AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಲಾಕ್​ಡೌನ್:​ ರಾಜ್ಯದಲ್ಲಿ ಇಂದಿನಿಂದ ಹೊಸ ಲಾಕ್ಡೌನ್, ಮತ್ತಷ್ಟು ಟಫ್ ರೂಲ್ಸ್

Karnataka Lockdown: ಮೇ 10ರಿಂದ ಜಾರಿಯಾಗಿದ್ದ ಮೊದಲ ರೌಂಡ್ ಲಾಕ್ಡೌನ್ ಇವತ್ತಿಗೆ ಅಂತ್ಯವಾಗಿದೆ. ಇಷ್ಟು ದಿನ ನೀವು ನೋಡಿದ ಲಾಕ್ಡೌನೇ ಬೇರೆ, ಇವತ್ತಿನಿಂದ ಶುರುವಾಗವಿರೋ ಲಾಕ್ಡೌನ್ ಖದರೇ ಬೇರೆ. ಇಂದಿನಿಂದ ಹೊಸ ಲಾಕ್ಡೌನ್ ಜಾರಿಯಾಗಿದ್ದು, ಜೂನ್ 7ರವರೆಗೆ ಅಂದ್ರೆ ಎರಡು ವಾರಗಳ ಕಾಲ ಅನಗತ್ಯವಾಗಿ ಹೊರಬಿದ್ರೆ ಖಾಕಿ ಕೈಗೆ ಸಿಕ್ಕಾಕೊಳ್ಳಬೇಕಾಗುತ್ತೆ.

ಕರ್ನಾಟಕ ಲಾಕ್​ಡೌನ್:​ ರಾಜ್ಯದಲ್ಲಿ ಇಂದಿನಿಂದ ಹೊಸ ಲಾಕ್ಡೌನ್, ಮತ್ತಷ್ಟು ಟಫ್ ರೂಲ್ಸ್
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:May 24, 2021 | 8:53 AM

Share

ಲಾಕ್ಡೌನ್.. ನಿನ್ನೆವರೆಗೂ ಲಾಕ್ಡೌನ್ ಟಫ್ ರೂಲ್ಸ್ ಒಂದು ಲೆಕ್ಕ ಆದ್ರೆ ಇವತ್ತಿನಿಂದ ಬೇರೆಯದೇ ಲೆಕ್ಕ. ಇಂದಿನಿಂದ ರಾಜ್ಯಾದ್ಯಂತ 14 ದಿನಗಳ ಫ್ರೆಶ್ ಌಂಡ್ ಟಫ್ ಲಾಕ್ಡೌನ್ ಸ್ಟಾರ್ಟ್ ಆಗಲಿದೆ. ಹಾಗಂತಾ ಕಳೆದೆರಡು ವಾರಗಳ ಲಾಕ್ಡೌನ್ಗಿಂತ ಇಂದಿನಿಂದ ಆರಂಭವಾಗಲಿರೋ ಲಾಕ್ಡೌನ್ ಕಠಿಣಾತಿ ಕಠಿಣವಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಇಂದಿನಿಂದ ಖಾಕಿ ಆಕ್ಷನ್ ಶುರುವಾಗಲಿದೆ.

ಇಂದಿನಿಂದ ಹೊಸ ಲಾಕ್ಡೌನ್.. ಟಫ್ ರೂಲ್ಸ್! ಮೇ 10ರಿಂದ ಜಾರಿಯಾಗಿದ್ದ ಮೊದಲ ರೌಂಡ್ ಲಾಕ್ಡೌನ್ ಇವತ್ತಿಗೆ ಅಂತ್ಯವಾಗಿದೆ. ಇಷ್ಟು ದಿನ ನೀವು ನೋಡಿದ ಲಾಕ್ಡೌನೇ ಬೇರೆ, ಇವತ್ತಿನಿಂದ ಶುರುವಾಗವಿರೋ ಲಾಕ್ಡೌನ್ ಖದರೇ ಬೇರೆ. ಇಂದಿನಿಂದ ಹೊಸ ಲಾಕ್ಡೌನ್ ಜಾರಿಯಾಗಿದ್ದು, ಜೂನ್ 7ರವರೆಗೆ ಅಂದ್ರೆ ಎರಡು ವಾರಗಳ ಕಾಲ ಅನಗತ್ಯವಾಗಿ ಹೊರಬಿದ್ರೆ ಖಾಕಿ ಕೈಗೆ ಸಿಕ್ಕಾಕೊಳ್ಳಬೇಕಾಗುತ್ತೆ. ಕೊರೊನಾ ರಣಕೇಕೆ ಹಾಕ್ತಿರೋ ಬೆಂಗಳೂರಿನಲ್ಲಂತೂ ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು ಜೋರಾಗೇ ಇದೆ.

ಇಂದಿನಿಂದ ಬೆಂಗಳೂರಲ್ಲಿ ಖಾಕಿ ಅಸಲಿ ಆಟ ಶುರು ವಿನಾಕಾರಣ ಓಡಾಡುವವರಿಗೆ ಮೊನ್ನೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ರು. ಬೆಳಗ್ಗೆ 10ಕ್ಕೆ ಅಲ್ಲ 9.45 ರೊಳಗೆ ಮನೆ ಸೇರಬೇಕು. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಬೇಕು ಅಂತಾನೂ ಎಚ್ಚರಿಸಿದ್ರು. ಇದ್ರ ಬೆನ್ನಲ್ಲೇ ಎಚ್ಚೆತ್ತ ಖಾಕಿ ಕಳೆದೆರಡು ದಿನಗಳಿಂದ ಖಡಕ್ ರೂಲ್ಸ್ನ ಟ್ರೇಲರ್ ತೋರಿಸಿದ್ರು. ಆದ್ರೆ ಇಂದಿನಿಂದ ಹೊಸ ಲಾಕ್ಡೌನ್ ಕಠಿಣ ರೂಲ್ಸ್ ಪಿಕ್ಚರ್ ತೋರಿಸೋಕೆ ಪೊಲೀಸರು ಸಕಲ ಸನ್ನದ್ಧರಾಗಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಇವತ್ತಿನಿಂದ ಲಾಕ್ಡೌನ್ ರೂಲ್ಸ್ ಮತ್ತಷ್ಟು ಬಿಗಿಯಾಗಲಿದೆ.

ಹೇಗಿರುತ್ತೆ ಹೊಸ ಲಾಕ್ಡೌನ್ ಟಫ್ ರೂಲ್ಸ್? ಹಾಗಿದ್ರೆ ಇಂದಿನಿಂದ ಜೂನ್ 7ರವರೆಗೆ ಕಠಿಣ ಲಾಕ್ಡೌನ್ ಜಾರಿಯಲ್ಲಿರೋ ವೇಳೆ ರೂಲ್ಸ್ ಯಾವುದಕ್ಕೆಲ್ಲಾ ಅವಕಾಶ ನೀಡಲಾಗಿದೆ?

ಹೊಸ ಲಾಕ್ಡೌನ್ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತೆ. 10 ಗಂಟೆ ಬಳಿಕ ಎಲ್ಲವೂ ಕಂಪ್ಲೀಟ್ ಬಂದ್ ಆಗಲಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಎಲ್ಲರೂ ಮನೆ ಸೇರಿರಬೇಕು. ಮೆಡಿಕಲ್ ಎಮರ್ಜೆನ್ಸಿಗೆ ಮಾತ್ರ ಹೊರ ಬರೋಕೆ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್, ವೈದ್ಯಕೀಯ ಸೇವೆ ಎಂದಿನಂತೆ ಲಭ್ಯವಿರಲಿದೆ.

ಕೆಲ ಜಿಲ್ಲೆಗಳು ಕಂಪ್ಲೀಟ್ ಲಾಕ್, ಹಳ್ಳಿ ಹಳ್ಳಿಗೂ ಬೀಗ ಮತ್ತೊಂದೆಡೆ ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ರೌದ್ರಾವತಾರ ತಾಳುತ್ತಿದ್ದು, ನೂರಾರು ಜನರ ಬಲಿ ಪಡೆಯುತ್ತಿದೆ. ಹೀಗಾಗಿ ಕೆಲ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಘೋಷಿಸಲಾಗಿದೆ.

ಜಿಲ್ಲೆಗಳು ಕಂಪ್ಲೀಟ್ ಲಾಕ್‌ ಜೂನ್ 7ರವರೆಗೆ ಧಾರವಾಡ ಕಂಪ್ಲೀಟ್ ಲಾಕ್ ಆಗಿರಲಿದೆ. ಗುರುವಾರ, ಶುಕ್ರವಾರ ಮಾತ್ರ ಮಾರ್ಕೆಟ್‌ ಓಪನ್‌ ಇರಲಿದ್ದು, ಮಾರ್ಕೆಟ್‌ನಲ್ಲಿ ದಿನಸಿ ಖರೀದಿಗೆ ವಾರದಲ್ಲಿ 2ದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ಕೊಡಲಾಗಿದೆ. ಇನ್ನು ಲಾಕ್ಡೌನ್ ವೇಳೆ ನಿತ್ಯ ಬೆಳಗ್ಗೆ 6ರಿಂದ 8ರವರೆಗೆ ತರಕಾರಿ, ಹಾಲು, ಹಣ್ಣು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೆ 4 ದಿನ ಸಂಪೂರ್ಣ ಬಂದ್ ಘೋಷಿಸಲಾಗಿದೆ.

ಮೇ 24ರಿಂದ 3 ದಿನ ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅವಕಾಶ ಕೊಡಲಾಗಿದೆ. ಅದಾದ ಬಳಿಕ ನಾಲ್ಕು ದಿನಗಳ ಕಾಲ ಅಂದ್ರೆ ಮೇ 27ರಿಂದ ಮೇ 30ರವರೆಗೆ ಜಿಲ್ಲೆ ಮತ್ತೆ ಸಂಪೂರ್ಣ ಬಂದ್‌ ಆಗಿರಲಿದೆ. ಇತ್ತ ಇಂದಿನಿಂದ 7 ದಿನ ಕೊಪ್ಪಳ ಕೂಡಾ ಕಂಪ್ಲೀಟ್ ಲಾಕ್ ಆಗಲಿದೆ. ಅಗತ್ಯವ ವಸ್ತುಗಳ ಖರೀದಿಗೆ ನಿನ್ನೆ ಅವಕಾಶ ಕೊಡಲಾಗಿದ್ದು, ಇಂದಿನಿಂದ ಇಂದಿನಿಂದ ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಿಲ್ಲದಂತೆ ಲಾಕ್ಡೌನ್ ಮಾಡಲಾಗಿದೆ.

ಒಟ್ನಲ್ಲಿ ಇಷ್ಟು ದಿನ ಸಡಿಲ ಲಾಕ್ಡೌನ್ ಇತ್ತು ಅಂತಾ ಇವತ್ತೂ ನೀವು ಬೇಕಾಬಿಟ್ಟಿ ಬೀದಿಗಿಳಿದ್ರೆ ಪೊಲೀಸರು ನಿಮ್ಮ ಜನ್ಮ ಜಾಲಾಡ್ತಾರೆ. ವಿನಾಕಾರಣ ಮನೆಯಿಂದ ಆಚೆ ಬಂದ್ರೆ ಗಾಡಿ ಸೀಜ್ ಆದ್ರೆ, ಎನ್ಡಿಎಂ ಕಾಯ್ದೆಯಡಿ ಕೇಸ್ ಬಿದ್ದು ನಿಮ್ ಬಾಡಿ ಕಂಬಿಯೊಳಗೆ ಸೇರುತ್ತೆ ಹುಷಾರ್.

ಇದನ್ನೂ ಓದಿ: ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?

Published On - 7:11 am, Mon, 24 May 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!