ಬೀದಿ ನಾಯಿಗಳಿಗೆ ಆಹಾರ ಹಾಕಿದ ನೌಕಾಪಡೆಯ ಮಾಜಿ ಎಂಜಿನಿಯರ್ ಮೇಲೆ ಕಟ್ಟಿಗೆಯಿಂದ ಬಡಿದು ಹಲ್ಲೆ
ಬೀದಿ ನಾಯಿಗಳಿಗೆ ಆಹಾರ ಹಾಕಿದ ನೌಕಾಪಡೆಯ ಮಾಜಿ ಎಂಜಿನಿಯರ್ ಮೇಲೆ ಹಲ್ಲೆ ನಡೆದಿದೆ. ಯಲಹಂಕ ತಾಲೂಕಿನ ಚೊಕ್ಕನಹಳ್ಳಿಯ ಎನ್‌ಆರ್ ಲೇಔಟ್ ನಿವಾಸಿ ಕೆ ಅಮರನಾಥ ಚವ್ಹಾಣ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಚೊಕ್ಕನಹಳ್ಳಿಯ ಎಸ್ ಮತ್ತು ಎನ್ ಲೇಔಟ್ ನಲ್ಲಿ ಭಾನುವಾರ ಬೆಳಗ್ಗೆ 7:15 ರಿಂದ 7:30 ರ ನಡುವೆ ಅವರ ಮೇಲೆ ಹಲ್ಲೆ ನಡೆದಿದೆ.
ಬೆಂಗಳೂರು, ಸೆಪ್ಟೆಂಬರ್ 28: ಯಲಹಂಕ ಸಮೀಪದ ಚೊಕ್ಕನಹಳ್ಳಿಯಲ್ಲಿ (Chokkanahalli near Yelahanka) ಬೀದಿ ನಾಯಿಗಳಿಗೆ (stray dogs) ಆಹಾರ ನೀಡುತ್ತಿದ್ದ ಭಾರತೀಯ ನೌಕಾಪಡೆಯ (Indian Navy) 74 ವರ್ಷದ ನಿವೃತ್ತ ಎಂಜಿನಿಯರ್ (engineer) ಮೇಲೆ ಕಳೆದ ಭಾನುವಾರ ಸ್ಥಳೀಯ ವ್ಯಕ್ತಿಯಿಂದ ಹಲ್ಲೆ (attack) ನಡೆದಿದೆ. ಕೊನೆಗೆ, ಸ್ಥಳೀಯ ನಿವಾಸಿಯೊಬ್ಬರು ಮರದ ಹಲಗೆಯಿಂದ ಪೆಟ್ಟು ತಿಂದು ಗಾಯಗೊಂಡ ವೃದ್ಧನನ್ನು (victim) ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯಲಹಂಕ ತಾಲೂಕಿನ ಚೊಕ್ಕನಹಳ್ಳಿಯ ಎನ್‌ಆರ್ ಲೇಔಟ್ ನಿವಾಸಿ ಕೆ ಅಮರನಾಥ ಚವ್ಹಾಣ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಚೊಕ್ಕನಹಳ್ಳಿಯ ಎಸ್ ಮತ್ತು ಎನ್ ಲೇಔಟ್ ನಲ್ಲಿ ಭಾನುವಾರ ಬೆಳಗ್ಗೆ 7:15 ರಿಂದ 7:30 ರ ನಡುವೆ ಅವರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರದೇಶದ ನಿವಾಸಿಯಾಗಿರುವ ತಾನು ಪ್ರತಿದಿನ ಬೆಳಗ್ಗೆ 7 ರಿಂದ 7:45 ರವರೆಗೆ ಬೆಳಗಿನ ವಾಕ್ ಮಾಡುತ್ತೇನೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ newindianexpress.com TNIE ವರದಿ ಮಾಡಿದೆ.
ತನ್ನ ಕಾಲ್ನಡಿಗೆ ಸಮಯದಲ್ಲಿ ಬೀದಿನಾಯಿಗಳಿಗೆ ಬಿಸ್ಕೆಟ್‌ಗಳನ್ನು ತಿನ್ನಿಸುತ್ತೇನೆ. ಮೊನ್ನೆ ಭಾನುವಾರವೂ ಎಂದಿನಂತೆ ತಮ್ಮ ದಿನಚರಿ ಅನುಸರಿಸುತ್ತಿದ್ದಾಗ ಶಂಕಿತ ಆರೋಪಿ (ಎಸ್ ಮತ್ತು ಎನ್ ಲೇಔಟ್‌ನ ಚಂದ್ರಪ್ಪ ಎಂದು ಗುರುತಿಸಲಾಗಿದೆ) ತನ್ನ ಮನೆಯ ಹೊರಗೆ ನಿಂತು ಅಮರನಾಥ್ ವಿರುದ್ಧ ಜೋರಾಗಿ ಕೂಗಾಡಿದ್ದಾನೆ. ಅಮರನಾಥ್ ಕೂಗಾಡುತ್ತಿದ್ದ ಆ ವ್ಯಕ್ತಿಯ ಬಳಿ ಹೋದಾಗ, ನಾಯಿಗಳಿಗೆ ಆಹಾರ ಹಾಕುತ್ತೀಯಾ ಎಂದು ಜರಿದವನೆ, ಮರದ ಹಲಗೆಯಿಂದ ಆ ಮಾಜಿ ನೌಕಾಪಡೆಯ ಅಧಿಕಾರಿಗೆ ಹೊಡೆದಿದ್ದಾನೆ. ಬೀದಿನಾಯಿಗಳಿಗೆ ಮತ್ತೊಮ್ಮೆ ಆಹಾರ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಆರೋಪಿಯು ಅಮರನಾಥ್‌ಗೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ವೃದ್ಧನನ್ನು ಬಾಗಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
Also Read: ಬೀದಿನಾಯಿಗಳ ಉಪಟಳಕ್ಕೆ ಬೆಂಗಳೂರಿಗರು ಗಢಗಢ ನಡುಗುತ್ತಿದ್ದಾರೆ, ಬಿಬಿಎಂಪಿ ನಾಯಿಗಳ ಲೆಕ್ಕ ಹಾಕುತ್ತಿದೆ!
ಆರೋಪಿಯನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಸಂತ್ರಸ್ತ ವೃದ್ಧರು TNIE ಗೆ ತಿಳಿಸಿದ್ದಾರೆ. “ನಾನು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಮತ್ತು ಘಟನೆಯ ನಂತರ ಬೆಡ್ ರೆಸ್ಟ್ಗೆ ಸಲಹೆ ನೀಡಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ. ಆರೋಪಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಶಂಕಿತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಕೆಲ ಸೆಕ್ಷನ್‌ಗಳ ಜೊತೆಗೆ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ