ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿಸುದ್ದಿ; ಆದಷ್ಟು ಬೇಗ ಶುರುವಾಗಲಿದೆ ಹಣದ ಬದಲಿಗೆ ಅನ್ನಭಾಗ್ಯದ 10 ಕೆಜಿ ಅಕ್ಕಿ ವಿತರಣೆ

| Updated By: ಆಯೇಷಾ ಬಾನು

Updated on: Oct 01, 2023 | 6:39 AM

Anna Bhagya Scheme: ಕಾಂಗ್ರೆಸ್ ಸರ್ಕಾರದ ಮಹತ್ವಕಾಂಶೆ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಡಿಬಿಟಿ ಪ್ರೋಸೆಸಿಂಗ್ ಸಧ್ಯ ಮುಂದುವರಿಯುತ್ತಿದ್ದು, ಮುಂದಿನ ತಿಂಗಳಿನಿಂದ ಅಕ್ಕಿ ನೀಡಲು ಆಹಾರ ಇಲಾಖೆ ಸಿದ್ದತೆ ನಡೆಸುತ್ತಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿಸುದ್ದಿ; ಆದಷ್ಟು ಬೇಗ ಶುರುವಾಗಲಿದೆ ಹಣದ ಬದಲಿಗೆ ಅನ್ನಭಾಗ್ಯದ 10 ಕೆಜಿ ಅಕ್ಕಿ ವಿತರಣೆ
ಅನ್ನಭಾಗ್ಯ
Follow us on

ಬೆಂಗಳೂರು, ಅ.01: ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಕಾಂಶೆ ಯೋಜನೆಗಳ 5 ಸ್ಕೀಮ್ ಗಳ ಪೈಕಿ ಈಗಾಗಳೆ 3, 4 ಯೋಜನೆಗಳು ಜಾರಿಯಾಗಿದೆ.‌ ಅದರಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಕನಸಿನ ಕೂಸಾದ ಅನ್ನಭಾಗ್ಯ ಯೋಜನೆ (Anna Bhagya Sceme) ಸಧ್ಯ ಜಾರಿಯಾಗಿದೆ.‌ ಅದ್ರಲ್ಲಿ ಡಿಬಿಟಿ ಯೋಜನೆ ಮಾತ್ರ ಮುಂದುವರಿಯುತ್ತಿದ್ದು, ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಮುಂದುವರಿಯಲಿದೆಯಂತೆ.

ಹೌದು, ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿಯನ್ನ ಸರ್ಕಾರ ಆಡಳಿತಕ್ಕೆ ಬಂದ ಮೊದಲ ತಿಂಗಳಲ್ಲಿಯೇ ಈ ಯೋಜನೆ ಜಾರಿಯಾಗಬೇಕಿತ್ತು. ಆದರೆ ಎಫ್​ಎಸ್​ಐ ಅಕ್ಕಿಕೊಡದ ಹಿನ್ನೆಲೆ ಅನಿವಾರ್ಯವಾಗಿ ಡಿಬಿಟಿ ಹಣವನ್ನ ಮುಂದುವರಿಸಲಾಗುತ್ತಿದೆ. ಇನ್ನು ಅನ್ನಭಾಗ್ಯ ಯೋಜನೆಯನ್ನ‌ ಮುಂದುವರಿಸುವ ಸಲುವಾಗಿ ಆಹಾರ ಇಲಾಖೆ ಕಳೆದ ಮೂರು ತಿಂಗಳಿನಿಂದ ಕೆಂದ್ರೀಯಾ ಬಂಡಾರ್, ನಾಫೇಡ್, ಎನ್​ಸಿಸಿಎಫ್, ಮಾರ್ಕೇ ಫೇಡ್, ಕನ್ಸುಮರ್ ರೈಸ್ ಫೆಡರೇಷನ್, ತೆಲಗಂಣ ರೈಸ್ ಫೆಡರೇಷನ್ ಗಳೊಂದಿಗೆ ಮಾತುಕಥೆಯಲ್ಲಿತ್ತು.

ಆದ್ರೆ ಸರ್ಕಾರ ಕೇಳಿದಷ್ಟು ಅಕ್ಕಿ ಸಿಕ್ಕಿರಲಿಲ್ಲ. ಇದೀಗಾ ಅಕ್ಕಿ ಟೆಂಡರ್ ಓಕೆಯಾಗಿದ್ದು, ಅಕ್ಕಿ ನೀಡುವ ಕುರಿತಾಗಿ ಮಾತುಕಥೆಯಾಗುತ್ತಿದ್ಯಂತೆ. ಸಧ್ಯ ಈ ಮಾತುಕಥೆ ಈ ವಾರದಲ್ಲಿ ಫೈನಾಲ್ ಆಗುವ ಸಾಧ್ಯತೆ ಇದ್ದು, ಸೆಪ್ಟೆಂಬರ್ ತಿಂಗಳಲ್ಲಿ ಡಿಬಿಟಿ ಹಣವನ್ನ ಮುಂದುವರಿಸಿ, ನಂತರ ಅಕ್ಟೋಬರ್ ತಿಂಗಳಲ್ಲಿ10 ಕೆಜಿ ಅಕ್ಕಿ ವಿತರಿಸಲು ಆಹಾರ ಇಲಾಖೆ ಸಧ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ. ಸಧ್ಯ ಮೂರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಹಾಗೂ ಡಿಬಿಟಿ ಹಣವನ್ನ ಮುಂದುವರಿಸುತ್ತಿದ್ದು, ಆಗಸ್ಟ್ ತಿಂಗಳಲ್ಲಿ 98% ರಷ್ಟು ಫಲಾನುಭವಿಗಳ ಖಾತೆಗೆ ಜಮಾವಣೆಯಾಗಿದೆ. ಇನ್ನು ಸೆಪ್ಟೆಂಬರ್ ತಿಂಗಳ‌ ಡಿಬಿಟಿ ಪ್ರೋಸೆಸಿಂಗ್ ಇನ್ನು ನಡೆಯುತ್ತಿದ್ದು, ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣವನ್ನ ಸಂಪೂರ್ಣವಾಗಿ ನೀಡಿ, ಮುಂದಿನ ತಿಂಗಳಿನಿಂದ 10 ಕೆಜಿ ಅಕ್ಕಿಯನ್ನೆ ನೀಡುವ ಸಾಧ್ಯತೆ ಇದ್ಯಂತೆ.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಬಳಿಕ ಈಗ ಮೋಹನ್​ಲಾಲ್ ಮೇಲೆ ಲೈಕಾ ಬಂಡವಾಳ

ಇನ್ನು ಡಿಬಿಟಿ ಹಣವನ್ನ ಮುಂದುವರಿಸುತ್ತಿದ್ದರಿಂದ ಇಷ್ಟು ದಿನ ಅನ್ನಭಾಗ್ಯದ ಡಿಬಿಟಿ ಯೋಜನೆಗೆ 750 ಕೋಟಿಯಷ್ಟು ಹಣ ಖರ್ಚಾಗುತ್ತಿದ್ದು, ಇದೀಗಾ ಅಕ್ಕಿಯನ್ನ ನೀಡಲು ಒಟ್ಟು 900 ಕೋಟಿಯಷ್ಟು ವೆಚ್ಚ ವಾಗುತ್ತಿದೆ. ಸಧ್ಯ ರಾಜ್ಯದಲ್ಲಿ ಒಟ್ಟು 1.27 ಕೋಟಿಯಷ್ಟು ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ನೀಡಲು 2 ಲಕ್ಷದ 40 ಸಾವಿರ ಮೆಟ್ರಿಕ್ ಟನ್ ನಷ್ಟು ಅಕ್ಕಿ ಬೇಕಾಗಲಿದ್ಯಂತೆ.

ಒಟ್ನಲ್ಲಿ, ಸಿದ್ದರಾಮಯ್ಯನವರ ಕನಸಿನ ಕೂಸು ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಟೋಬರ್ ತಿಂಗಳಲ್ಲಿ ಜನರಿಗೆ ಸಿಗಲಿದ್ದು, ಇದರ ಉದ್ಘಾಟನಾ ದಿನಾಂಕವನ್ನ ಆಹಾರ ಇಲಾಖೆ ಸಧ್ಯದಲ್ಲೆ ತಿಳಿಸುವ ಸಾಧ್ಯತೆ ಇದ್ದು, ಬಿಪಿಎಲ್ ದಾರರಿಗೆ ಇದು ಸಿಹಿ ಸುದ್ದಿಯೇ ಆಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ