ಬೆಂಗಳೂರು: ಹಳೇ ದ್ವೇಷಕ್ಕೆ ಹತ್ಯೆ; ನಾಲ್ವರು ಆರೋಪಿಗಳ ಬಂಧನ
ಬೆಂಗಳೂರಿನ ಬಸವನಗುಡಿಯಲ್ಲಿ ಹಳೇ ದ್ವೇಷಕ್ಕೆ ಅರ್ಬಾಜ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸೀಫ್, ಶಬ್ಬೀರ್, ಅರ್ಮಾನ್, ಶಫಿ ಬಂಧಿತ ಆರೋಪಿಗಳು. ಇನ್ನು ಕೊಲೆಯಾದ ಅರ್ಬಾಜ್ ಹಾಗೂ ಈ ನಾಲ್ವರು ಆರೋಪಿಗಳು ಸೇರಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದರು.
ಬೆಂಗಳೂರು, ಸೆ.28: ಇದೇ ತಿಂಗಳ 22 ರಂದು ಬೆಂಗಳೂರಿನ(Bengaluru) ಬಸವನಗುಡಿಯಲ್ಲಿ ಹಳೇ ದ್ವೇಷಕ್ಕೆ ಅರ್ಬಾಜ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸೀಫ್, ಶಬ್ಬೀರ್, ಅರ್ಮಾನ್, ಶಫಿ ಬಂಧಿತ ಆರೋಪಿಗಳು. ಇನ್ನು ಕೊಲೆಯಾದ ಅರ್ಬಾಜ್ ಹಾಗೂ ಈ ನಾಲ್ವರು ಆರೋಪಿಗಳು ಸೇರಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದರು. ಈ ಹಿನ್ನಲೆ ಪ್ರಕರಣವೊಂದರಲ್ಲಿ ಅರ್ಬಾಜ್ನನ್ನು ಜಯನಗರ ಪೊಲೀಸರು ಬಂಧಿಸಿದ್ದರು. ಈ ವೇಳೆ ವಿಚಾರಣೆ ನಡೆಸುವಾಗ ಅರ್ಬಾಜ್ ಉಳಿದ ಆರೋಪಿಗಳ ಹೆಸರು ಬಾಯ್ಬಿಟ್ಟಿದ್ದ. ಅದೇ ವಿಚಾರಕ್ಕೆ ನಾಲ್ವರು ಆರೋಪಿಗಳು ಸೇರಿಕೊಂಡು ಶುಕ್ರವಾರ (ಸೆ.22) ಅರ್ಬಾಜ್ನನ್ನು ಕೊಲೆಗೈದಿದ್ದರು.
ಹಳೆ ಸೇಡಿಗಾಗಿ ಕೊಲೆ ಮಾಡಿದ್ದ ನಾಲ್ವರು ಅರೆಸ್ಟ್
ಹೌದು, ಈ ಹಿಂದೆ ಎರಡು ವಿಚಾರಕ್ಕೆ ಅರೋಪಿಗಳು ಕೋಪ ಇಟ್ಟುಕೊಂಡಿದ್ದರು. ಕೊಲೆಯಾದ ಅರ್ಬಾಜ್ ಹಾಗೂ ಆರೋಪಿ ಗಳು ಮೊಬೈಲ್ ಕಳ್ಳತನ ಮಾಡುತ್ತಿದ್ದವರು. ಈ ಹಿಂದೆ ಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಾಗ ಮೃತ ವ್ಯಕ್ತಿ ಉಳಿದ ನಾಲ್ವರು ಹೆಸರು ಹೇಳಿದ್ದ. ಈ ಸಂಭಂದ ಉಳಿದ ಆರೋಪಿಗಳನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಇದಾದ ಬಳಿಕ ಗಲಾಟೆ ಮಾಡಿಕೊಂಡಿದ್ದ ಆರೋಪಿಗಳು, ಬಳಿಕ ಮತ್ತೆ ಅರ್ಬಾಜ್ ಮಾತುಕಥೆಗೆ ಕರೆಸಿದ್ದ. ಈ ವೇಳೆ ನಾಲ್ವರಿಗೂ ಹಲ್ಲೆ ಮಾಡಿದ್ದನಂತೆ. ಈ ವಿಚಾರಕ್ಕೆ ಕೋಪಗೊಂಡಿದ್ದವರು, ಹೀಗಾಗಿ ಮೃತ ವ್ಯಕ್ತಿ ಒಬ್ಬನೆ ಇದ್ದಾಗ ಪ್ಲಾನ್ ಮಾಡಿ, ಬಸವನಗುಡಿ ಬಳಿ ಒಬ್ಬನೆ ಇದ್ದಾಗ ದಾಳಿ ಮಾಡಿ ಕೊಲೆ ಮಾಡಿದ್ದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಯತ್ನ: ಅದೃಷ್ಟವಶಾತ್ ಪಾರಾದ ಇಬ್ಬರು ಯುವಕರು, ಬಂಧನ
ಜಿಂಕೆ ಮೇಲೆ ನಾಯಿಗಳ ದಾಳಿ; ಗಾಯಗೊಂಡಿದ್ದ ಜಿಂಕೆಯ ರಕ್ಷಣೆ
ಮೈಸೂರು: ಕಾಡಿನಿಂದ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ಮಾಡಿದ್ದು, ನಾಯಿಗಳ ದಾಳಿಗೆ ಗಾಯಗೊಂಡಿದ್ದ ಜಿಂಕೆಯನ್ನು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಉಪ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ. ದಾರಿ ತಪ್ಪಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿಗೆ ಬಂದಿದ್ದ ಜಿಂಕೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿತ್ತು. ಇದರಿಂದ ಜಿಂಕೆಯ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ನಾಯಿಗಳು ಜಿಂಕೆಯನ್ನ ಅಟ್ಟಾಡಿಸುತ್ತಿದ್ದನ್ನು ಕಂಡ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಉಪ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಜಿಂಕೆಯ ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ನಗರದ ಸಸ್ಯಕಾಶಿಯ ಅರಣ್ಯಕ್ಕೆ ಜಿಂಕೆಯನ್ನು ರವಾನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ