ಅದೇರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,060 ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,930 ರೂಪಾಯಿ ಇದೆ. ಜತೆಗೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,830 ರೂಪಾಯಿ ಆಗಿದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,600 ರೂಪಾಯಿ ಇದ್ದು, 24 ಕ್ಯಾರೆಟ್ (ಅಪರಂಜಿ ಚಿನ್ನ) 45,600 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ದರ ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,000 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ47,000 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಬೆಳ್ಳಿ ದರ ಮಾಹಿತಿ
ಕಳೆದೆರಡು ದಿನಗಳಿಂದ ಕುಸಿತ ಕಂಡಿದ್ದ ಬೆಳ್ಳಿ ದರ ಇಂದು ಕೊಂಚ ಏರಿಕೆಯತ್ತ ಸಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 1ಕೆಜಿ ಬೆಳ್ಳಿ ದರ 100 ರೂಪಾಯಿ ಏರಿಕೆ ಕಂಡಿದ್ದು, 71,200 ರೂಪಾಯಿ ಆಗಿದೆ. ಹೈದರಾಬಾದ್ನಲ್ಲಿ 1ಕೆಜಿ ಬೆಳ್ಳಿ ದರ ಸ್ಥಿರವಾಗಿದ್ದು 75,700 ರೂಪಾಯಿ ಇದೆ. ದೆಹಲಿಯಲ್ಲಿ ಬೆಳ್ಳಿ ದರ ಕೊಂಚ ಹೆಚ್ಚಳವಾಗಿದ್ದು 1ಕೆಜಿ ಬೆಳ್ಳಿ ದರ 71,200 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಸಹ ದರ ಏರಿಕೆ ಕಂಡಿದ್ದು, 1ಕೆಜಿ ಬೆಳ್ಳಿ ಬೆಲೆ 71,200 ರೂಪಾಯಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ:
Gold Silver Rate Today: ಇಂದು ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ