ಸಾಮಾಜಿಕ ಜಾಲತಾಣ ಬಳಸೋ ಯುವತಿಯರೇ ಎಚ್ಚರ! ಫೇಸ್ ಬುಕ್ನಲ್ಲಿ ಹಿಂದೂ ಹೆಸರು ಇಟ್ಟುಕೊಂಡು ಯುವತಿಗೆ ವಂಚನೆ
ಸಾಮಾಜಿಕ ಜಾಲತಾಣ ಬಳಸುವ ಯುವತಿಯರೇ ಎಚ್ಚರವಾಗಿರುವುದು ಒಳಿತು. ಹೌದು, ಫೇಸ್ಬುಕ್(Facebook)ನಲ್ಲಿ ಹಿಂದೂ ಎಂಬ ಹೆಸರು ಹಾಕಿಕೊಂಡು ಚಂದದ ಯುವತಿಯನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಂಡು ಖೆಡ್ಡಾಗೆ ಕೆಡವಿದ್ದ ಆಸಾಮಿಯೊಬ್ಬ, ಕಾಲೇಜು ಯುವತಿಗೆ ವಂಚಿಸಿದ್ದು, ಈ ಘಟನೆ ಇದೀಗ ಬೆಳಕಿಗೆ ಬಂದಿದೆ.
ಬೆಂಗಳೂರು, ಸೆ.28: ಕಾಲಾಮಾನ ಬದಲಾದಂತೆ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವುದು ಸರ್ವೇಸಾಮಾನ್ಯ. ಅದರಂತೆ ಇಂದು ಸಾಮಾಜಿಕ ಜಾಲತಾಣ(Social Media) ದಲ್ಲಿಯೇ ಎಲ್ಲೂರು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣ ಬಳಸುವ ಯುವತಿಯರೇ ಎಚ್ಚರವಾಗಿರುವುದು ಒಳಿತು. ಹೌದು, ಫೇಸ್ಬುಕ್(Facebook)ನಲ್ಲಿ ಹಿಂದೂ ಎಂಬ ಹೆಸರು ಹಾಕಿಕೊಂಡು ಚಂದದ ಯುವತಿಯನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಂಡು ಖೆಡ್ಡಾಗೆ ಕೆಡವಿದ್ದ ಆಸಾಮಿಯೊಬ್ಬ, ಕಾಲೇಜು ಯುವತಿಗೆ ವಂಚಿಸಿದ್ದು, ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಆತನಿಂದ ಬೇಸೆತ್ತು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಹೌದು, ಅನ್ಯಕೋಮಿನ ವ್ಯಕ್ತಿಯೊಬ್ಬ ಕಾಲೇಜು ಯುವತಿಯ ಜೊತೆ ಐದು ವರ್ಷ ಲಿವಿಂಗ್ ಟುಗೆದರ್ ನಡೆಸಿದ್ದಾನೆ. ಕೆಲ ದಿನಗಳ ಬಳಿಕ ಆತನ ಅಸಲಿಯತ್ತು ಬಯಲಿಗೆ ಬಂದಿದೆ. ಇತ ಫೇಸ್ ಬುಕ್ ನಲ್ಲಿ ‘ಗುರುಪ್ರಸಾದ್’ ಹೆಸರು ಹಾಕಿಕೊಂಡಿದ್ದ. ಆದರೆ, ಆತನ ನಿಜವಾದ ಹೆಸರು ರಫೀಕ್ ಬಾದ್ ಶಾ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಇದಾದ ಬಳಿಕ ಆತ ಅನ್ಯ ಕೋಮಿನವನು ಎಂದು ಗೊತ್ತಾಗಿಯೂ ಆತನ ಜೊತೆಗೆ ಯುವತಿ ವಾಸವಿದ್ದಳು. ಸದ್ಯ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಇತ್ತೀಚೆಗೆ ಕಿರುಕುಳ ಕೊಡಲು ಆರಂಭಿಸಿದ್ದ. ಈ ಹಿನ್ನಲೆ ಯುವತಿ ತನ್ನ ತಂದೆ ಮನೆಗೆ ಹೋಗಿ ವಾಸವಿದ್ದಳು. ಆದರೂ ರಫೀಕ್ ಯುವತಿಯ ಬೆನ್ನು ಬಿದ್ದು, ಪ್ರತಿದಿನ ಕಿರುಕುಳ ನೀಡುತ್ತದ್ದನಂತೆ. ಹೀಗಾಗಿ ಆತನಿಂದ ಬೇಸತ್ತು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ನೊಂದ ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಇದನ್ನೂ ಓದಿ:Cyber Crime: ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ ವಂಚನೆ, ಪೊಲೀಸರು ಹೇಳಿದ ಕಿವಿ ಮಾತೇನು?
ಇನ್ನು ಬೆಂಗಳೂರಿನಲ್ಲಿ ಆಗಸ್ಟ್ 10 ರಂದು ವಿದೇಶದಿಂದ ಉಡುಗೊರೆಗಳನ್ನು ಕಳುಹಿಸುವುದಾಗಿ ಯಾಮಾರಿಸಿ ವ್ಯಕ್ತಿಯೋರ್ವನಿಂದ 5 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ನಡೆದಿತ್ತು. ಬೆಂಗಳೂರಿನ ಪೀಣ್ಯ ನಿವಾಸಿಯಾದ ಪ್ಯಾಟ್ರಿಕ್ ರೋಹನ್ ಎಂಬುವವರು ವಂಚನೆಗೊಳಗಾದ ವ್ಯಕ್ತಿ. ಇವರು ಫೇಸ್ ಬುಕ್ನಲ್ಲಿ ನಾಲ್ವರು ಅಪರಿಚಿತರ ಜೊತೆ ಸ್ನೇಹ ಬೆಳೆಸಿ ಲಕ್ಷಾಂತರ ರೂ. ಕಳೆದುಕೊಂಡಿದ್ದರು. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಯು/ಎಸ್-66(ಸಿ), 66(ಡಿ)) ಐಪಿಸಿ 1860 (ಯು/ಎಸ್-420) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದರೂ, ಎಚ್ಚರವಾಗದೇ ಪುನಃ ಎಡವುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ