ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು

Kacheguda- Yesvantpur Vande Bharat Express: ಕಾಚಿಗುಡ ಟು ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ 8 ಬೋಗಿಗಳಿಂದ 16 ಬೋಗಿಗಳಿಗೆ ಹೆಚ್ಚಳವಾಗಿದ್ದು, ಆಸನ ಸಾಮರ್ಥ್ಯ 530 ರಿಂದ 1128ಕ್ಕೆ ಏರಿಕೆ ಮಾಡಲಾಗಿದೆ. ಜುಲೈ 10ರಿಂದ ಈ ರೈಲು ಕಾರ್ಯನಿರ್ವಹಿಸಲಿದೆ. ಆ ಮೂಲಕ ನೈರುತ್ಯ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ನೀಡಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು
ವಂದೇ ಭಾರತ್ ಎಕ್ಸ್‌ಪ್ರೆಸ್

Updated on: Jul 07, 2025 | 4:14 PM

ಬೆಂಗಳೂರು, ಜುಲೈ 07: ಕಾಚಿಗುಡ-ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ (Kacheguda- Yesvantpur-Kacheguda Vande Bharat Express)​ ರೈಲು ಜುಲೈ 10ರಿಂದ 16 ಬೋಗಿಗಳೊಂದಿಗೆ ಸಂಚರಿಸಲಿದೆ. ಆ ಮೂಲಕ ಐಟಿ ನಗರಗಳಾದ ಬೆಂಗಳೂರು ಹಾಗೂ ಹೈದರಾಬಾದ್‌ (Hyderabad) ನಡುವಿನ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಈ ಮುಂಚೆ 8 ಬೋಗಿ ಉಳ್ಳ 530 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಸಂಚರಿಸುತ್ತಿತ್ತು. ಆದರೆ ಇದೀಗ 1,128 ಪ್ರಯಾಣಿಕರ ಸಾಮರ್ಥ್ಯದ 16 ಬೋಗಿಗಳ ಹೆಚ್ಚಳದೊಂದಿಗೆ ಸಂಚರಿಸಲಿದೆ.

ರೈಲು ಸಂಖ್ಯೆ 20703/20704 ಕಾಚಿಗುಡ ಟು ಯಶವಂತಪುರ ಟು ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಮುಂಚೆ 08 ಬೋಗಿಗಳ ಸಂಯೋಜನೆಯೊಂದಿಗೆ ಸಂಚಾರ ಆರಂಭಿಸಿತ್ತು. ಇದರಲ್ಲಿ 01 ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು 07 ಚೇರ್ ಕಾರ್‌ಗಳು ಸೇರಿದ್ದವು. ಆದರೆ ಈ ಮಾರ್ಗಕ್ಕೆ ಹೆಚ್ಚಿನ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ಹೆಚ್ಚುವರಿಯಾಗಿ 08 ಬೋಗಿಗಳ ಅಳವಡಿಕೆ ನಿರ್ಧರಿಸಲಾಗಿದೆ.

ಇದನ್ನೂ ಓದಿ: ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಬಂದ್: ಸಾಗಾಣಿಕೆ ವೆಚ್ಚ 250 ಕೋಟಿ ರೂ. ಬಾಕಿ ಕೊಡದ ಸರ್ಕಾರ

ಇದನ್ನೂ ಓದಿ
ಎತ್ತಿನಹೊಳೆ‌ ಡ್ಯಾಂ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ಜನರಿಂದಲೂ ವಿರೋಧ!
ಸಚಿವ ಎಂಬಿ ಪಾಟೀಲ್​ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್
ಪಾರ್ಟಿಗಳಲ್ಲಿ ಡ್ರಗ್ಸ್ ಸಿಕ್ಕರೆ ರೆಸಾರ್ಟ್, ಹೋಂ ಸ್ಟೇ ಮಾಲೀಕರ ಮೇಲೆ ಕೇಸ್
ಸಿಎಂ ಬದಲಾವಣೆ ಚರ್ಚೆಗೆ ಸ್ವಾಮೀಜಿಗಳೂ ಎಂಟ್ರಿ

ಅದರಂತೆ, ಜುಲೈ 10ರಿಂದ ಈಗಿರುವ 08 ಕೋಚ್ ಸಾಮರ್ಥ್ಯದ ಬದಲಿಗೆ 16 ಕೋಚ್ ಸಾಮರ್ಥ್ಯದೊಂದಿಗೆ ರೈಲು ಕಾರ್ಯನಿರ್ವಹಿಸಲಿದೆ. ಹೊಸ ಸಂಯೋಜನೆಯು 1024 ಪ್ರಯಾಣಿಕರ ಸಾಮರ್ಥ್ಯದ 14 ಚೇರ್​​​ಗಳು ಮತ್ತು 104 ಪ್ರಯಾಣಿಕರ ಸಾಮರ್ಥ್ಯದ 02 ಎಕ್ಸಿಕ್ಯೂಟಿವ್ ಕ್ಲಾಸ್ ಸೇರಿದಂತೆ ಒಟ್ಟು 1128 ಆಸನಗಳು ಹೊಂದಿರುತ್ತದೆ.

ಸಂದೀಪ್ ಮಾಥುರ್ ಹೇಳಿದ್ದಿಷ್ಟು

ಈ ಬಗ್ಗೆ ಮಾತನಾಡಿರುವ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂದೀಪ್ ಮಾಥುರ್, ಬೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವುದರಿಂದ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದೀಗ ಐಟಿ ನಗರಗಳಾದ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೂಟೀನ್ ಚೆಕಪ್​ಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು 2023 ಸೆಪ್ಟೆಂಬರ್ 24 ರಂದು ಕಾಚಿಗುಡ-ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಇದೀಗ ಜುಲೈ 10ರಿಂದ ಹೆಚ್ಚಿನ ಪ್ರಯಾಣಿಕರ ಸಂಚಾರ ಸಾಮರ್ಥ್ಯದೊಂದಿಗೆ ಓಡಾಟ ನಡೆಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:09 pm, Mon, 7 July 25