ಬಾಗಿಲಿಗೆ ಬಂತು ಸರ್ಕಾರ: ಜನರಿಂದ ಡಿಕೆ ಶಿವಕುಮಾರ್​​ಗೆ ಬಂದಿವೆ ಎರಡು ಸಾವಿರಕ್ಕೂ ಅಧಿಕ ದೂರುಗಳು

ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕೆ.ಆರ್​.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಇಂದಿನಿಂದ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಜನರಿಂದ ಎರಡು ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ. ಸಮಸ್ಯೆಗಳ ಸರಮಾಲೆ ಹೊತ್ತು ಎರಡು ಸಾವಿರಕ್ಕೂ ಅಧಿಕ ಜನರು ಬಂದಿದ್ದರು. ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದ ಡಿಕೆ ಶಿವಕುಮಾರ್​ ಅಹವಾಲು ಆಲಿಸಿದ್ದಾರೆ.

ಬಾಗಿಲಿಗೆ ಬಂತು ಸರ್ಕಾರ: ಜನರಿಂದ ಡಿಕೆ ಶಿವಕುಮಾರ್​​ಗೆ ಬಂದಿವೆ ಎರಡು ಸಾವಿರಕ್ಕೂ ಅಧಿಕ ದೂರುಗಳು
ಜನರಿಂದ ದೂರುಗಳು ಸ್ವೀಕರಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jan 03, 2024 | 5:07 PM

ಬೆಂಗಳೂರು, ಜನವರಿ 03: ಇಂದಿನಿಂದ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)  ಅವರ ನೇತೃತ್ವದಲ್ಲಿ ಕೆ.ಆರ್​.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ಗೆ ಜನರಿಂದ ಎರಡು ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ. ಸಮಸ್ಯೆಗಳ ಸರಮಾಲೆ ಹೊತ್ತು ಎರಡು ಸಾವಿರಕ್ಕೂ ಅಧಿಕ ಜನರು ಬಂದಿದ್ದರು.

ಎರಡು ವಿಧಾನಸಭಾ ಕ್ಷೇತ್ರದಿಂದ ಇಲ್ಲಿಯವರೆಗೂ ಅಹವಾಲು ಸಲ್ಲಿಸಲು 2,147 ಜನರಿಂದ ನೋಂದಣಿ ಮಾಡಿಕೊಂಡಿದ್ದರು. ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದ ಡಿಕೆ ಶಿವಕುಮಾರ್​ ಅಹವಾಲು ಆಲಿಸಿದ್ದಾರೆ.

ಇದನ್ನೂ ಓದಿ: ಜನಸ್ಪಂದನಕ್ಕೆ ಚಾಲನೆ; ಏನೇ ಸಮಸ್ಯೆ ಇದ್ರೂ ಹೇಳಿ, ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್

ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ್ದು, ಅಧಿಕಾರಿಗಳನ್ನೇ ಕರೆದು ತಕ್ಷಣ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಯಾವ ಇಲಾಖೆಯವರೂ ಸಮಸ್ಯೆ ಬಗೆಹರಿಸಬೇಕು ಎಂದು ಡಿಕೆ ಶಿವಕುಮಾರ್​ ಅವರು ಬರೆದು ಕೊಟ್ಟಿದ್ದಾರೆ. ದೂರು ನೀಡಿದ ಬಳಿಕ‌ ಆಯಾ ಡಿಪಾರ್ಟಮೆಂಟ್ ಕೌಂಟರ್ ನಲ್ಲಿ ದೂರು ನೋಂದಣಿ ಮಾಡಲಾಗಿದೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಹಲವು ಸಂಸ್ಥೆಗಳಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ 3,431 ದೂರುಗಳನ್ನ ಸ್ವೀಕಾರ ಮಾಡಿದ್ದೇನೆ. ಎರಡು ಕ್ಷೇತ್ರಗಳ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದ್ದೇನೆ. ಎಲ್ಲ ಅರ್ಜಿಗಳನ್ನ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಅನೇಕ ದೂರುಗಳು ಬಂದಿದ್ದು, ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ.

ಇದನ್ನೂ ಓದಿ: ಇಂದಿನಿಂದ ಜನಸ್ಪಂದನ ಕಾರ್ಯಕ್ರಮ; ಐಟಿಐ ಕ್ರೀಡಾಂಗಣದಲ್ಲಿ ನಡೆದಿದೆ ವಿಶೇಷ ಸಿದ್ಧತೆ, ಮಾಹಿತಿ ಇಲ್ಲಿದೆ

ಬಾಕಿ ಕ್ಷೇತ್ರಗಳಲ್ಲೂ ನಮ್ಮ ಕೆಲಸ ಮುಂದುವರಿಸುತ್ತೇವೆ. ನಾನು ಸಿಎಂ ದೆಹಲಿಗೆ ಹೋಗುತ್ತಿದ್ದೇವೆ. ನಾಡಿದ್ದು ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ಇದೆ. ರಸ್ತೆ ಸೇರಿದಂತೆ ಹಲವು ಸಮಸ್ಯೆಗಳ ದೂರು ಬಂದಿದೆ. ಐದು ಗ್ಯಾರೆಂಟಿಗಳ ಸಮಸ್ಯೆ ಕುರಿತು ಅರ್ಜಿ ಬಂದಿದ್ದವು. ಬೆಸ್ಕಾಂನಿಂದ ಯಾವುದೇ ದೂರುಗಳು ಬಂದಿಲ್ಲ. ಗೃಹ ಲಕ್ಷ್ಮಿಗೆ ಕೆಲವರು ಗಂಡನ ಫೋನ್ ನಂಬರ್​ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಫಾಲೋ ಮಾಡುವುದಕ್ಕೆ ಒಂದು ತಂಡ ಇಡುತ್ತೇವೆ. ಕೆಲವೊಂದು ವೈಯಕ್ತಿಕ ಸಮಸ್ಯೆ ಇರುತ್ತೆ. ಅದನ್ನೆಲ್ಲ ಪರಿಶೀಲಿಸಿ ಎಲ್ಲರಿಗೂ ಪರಿಹಾರ ನೀಡುತ್ತೇವೆ. ಭ್ರಷ್ಟಾಚಾರ ಕಂಟ್ರೋಲ್ ಮಾಡಲಾಗುವುದು. ಸಾಕ್ಷಿ ಆಧರಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.