Gold Silver Rate Today: ಇಂದು ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ
Gold Silver Price in Bangalore: ಇಂದು ಭಾನುವಾರ (ಮೇ 23) ಚಿನ್ನ, ಬೆಳ್ಳಿ ದರ ಎಷ್ಟಿದೆ? ಹಾಗೂ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನದ ದರ ಏರುಪೇರಾಗಿರುವುದು ಸಾಮಾನ್ಯ. ಕೊಂಚ ಏರಿಕೆಯತ್ತ ಅಥವಾ ಕೊಂಚ ಇಳಿಕೆಯತ್ತ ಬೆಲೆಗಳಿರುವುದು. ಹಾಗಾಗಿ ಇಂದು ಭಾನುವಾರ (ಮೇ 23) ಚಿನ್ನದ ದರ ಎಷ್ಟಿದೆ? ಹಾಗೂ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ವಿವರ ಇಲ್ಲಿದೆ. ಅದೆಷ್ಟೋ ವರ್ಷಗಳಿಂದ ಚಿನ್ನ ಕೊಳ್ಳಲೆಂದು ಹಣವನ್ನು ಕೂಡಿಟ್ಟಿರುತ್ತೀರಿ. ಹೀಗಿರುವಾಗ ಚಿನ್ನ ಕೊಳ್ಳಬೇಕು ಎಂದೆನಿಸಿದರೆ ಮಾರುಕಟ್ಟೆಯಲ್ಲಿ ಇಂದು ಆಭರಣದ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರದಲ್ಲಿ ಚಿನ್ನದ ದರ ಇಂದು ಸ್ಥಿರವಾಗಿ ಉಳಿದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,600 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,750 ರೂಪಾಯಿ ಇದೆ. ಚೆನ್ನೈನಲ್ಲಿ ಚಿನ್ನದ ದರ ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,850 ರೂಪಾಯಿಯಿಂದ 45,900 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನ 50,020 ರೂಪಾಯಿಯಿಂದ 50,050 ರೂಪಾಯಿಗೆ ಏರಿಕೆ ಆಗಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ನಿನ್ನೆ 46,930 ರೂಪಾಯಿ ಇದ್ದು, ನಿನ್ನೆಯ ದರವನ್ನೇ ಕಾಯ್ದಿರಿಸಿಕೊಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,830 ರೂಪಾಯಿ ಇದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,600 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,750 ರೂಪಾಯಿ ಇದೆ. ಇನ್ನು, ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,600 ರೂಪಾಯಿ ಇದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನ 49,750 ರೂಪಾಯಿ ಆಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ದರ ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,000 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,000 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಬೆಳ್ಳಿ ದರ ಮಾಹಿತಿ ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ಇಂದು ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಮುಂಬೈನಗರದಲ್ಲಿ 1ಕೆಜಿ ಬೆಳ್ಳಿ ದರ 71,100 ರೂಪಾಯಿಗೆ ಇಳಿಕೆ ಆಗಿದೆ. ಕೇರಳದಲ್ಲಿ 100 ರೂಪಾಯಿ ಕುಸಿತದ ಬಳಿಕ 1ಕೆಜಿ ಬೆಳ್ಳಿ ದರ 71,100 ರೂಪಾಯಿಗೆ ಇಳಿಕೆ ಆಗಿದೆ.
ಹೈದರಾಬಾದ್ನಲ್ಲಿ 1ಕೆಜಿ ಬೆಳ್ಳಿ ದರ 76,400 ರೂಪಾಯಿಯಿಂದ 75,700 ರೂಪಾಯಿಗೆ ಇಳಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರ 71,100 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ ಚೆನ್ನೈನಲ್ಲಿ 700 ರೂಪಾಯಿ ಇಳಿಕೆ ಬಳಿಕ 1ಕೆಜಿ ಬೆಳ್ಳಿ ದರ 75,700 ರೂಪಾಯಿಗೆ ಕುಸಿದಿದೆ. ಬೆಂಗಳೂರು ನಗರದಲ್ಲಿ ಕೆಜಿ ಬೆಳ್ಳಿ ದರ 100 ರೂಪಾಯಿ ಇಳಿಕೆಯ ಬಳಿಕ 71,100 ರೂಪಾಯಿಗೆ ಕುಸಿತ ಕಂಡಿದೆ.
ಇದನ್ನೂ ಓದಿ: