ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ: ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಪ್ರಕಟಿಸಿದ ಸಚಿವ ಶ್ರೀರಾಮುಲು

| Updated By: ಆಯೇಷಾ ಬಾನು

Updated on: Dec 14, 2022 | 1:21 PM

ಧೀರ್ಘಕಾಲಿಕ ರೋಗ, ಹೃದಯ ಬೈಪಾಸ್ ಸರ್ಜರಿ ಸೇರಿ ಹಲವು ಕಾಯಿಲೆಗಳಿಂದ ನೌಕರರು ಬಳಲುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನೌಕರರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಹಿನ್ನಲೆ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧರಿಸಿದೆ.

ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ:  ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ  ಪ್ರಕಟಿಸಿದ ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು
Follow us on

ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆರೋಗ್ಯ ರಕ್ಷಾ ಯೋಜನೆಯಡಿ ಬಿಎಂಟಿಸಿ 35 ಸಾವಿರ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಘೋಷಿಸಲಾಗಿದೆ. ಈ ಯೋಜನೆಯಡಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು.

ಇನ್ಮುಂದೆ ಮಹಾನಗರ ಸಾರಿಗೆ ಸಂಸ್ಥೆ ನೌಕರರು ಚಿಕಿತ್ಸೆ ಸಿಕ್ಕಿಲ್ಲ ಅಂತ ಆಸ್ಪತ್ರೆಗೆ ಅಲೆಯಬೇಕಿಲ್ಲ. ಬಿಎಂಟಿಸಿ 35 ಸಾವಿರ ಸಿಬ್ಬಂದಿಗೆ ಆರೋಗ್ಯ ರಕ್ಷಾ ಯೋಜನೆಯ ಸೌಲಭ್ಯ ನೀಡಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ಆರೋಗ್ಯ ವಿಮೆ ನೀಡ್ತಿದೆ. ಈ ಬಗ್ಗೆ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ. ಆಯುಷ್ಮಾನ್ ಯೋಜನೆಯಡಿಯಲ್ಲಿ ಸಾಸ್ತಾ ಎಂಬ ಯೋಜನೆ ತರಲು ಸಾರಿಗೆ ನಿಗಮ ಮುಂದಾಗಿದೆ. ನಿಗಮದ ಸಿಬ್ಬಂದಿಗಳು ಹಾಗೂ ಕುಟುಂಬದವ್ರು ಯಾವುದೇ ಅನಾರೋಗ್ಯಕ್ಕೊಳಗಾದ್ರೆ ಈ ಯೋಜನೆಯಡಿ ಅವರು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಸಚಿವರು ಹಾಗೂ ಇಲಾಖೆ ಜೊತೆ ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಗೆ ಕಳ್ಳನಂತೆ ಬಂದುಹೋದ ಮಹಾರಾಷ್ಟ್ರದ ಎನ್​ಸಿಪಿ ಶಾಸಕ ರೋಹಿತ್ ಪವಾರ್

ಧೀರ್ಘಕಾಲಿಕ ರೋಗ, ಹೃದಯ ಬೈಪಾಸ್ ಸರ್ಜರಿ ಸೇರಿ ಹಲವು ಕಾಯಿಲೆಗಳಿಂದ ನೌಕರರು ಬಳಲುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನೌಕರರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಹಿನ್ನಲೆ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧರಿಸಿದೆ. ಸಾರಿಗೆ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳು ಸಿಗಲೀ ಎಂಬ ಕಾರಣಕ್ಕೆ ಆರೋಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ. ನೌಕರರ ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸಲಿದೆ ಈ ಯೋಜನೆ. ಚಾಲಕರು ಮತ್ತು ನಿರ್ವಾಹಕರು ಅತಿ ಹೆಚ್ಚು ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಭಾಗ್ಯಕ್ಕೆ ನಿಗಮ ಈ ನಿರ್ಧಾರಕ್ಕೆ ಮುಂದಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:21 pm, Wed, 14 December 22