ನಿಖಿಲ್ ಕುಮಾರಸ್ವಾಮಿ ಬಳಿಕ ಈಗ ಮೋಹನ್​ಲಾಲ್ ಮೇಲೆ ಲೈಕಾ ಬಂಡವಾಳ

Mohanlal: ನಿಖಿಲ್ ಕುಮಾರಸ್ವಾಮಿ ಜೊತೆ ಸಿನಿಮಾ ನಿರ್ಮಾಣ ಮಾಡುತ್ತಿರುವ ತಮಿಳಿನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮೋಹನ್​ಲಾಲ್ ಜೊತೆಗೆ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಈ ಸಿನಿಮಾವನ್ನು ಮತ್ತೊಬ್ಬ ಸ್ಟಾರ್ ನಟ ನಿರ್ದೇಶನ ಮಾಡಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಬಳಿಕ ಈಗ ಮೋಹನ್​ಲಾಲ್ ಮೇಲೆ ಲೈಕಾ ಬಂಡವಾಳ
ಮೋಹನ್ ಲಾಲ್
Follow us
ಮಂಜುನಾಥ ಸಿ.
|

Updated on: Sep 30, 2023 | 9:40 PM

ತಮಿಳು-ತೆಲುಗು ಚಿತ್ರರಂಗದ (Tollywood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ (Lyca) ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾದ ಮೇಲೆ ಬಂಡವಾಳ ಹೂಡಿದೆ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆಯಿತು. ನಿಖಿಲ್ ಕುಮಾರಸ್ವಾಮಿಯ ಸಿನಿಮಾ ಲೈಕಾ ಬಂಡವಾಳ ಹೂಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ. ಕನ್ನಡ ಚಿತ್ರರಂಗದ ಬಳಿಕ ಲೈಕಾ ಸಂಸ್ಥೆಯು ಕೇರಳ ಚಿತ್ರರಂಗದ ಕಡೆಗೆ ಹೊರಳಿದೆ. ಅಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾದ ಮೇಲೆ ಬಂಡವಾಳ ಹೂಡಿದೆ.

ತಮಿಳಿನ ’ಇಂಡಿಯನ್’, ’ದರ್ಬಾರ್’, ’ಪೊನ್ನಿಯಿನ್ ಸೆಲ್ವನ್’ ಸರಣಿ ಸಿನಿಮಾ, ’2.0’, ಚಿರಂಜೀವಿಯ ತೆಲುಗು ಸಿನಿಮಾ ’ಖೈದಿ 150’ ಅಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ’ಲೈಕಾ’ ಈಗ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಅಲ್ಲಿನ ಸ್ಟಾರ್ ನಟ ಮೋಹನ್​ಲಾಲ್​ರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

ಮಲಯಾಳಂನ ಸೂಪರ್ ಹಿಟ್ ‘ಲುಸಿಫರ್’ ಸಿನಿಮಾದ ಮುಂದಿವರೆದ ಭಾಗದ ಮೇಲೆ ಲೈಕಾ ಸಂಸ್ಥೆ ಬಂಡವಾಳ ಹೂಡಲಿದೆ. ‘ಲೈಕಾ’ ಒಡೆಯ ಸುಭಾಷ್ ಕರಣ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್, ಪೃಥ್ವಿ ರಾಜ್ ಸುಕುಮಾರ್ ಜೊತೆ ಕೈ ಜೋಡಿಸಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ‘ಲೂಸಿಫರ್’ ಸಿನಿಮಾ ಕಮರ್ಷಿಯಲ್ ಹಾಗೂ ವಿಮರ್ಷಕರಿಂದಲೂ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ನಟನೆ, ಪೃಥ್ವಿರಾಜ್ ನಿರ್ದೇಶನ ಬಗ್ಗೆ ಸಿನಿಮಾ ರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ‘ಲೂಸಿಫರ್’ ಎರಡನೇ ಭಾಗ ನಿರ್ದೇಶಕ ಮಾಡಲು ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ‘ಲೈಕಾ’ ಸಂಸ್ಥೆ ಬಂಡವಾಳ ಹೂಡಲಿದೆ.

ಇದನ್ನೂ ಓದಿ:ಹೆಚ್​ಡಿಕೆ ಆರೋಗ್ಯದ ಬಗ್ಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು? ಇಲ್ಲಿದೆ ವಿವರ

’ಲೂಸಿಫರ್’ ಎರಡನೇ ಅಧ್ಯಾಯಕ್ಕೆ ’ಎಂಪುರನ್’ ಎಂಬ ಹೆಸರು ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಸಿನಿಮಾಕ್ಕೆ ಚಿತ್ರಕಥೆ ಬರೆಯಲಿದ್ದಾರೆ, ಸುಜಿತ್ ವಾಸುದೇವ್ ಸಿನಿಮಾಟೊಗ್ರಫಿ ನೋಡಿಕೊಳ್ಳುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ.

ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ‘ಲೂಸಿಫರ್’ ಸಿನಿಮಾವು 2019ರಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿತ್ತು. ಕೇರಳದಲ್ಲಿ ದಾಖಲೆಯ ಗಳಿಕೆ ಮಾಡಿತ್ತು. ಸಿನಿಮಾವನ್ನು ತೆಲುಗಿನಲ್ಲಿ ‘ಗಾಡ್ ಫಾದರ್’ ಹೆಸರಿನಲ್ಲಿ ರೀಮೇಕ್ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ