Gold Silver Rate Today | ಬೆಂಗಳೂರು: ಕಳೆದ ಒಂದು ವಾರದಿಂದ ಚಿನ್ನದ ದರ ಏರಿಕೆಯತ್ತ ಸಾಗುತ್ತಲೇ ಇತ್ತು. ಆದರೆ ನಿನ್ನೆ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನದ ದರ (Gold Rate ) ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಆದರೆ ಬೆಳ್ಳಿ ದರದಲ್ಲಿ(Silver Rate) ಕೊಂಚ ಏರಿಕೆಯಾಗಿತ್ತು. ಇಂದು ( ಜುಲೈ 12, ಸೋಮವಾರ) ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದರೆ ಇತರ ನಗರಗಳಲ್ಲಿ ಕೊಂಚ ಏರಿಕೆಯಾಗಿದೆ. ಬೆಳ್ಳಿ ದರ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,750 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,47,500 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,820 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,88,200 ರೂಪಾಯಿ ಇದೆ. ಬೆಳ್ಳಿ ದರದಲ್ಲಿಯೂ ಸಹ ಇಂದು ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 69,300 ರೂಪಾಯಿ ಇದೆ.
ಚಿನ್ನ ಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕೈಯಲ್ಲಿ ಹಣವಿದ್ದಾಗ ಚಿನ್ನ ಕೊಳ್ಳುವತ್ತ ಯೋಚಿಸುತ್ತೇವೆ. ಆದರೆ ಕೂಡಿಟ್ಟ ಹಣಕ್ಕೆ ಚಿನ್ನ ಖರೀದಿಸುವಂತಿರಬೇಕು. ಅಷ್ಟೊಂದು ದುಡ್ಡು ಕೊಟ್ಟು ಆಭರಣ ಖರೀಸುತ್ತಿರುವಾಗ ಒಳ್ಳೆಯ ಗುಣಮಟ್ಟದ ಚಿನ್ನವನ್ನು ಕೊಳ್ಳವತ್ತ ಯೋಚಿಸಿ. ಸಂಗ್ರಹಿಸಿಟ್ಟ ಹಣಕ್ಕೆ ಚಿನ್ನ ಖರೀದಿಸುವುದಾದರೆ ಆಭರಣ ಕೊಳ್ಳುವತ್ತ ಯೋಚಿಸಬಹುದು.
ಚೆನ್ನೈನಲ್ಲಿ ಚಿನ್ನದ ದರ ಕೊಂಚ ಏರಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,260 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,25,600 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,380 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,93,800 ರೂಪಾಯಿಗೆ ಏರಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆ ಮೂಲಕ ನಿನ್ನೆಯ ದರವನ್ನೇ ಕಾಯ್ದಿರಿಸಿಕೊಂಡಿದೆ. ಕೆಜಿ ಬೆಳ್ಳಿಗೆ 74,100 ರೂಪಾಯಿ ಇದೆ.
ದೆಹಲಿಯಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,900 ರೂಪಾಯಿ ಇದೆ. 100 ಗ್ರಾ ಚಿನ್ನದ ದರ 4,69,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,950 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 5,09,500 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೆಯೇ ಕೆಜಿ ಬೆಳ್ಳಿ ಬೆಲೆ 69,300 ರೂಪಾಯಿ ಇದೆ.
ಇದನ್ನೂ ಓದಿ:
Gold Rate Today: ವೀಕೆಂಡ್ನಲ್ಲಿ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ; ಆಭರಣ ಖರೀದಿಸುವತ್ತ ಯೋಚಿಸಬಹುದು
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಆಭರಣದ ದರ ವಿವರ ಇಲ್ಲಿದೆ
Published On - 8:41 am, Mon, 12 July 21