ರೀಲ್ಸ್ ಚೆಲುವೆಗೆ ಖುಲಾಯಿಸಿದ ಅದೃಷ್ಟ: ವಿಡಿಯೋ ನೋಡಿ ಹೀರೋಯಿನ್ ಮಾಡಿದ ಆರ್​ಜಿವಿ

Sreelakshmi Satheesh: ಮಲಯಾಳಂ ಯುವತಿಯೊಬ್ಬರ ರೀಲ್ಸ್ ನೋಡಿ ಇಂಪ್ರೆಸ್ ಆಗಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಕೆಯೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಯಾರು ಆ ಚೆಲುವೆ?

ರೀಲ್ಸ್ ಚೆಲುವೆಗೆ ಖುಲಾಯಿಸಿದ ಅದೃಷ್ಟ: ವಿಡಿಯೋ ನೋಡಿ ಹೀರೋಯಿನ್ ಮಾಡಿದ ಆರ್​ಜಿವಿ
ಶ್ರೀಲಕ್ಷ್ಮಿ ಸತೀಶ್
Follow us
ಮಂಜುನಾಥ ಸಿ.
|

Updated on: Sep 30, 2023 | 7:37 PM

ಸಾಮಾಜಿಕ ಜಾಲತಾಣದಲ್ಲಿ (Social Media) ಹಲವರು ಹಲವು ಬಗೆಯ ಕಂಟೆಂಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಸ್ಯ, ಅಡುಗೆ, ಮೇಕಪ್, ಮಾಹಿತಿ, ಶಿಕ್ಷಣ ಹೀಗೆ ಹಲವು ಬಗೆಯ ವಿಡಿಯೋಗಳು ಈಗ ಫೇಸ್​ ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಂನಲ್ಲಿ ತುಂಬಿವೆ. ಇತ್ತೀಚೆಗೆ ರೀಲ್ಸ್​ಗಳು (Reels) ಬಹಳ ಜನಪ್ರಿಯವಾಗಿದ್ದು, ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ಉದ್ಯೋಗವೂ ಆಗಿದೆ ಕೆಲವರಿಗೆ. ರೀಲ್ಸ್​ಗಳಿಂದಲೇ ಜನಪ್ರಿಯತೆ ಗಳಿಸಿರುವ ಹಲವರಿದ್ದಾರೆ. ರೀಲ್ಸ್​ ವಿಡಿಯೋದಿಂದಾಗಿಯೇ ಯುವತಿಯೊಬ್ಬರಿಗೆ ಸಿನಿಮಾ ನಟಿಯಾಗುವ ಅವಕಾಶ ಒದಗಿ ಬಂದಿದೆ.

ಹೌದು, ಹಲವು ಯುವತಿಯರು ತಮ್ಮ ಅಂದ ಪ್ರದರ್ಶಿಸುವ ರೀಲ್ಸ್​ಗಳನ್ನು ಇನ್​ಸ್ಟಾಗ್ರಾಂ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಂತೆಯೇ ಕೇರಳದ ಯುವತಿಯೊಬ್ಬಾಕೆ ಸೀರೆಯುಟ್ಟುಕೊಂರು ಬೇರೆಬೇರೆ ರೀತಿಯ ರೀಲ್ಸ್​ ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದರು. ಯುವತಿಯ ಸೀರೆ ವಿಡಿಯೋ ನೋಡಿದ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂಪ್ರೆಸ್ ಆಗಿದ್ದು, ಆ ಯುವತಿಗೆ ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೀರೆಯುಟ್ಟುಕೊಂಡ ಯುವತಿಯ ರೀಲ್ಸ್ ನೋಡಿದ್ದ ನಿರ್ದೇಶಕ ಸೀರೆ ಸುಂದರವಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು ಆದರೆ ನಾನು ನಂಬಿರಲಿಲ್ಲ, ಆದರೆ ಈ ವಿಡಿಯೋ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಗಿದೆ. ಈ ಚೆಲುವೆ ಯಾರು? ಯಾರಾದರೂ ಹುಡುಕಿ ಕೊಡಿ, ನಾನು ಈಕೆಯೊಟ್ಟಿಗೆ ‘ಸೀರೆ’ ಹೆಸರಿನ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ:RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

ಅದಾದ ಬಳಿಕ ರಾಮ್ ಗೋಪಾಲ್ ವರ್ಮಾ ಮತ್ತೆ ಆ ಯುವತಿಯ ರೀಲ್ಸ್ ಒಂದನ್ನು ಹಂಚಿಕೊಂಡು ಅವರ ಇನ್​ಸ್ಟಾಗ್ರಾಂ ಖಾತೆಯನ್ನು ಮೆನ್ಷನ್ ಮಾಡಿ ನಾನು ಈಕೆಯೊಟ್ಟಿಗೆ ಸಿನಿಮಾ ಮಾಡಲಿದ್ದೇನೆ ಎಂದಿದ್ದರು. ಅಂದಹಾಗೆ ಆ ಸೀರೆ ಚೆಲುವೆ ಹೆಸರು ಶ್ರೀಲಕ್ಷ್ಮಿ ಸತೀಶನ್. ಕೇರಳದ ಈ ಚೆಲುವೆ ಮಾಡೆಲ್ ಆಗಿದ್ದು, ಸೀರೆಯುಟ್ಟುಕೊಂಡು ಹಲವು ಸುಂದರವಾದ ವಿಡಿಯೋಗಳನ್ನು ಮಾಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸೀರೆಯಲ್ಲಿ ಮುದ್ದಾಗಿ ಕಾಣುವ ಜೊತೆಗೆ ಮಾದಕವಾಗಿಯೂ ಶ್ರೀಲಕ್ಷ್ಮಿ ಸತೀಶನ್ ಕಾಣುತ್ತಾರೆ. ರಾಮ್ ಗೋಪಾಲ್ ವರ್ಮಾ ಹೊಗಳಿದ ಬಳಿಕ ಶ್ರೀಲಕ್ಷ್ಮಿಗೆ ಅಚಾನಕ್ಕಾಗಿ ಭಾರಿ ಜನಪ್ರಿಯತೆ ಧಕ್ಕಿದೆ. ರಾಮ್ ಗೋಪಾಲ್ ವರ್ಮಾ ಪೋಸ್ಟ್ ಹಾಕುವ ಮುನ್ನ ಶ್ರೀಲಕ್ಷ್ಮಿಯ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚು ಫಾಲೋವರ್​ಗಳು ಇರಲಿಲ್ಲ, ವರ್ಮಾ ಪೋಸ್ಟ್​ನ ಬಳಿಕ ಒಮ್ಮೆಲೆ ಸುಮಾರು 70 ಸಾವಿರ ಮಂದಿ ಶ್ರೀಲಕ್ಷ್ಮಿಯನ್ನು ಫಾಲೋ ಮಾಡುತ್ತಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶ್ರೀಲಕ್ಷ್ಮಿ ವರ್ಮಾ ಜೊತೆ ಮಾತನಾಡಿದ್ದೇನೆ, ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ಎಂದು ಸಹ ಹೇಳಿದ್ದಾರೆ. ಆದರೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲವಂತೆ. ಅಂದಹಾಗೆ ರಾಮ್ ಗೋಪಾಲ್ ವರ್ಮಾಗೆ ಇವೆಲ್ಲ ಹೊಸದೇನಲ್ಲ. ಈ ಹಿಂದೆ ಅಪ್ಸರಾ ರಾಣಿ ಹೆಸರಿನ ಚೆಲುವೆಯನ್ನು ಜನಪ್ರಿಯಗೊಳಿಸಿದ್ದರು. ಆಕೆ ಈಗ ತೆಲುಗಿನ ಜನಪ್ರಿಯ ಐಟಂ ಸಾಂಗ್ ನಟಿಯಾಗಿದ್ದಾರೆ. ಇದೇ ರೀತಿ ನಿರೂಪಕಿ ಒಬ್ಬರನ್ನು ಫೇಮಸ್ ಮಾಡಿದ್ದರು ವರ್ಮಾ. ಆ ನಿರೂಪಕಿ ಆ ಬಳಿಕ ಬಿಗ್​ಬಾಸ್​ಗೆ ಹೋಗಿ ಬಂದರು. ನಟಿಯೂ ಆಗಿಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ