Viral News: ಶಾಲೆಯಲ್ಲೇ ಶಿಕ್ಷಕರ ರೀಲ್ಸ್, ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ
ಅಪ್ಲೋಡ್ ಮಾಡಿರುವ ವಿಡಿಯೋದ ವೀಕ್ಷಣೆ ಹೆಚ್ಚಾಗಲು ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋವರ್ಸ್ ಹೆಚ್ಚಾಗಲು ಪ್ರತೀ ವಿದ್ಯಾರ್ಥಿಗಳ ಮೇಲೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋ ಮಾಡುವಂತೆ ಒತ್ತಡ ಹೇರಲಾಗಿದೆ. ಲೈಕ್, ಫಾಲೋ ಮಾಡದಿದ್ದರೆ ಹೊಡೆಯುವುದಾಗಿ ಹೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಉತ್ತರ ಪ್ರದೇಶ: ಅಮ್ರೋಹಾ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಗುಂಪೊಂದು ಶಾಲೆಯಲ್ಲಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಮಾತ್ರವಲ್ಲದೇ ಲೈಕ್ಸ್ ಹಾಗೂ ಫಾಲೋವರ್ಸ್ಗಳು ಹೆಚ್ಚಾಗಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಮೂವರು ಶಿಕ್ಷಕರು ವಿಡಿಯೋದಲ್ಲಿ ಕಾಣಿಸಿಕೊಂಡರೆ, ಮತ್ತೊಬ್ಬರು ವಿಡಿಯೋ ಚಿತ್ರೀಕರಿಸಿ, ನಂತರ ‘ರವಿಪೂಜಾ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಇದಷ್ಟೇ ಅಲ್ಲ, ಅಪ್ಲೋಡ್ ಮಾಡಿರುವ ವಿಡಿಯೋದ ವೀಕ್ಷಣೆ ಹೆಚ್ಚಾಗಲು ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋವರ್ಸ್ ಹೆಚ್ಚಾಗಲು ಪ್ರತೀ ವಿದ್ಯಾರ್ಥಿಗಳ ಮೇಲೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋ ಮಾಡುವಂತೆ ಒತ್ತಡ ಹೇರಲಾಗಿದ್ದು, ಲೈಕ್, ಫಾಲೋ ಮಾಡದಿದ್ದರೆ ಹೊಡೆಯುವುದಾಗಿ ಹೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿರುವುದು ಇಂಡಿಯಾ ಟುಡೇಗೆ ವರದಿ ಮಾಡಿದೆ.
ಇದನ್ನೂ ಓದಿ: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ
ಸರ್ಕಾರಿ ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ದೂರು ನೀಡಿದ್ದು, ದೂರಿನಲ್ಲಿ ಅಂಬಿಕಾ ಗೋಯಲ್, ಪೂನಂ ಸಿಂಗ್, ನೀತು ಕಶ್ಯಪ್ ಶಿಕ್ಷಕಿಯರ ಹೆಸರನ್ನು ನಮೂದಿಸಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೆಲ್ಲವು ಸುಳ್ಳು. ಮಕ್ಕಳಿಗೆ ಕಲಿಕೆಯ ವಿಷಯವಾಗಿ ಕೆಲವೊಂದು ವಿಡಿಯೋಗಳನ್ನು ಮಾಡುತ್ತೇವೆ ಎಂದು ಶಿಕ್ಷಕಿ ಅಂಬಿಕಾ ಗೋಯಲ್ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
ರೀಲ್ಸ್ ಮಾಡಿದ ಆರೋಪದ ಹೊರತಾಗಿ ಇತರ ಶಿಕ್ಷಕರ ವಿರುದ್ಧವೂ ಶಾಲೆಯ ವಿದ್ಯಾರ್ಥಿಗಳು ಕಳಪೆ ಬೋಧನೆ ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಗಂಗೇಶ್ವರಿ ಆರತಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: