ಎಡಿಜಿಪಿ ಭಾಸ್ಕರ್​ ರಾವ್​ ಸೇವೆಯಿಂದ ಸ್ವಯಂ ನಿವೃತ್ತಿಗೆ ಅನುಮೋದಿಸಿದ ಕರ್ನಾಟಕ ಸರ್ಕಾರ

| Updated By: ಆಯೇಷಾ ಬಾನು

Updated on: Dec 30, 2021 | 8:21 AM

ಬೆಂಗಳೂರು ಮಾಜಿ ಪೊಲೀಸ್​​ ಕಮಿಷನರ್​ ಮತ್ತು ಹೆಚ್ಚುವರಿ  ಪೊಲೀಸ್​ ಮಹಾನಿರ್ದೇಶಕ  ಭಾಸ್ಕರ್​ ರಾವ್​ ಅವರು ಸಲ್ಲಿಸಿದ್ದ ಸ್ವಯಂ ನಿವೃತ್ತಿ ಅರ್ಜಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದೆ.

ಎಡಿಜಿಪಿ ಭಾಸ್ಕರ್​ ರಾವ್​ ಸೇವೆಯಿಂದ ಸ್ವಯಂ ನಿವೃತ್ತಿಗೆ ಅನುಮೋದಿಸಿದ ಕರ್ನಾಟಕ ಸರ್ಕಾರ
ಎಡಿಜಿಪಿ ಭಾಸ್ಕರ್​ ರಾವ್​
Follow us on

ಬೆಂಗಳೂರು: ಬೆಂಗಳೂರು ಮಾಜಿ ಪೊಲೀಸ್​​ ಕಮಿಷನರ್​ ಮತ್ತು ಹೆಚ್ಚುವರಿ  ಪೊಲೀಸ್​ ಮಹಾನಿರ್ದೇಶಕ  ಭಾಸ್ಕರ್​ ರಾವ್​ ಅವರು ಸಲ್ಲಿಸಿದ್ದ ಸ್ವಯಂ ನಿವೃತ್ತಿ ಅರ್ಜಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ ಭಾಸ್ಕರ್​ ರಾವ್​ ಅವರು ಡಿಸೆಂಬರ್​ 31ರಂದು ನಿವೃತ್ತಿ ಪಡೆಯಲಿದ್ದಾರೆ. ಪೊಲೀಸ್​ ಇಲಾಖೆ ಬಿಟ್ಟು ರಾಜಕೀಯಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು ಆದರೆ ಈ ಬಗ್ಗೆ ಅವರು ಆ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನನ್ನ ಕುಟುಂಬದೊಂದಿಗೆ ಸಮಯಕಳೆಯಲು ಬಯಸುತ್ತೇನೆ ಎಂದಿದ್ದಾರೆ.

1990ರ ಬ್ಯಾಚ್​ನಲ್ಲಿ  ಐಪಿಎಸ್​ ಪಾಸ್​ ಮಾಡುವ ಮೂಲಕ ಭಾರತೀಯ ಪೊಲೀಸ್​ ಇಲಾಖೆಗೆ ಭಾಸ್ಕರ್​ ರಾವ್​ ಸೇರಿದ್ದರು. ಕಳೆದ ಸಪ್ಟಂಬರ್​ನಲ್ಲಿ  ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಕೂಡಲೇ ಕಡತವನ್ನು ಪರಿಶೀಲನೆ ನಡೆಸಬೇಕು  ಎಂದು ಮನವಿ ಮಾಡಿದ್ದರು. ಆದರೆ ಹಲವು ದಿನಗಳ ಕಾಲ ಅರ್ಜಿಯ ಕಡತ ಬಕಿ ಉಳಿದಿತ್ತು.  ಇದೀಗ ಸರ್ಕಾರ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಪರಿಗಣಿಸಿ ಇತ್ತೀಚೆಗೆ ಮುಖ್ಯಮಂತ್ರಿಗಳು ಸಹಿ ಮಾಡಿದ್ದರು. ಈ ಮೂಲಕ ಇದೇ ಡಿಸೆಂಬರ್​ 31ರಂದು ಭಾಸ್ಕರ್​ರಾವ್​ ಅಧಿಕಾರದಿಂದ ಹೊರಬರಲಿದ್ದಾರೆ. 1964ರಂದು ಜನಿಸಿದ ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಭಾಸ್ಕರ್​ ರಾವ್​ ಅವರ ನಿವೃತ್ತಿಯ  ಬಳಿಕ ರಾಜ್ಯದಲ್ಲಿ ಎಡಿಜಿಪಿಯ ಎರಡನೇ ಶ್ರೇಣಿಯ ಹುದ್ದೆ ಖಾಲಿ ಬೀಳಲಿದೆ.

ಇದನ್ನೂ ಓದಿ:

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ: ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಪ್ರಕಟ

Published On - 4:35 pm, Wed, 29 December 21