AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರೇ ಹೆದರುವಂತೆ ನಮ್ಮ ಮೇಲೆ ಹಲ್ಲೆ ಮಾಡಲಾಯಿತು: ಆಪ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ

ಘಟನೆ ನಡೆದು ಒಂದು ದಿನವಾದ್ರೂ ಆರೋಪಿಗಳನ್ನು ಬಂಧಿಸಿಲ್ಲ. ಗೂಂಡಾಗಿರಿ ದೃಶ್ಯ ಪೊಲೀಸರ ಫೋನ್‌ಗಳಲ್ಲಿ ರೆಕಾರ್ಡ್‌ ಆಗಿದೆ ಎಂದು ದೂರಿದರು.

ಪೊಲೀಸರೇ ಹೆದರುವಂತೆ ನಮ್ಮ ಮೇಲೆ ಹಲ್ಲೆ ಮಾಡಲಾಯಿತು: ಆಪ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 29, 2021 | 5:21 PM

Share

ಬೆಂಗಳೂರು: ನಗರದಲ್ಲಿ ಆಮ್ ಆದ್ಮಿ ಪಾರ್ಟಿ (Aam Admi Party – AAP) ಕಾರ್ಯಕರ್ತರ ಮೇಲೆ ಬಿಜೆಪಿ ಶಾಸಕ ರಘು ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ ಎಂದು ಆಪ್ ಮುಖಂಡರು ಬುಧವಾರ ದೂರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ನಾಯಕ ಎಚ್​.ಡಿ.ಬಸವರಾಜು, ಧರಣಿ ನಡೆಸುತ್ತಿದ್ದ ಆಪ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಠಾಣೆಗೆ ಕರೆದೊಯ್ಯುವಾಗ ಜೆ.ಬಿ.ನಗರ ಠಾಣೆ ಸಿಬ್ಬಂದಿಯೇ ಹೆದರುವಂತೆ ಹಲ್ಲೆ ನಡೆಸಲಾಯಿತು. ಈ ವೇಳೆ ಠಾಣೆಗೆ ಶಾಸಕ ರಘು ಪಿಎ ಉನ್ನಿಕೃಷ್ಣನ್‌ ಇತರರು ಬಂದಿದ್ದರು. ಘಟನೆ ನಡೆದು ಒಂದು ದಿನವಾದ್ರೂ ಆರೋಪಿಗಳನ್ನು ಬಂಧಿಸಿಲ್ಲ. ಗೂಂಡಾಗಿರಿ ದೃಶ್ಯ ಪೊಲೀಸರ ಫೋನ್‌ಗಳಲ್ಲಿ ರೆಕಾರ್ಡ್‌ ಆಗಿದೆ. ಇದನ್ನೇ ಸಾಕ್ಷಿಯಾಗಿ ಬಳಸಿಕೊಂಡು ಆರೋಪಿಗಳನ್ನು ಬಂಧಿಸಲಿ ಎಂದು ಅವರು ಒತ್ತಾಯಿಸಿದರು.

ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಆರೋಪಿ ನವೀನ್, ಅನೂಪ್ ಬಂಧನ ಎಲೆಕ್ಟ್ರಾನಿಕ್ಸ್ ಸಿಟಿಯ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಅರವಿಂದ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ, ಇಬ್ಬರು ಮಕ್ಕಳಾದ ಬಳಿಕ ವಿಚ್ಛೇದನ ಪಡೆದಿದ್ದರು. ರಿಯಲ್ ಎಸ್ಟೇಟ್ ಬ್ಯುಸಿನೆಸ್​ನಲ್ಲಿ ತೊಡಗಿಸಿಕೊಂಡಿದ್ದ ಅವರು, ರೌಡಿಗಳ ಸಂಪರ್ಕ ಹೊಂದಿದ್ದರು. ಸಿದ್ದಿಕ್ ಹಾಗೂ ಜಯ ಕರ್ನಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನವೀನ್ ಎನ್ನುವವರೊಂದಿಗೂ ಸ್ನೇಹವಿತ್ತು. ನಂತರದ ದಿನಗಳಲ್ಲಿ ರೋಹಿತ್​ನೊಂದಿಗೂ ಸ್ನೇಹ ಬೆಳೆದಿತ್ತು. ಸಂಬಂಧಗಳ ಗೋಜಲಿನಲ್ಲಿ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ.

ಅರ್ಚನಾ‌ ಮಗಳ ಜತೆ ಕೆಲದಿನಗಳ‌‌ ಹಿಂದಷ್ಟೇ ನವೀನ್ ಮನೆ ಶಿಫ್ಟ್‌ ಮಾಡಿದ್ದ. ಅರ್ಚನಾ ಹಾಗೂ ಬೇಗೂರಿನ‌ ಎಸ್ಎನ್ಎನ್ ಅಪಾರ್ಟ್​ಮೆಂಟ್​ನಲ್ಲಿ ಅರ್ಚನಾ ಮಗಳೊಂದಿಗೆ ನವೀನ್ ವಾಸವಿದ್ದ. ಮಗಳನ್ನು ದೂರ ಮಾಡಿದ್ದ ಬಗ್ಗೆ ದೂರು ನೀಡಿದ್ದರು. ಮನೆ ಮಾರಿದ್ದ ದುಡ್ಡು ಮಗಳ ಅಕೌಂಟ್​ನಲ್ಲಿತ್ತು. ಎಚ್ಎಸ್ಆರ್ ಬಡಾವಣೆಯಲ್ಲಿ ಮನೆ ಮಾರಿದ್ದ ಅರ್ಚನಾ, ₹ 3 ಕೋಟಿಗೂ ಅಧಿಕ ಹಣ ತನ್ನ ಖಾತೆಯಲ್ಲಿ ಇಟ್ಟುಕೊಂಡಿದ್ದರು. ಬೆಳ್ಳಂದೂರಿನಲ್ಲಿ ಮಗನೊಂದಿಗೆ ವಾಸವಿದ್ದರು. ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನವೀನ್ ಮತ್ತು ಅನೂಪ್ ಅವರನ್ನು ಬಂಧಿಸಿದ್ದಾರೆ.

ಶ್ರದ್ಧಾಕೇಂದ್ರಗಳಿಗೆ ಕಾಂಡೋಮ್ ಹಾಕುತ್ತಿದ್ದ ಆರೋಪಿ ಬಂಧನ ಮಂಗಳೂರು: ಕರಾವಳಿಯ ದೈವಸ್ಥಾನ, ದೇವಸ್ಥಾನ, ಸಿಖ್ ಗುರುದ್ವಾರ, ಬಸದಿ, ದರ್ಗಾಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿ ಮಂಗಳೂರಿನ ಕೋಟೆಕಾರು ನಿವಾಸಿ ದೇವದಾಸ್ ದೇಸಾಯಿ (62) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಮತ್ತು ಪಾಂಡೇಶ್ವರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿಯ ಉಣಕಲ್ ಮೂಲದ ಆರೋಪಿಯು ಕಳೆದ 20 ವರ್ಷದಿಂದ ಮಂಗಳೂರಿನಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.ಇಬ್ಬರು ಸರಗಳ್ಳರನ್ನ ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.

ಮಾಗಡಿ: ಸರಗಳ್ಳರ ಸೆರೆ ರಾಮನಗರ: ಮಾಗಡಿ ತಾಲ್ಲೂಕು ಬಾಣವಾಡಿ ಗ್ರಾಮಸ್ಥರು ಆಲೂರಿನಲ್ಲಿ ವೃದ್ಧೆಯ ಸರಕಸಿದು ಪರಾರಿ ಆಗುತ್ತಿದ್ದ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಗಳ್ಳತನವಾದ ತಕ್ಷಣ ಪಕ್ಕದ ಊರಿನ‌ ಗ್ರಾಮಸ್ಥರಿಗೆ ಮಾಹಿತಿ ಕೊಟ್ಟ ಆಲೂರು ಗ್ರಾಮಸ್ಥರು ಮಾಹಿತಿ ಕೊಟ್ಟಿದ್ದಾರೆ. ಬಾಣವಾಡಿ ಗ್ರಾಮದಲ್ಲಿ ಸರಗಳ್ಳರನ್ನು ಹಿಡಿದು, ಕುದೂರು ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Crime News: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ; ಕೊಲೆಯ ದೃಶ್ಯ ಮೊಬೈಲ್​ನಲ್ಲಿ ಸೆರೆ ಇದನ್ನೂ ಓದಿ: 53 ಬೈಕ್​ ಕಳ್ಳತನ! ಮನೆಯಲ್ಲೇ ನಕಲಿ ದಾಖಲೆ ಸೃಷ್ಟಿ ಮಾಡ್ತಿದ್ದ ವಿದ್ಯಾರಣ್ಯಪುರ ಕಾನ್ಸ್​​ಟೇಬಲ್ ಹೊನ್ನಪ್ಪನ ಇಡೀ ಜಾತಕ ಇಲ್ಲಿದೆ

Published On - 5:20 pm, Wed, 29 December 21