ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ; ದಿ. ಅನಂತ್ ಕುಮಾರ್ರ ಜೊತೆಗಿನ ಕಾಲೇಜ್ ಡೇಸ್ಗಳನ್ನು ಮೆಲುಕು ಹಾಕಿದ ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: May 06, 2022 | 1:05 PM

ಯಲ್ಲಿ ಪಕ್ಷವನ್ನ ಅಧಿಕಾರ ತರಲು ನಾಯಕತ್ವ ವಹಿಸಿದ್ದರು. 10 ಜನ ಇದ್ರು 10 ಲಕ್ಷ ಜನ ಇದ್ರು ನಾಯಕತ್ವವಹಿಸಿದ ಅಪರೂಪದ ನಾಯಕ. ನನ್ನ ಅವರ ಸ್ನೇಹ ಬಹಳ ಚಿಕ್ಕಂದಿನಿಂದ ಇದೆ. ಅವರ ತಂದೆಯವರು ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂಟಿಎಸ್ ಕಾಲೋನಿ ಹುಬ್ಬಳ್ಳಿಯಲ್ಲಿ ಇರ್ತಿದ್ದರು. -ಸಿಎಂ ಬೊಮ್ಮಾಯಿ

ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ; ದಿ. ಅನಂತ್ ಕುಮಾರ್ರ ಜೊತೆಗಿನ ಕಾಲೇಜ್ ಡೇಸ್ಗಳನ್ನು ಮೆಲುಕು ಹಾಕಿದ ಸಿಎಂ ಬೊಮ್ಮಾಯಿ
ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ
Follow us on

ಬೆಂಗಳೂರು: ದಿವಂಗತ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್(Ananth Kumar) ಅವರ ಸೌತ್‌ ಎಂಡ್‌ ವೃತ್ತದಲ್ಲಿದ್ದ ಕಚೇರಿಯನ್ನು ಅನಂತ ಪ್ರೇರಣಾ ಕೇಂದ್ರವನ್ನಾಗಿ(Anant Prerna Kendra) ಪರಿವರ್ತನೆ ಮಾಡಲಾಗಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಕೇಂದ್ರವನ್ನು ಇಂದು (ಮೇ 06) ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ ಗರುಡಾಚಾರ್, ರವಿಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಅನತಕುಮಾರ ಪ್ರತಿಷ್ಠಾನದ ಅಧ್ಯಕ್ಷ ಪಿ ಕೃಷ್ಣ ಭಟ್ ಮತ್ತು ಇತರರು ಉಪಸ್ಥಿತರಿದ್ದರು.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌ ಅವರ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅನಂತ ಪ್ರೇರಣಾ ಹೆಸರಿನ ಮಾಹಿತಿ ಕೇಂದ್ರ ರಚಿಸಲಾಗಿದೆ. ಇಂದು ಈ ಕೇಂದ್ರ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿನಿ ಅನಂತಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅನಂತಕುಮಾರ್ ರವರ ಸ್ನೇಹ ಸಂಬಂಧದ ಬಗ್ಗೆ ಮೆಲುಕು ಹಾಕಿದ್ದಾರೆ. ಬಸವರಾಜ ಬೊಮ್ಮಾಯಿಯವರು ಅನಂತಕುಮಾರ್ ರವರ ಆಪ್ತ ಸ್ನೇಹಿತರು. ಪಿಯುಸಿಯಿಂದಲೂ ಅವರಿಬ್ಬರೂ ಒಂದೇ ಬೆಂಚ್ನಲ್ಲಿ ಕುಳಿತುಕೊಳ್ಳುತ್ತಿದ್ದರಂತೆ. ಅದೆಷ್ಟೋ ಬಾರಿ ನಮ್ಮ ಮನೆಗೆ ಬಂದಿದ್ದಾರೋ ಅದು ಲೆಕ್ಕವೇ ಇಲ್ಲ. ಅವರು ನಮ್ಮ ಹುಬ್ಬಳ್ಳಿಯವರು ಕೂಡ. ಅವರು ಇವತ್ತು ಕಾರ್ಯಕ್ರಮಕ್ಕೆ ಬಂದಿರೋದು ತುಂಬಾ ಖುಷಿಯಾಗಿದೆ ಅಂತಾ ತೇಜಸ್ವಿನಿ ಅನಂತ್ ಕುಮಾರ್ ಅವರು ನೆನಪುಗಳನ್ನು ಮೆಲುಕಿ ಹಾಕಿದ್ದಾರೆ.

ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ

ನನ್ನ ಕಣ್ಣೆದುರಿಗೆ ಅನಂತ್ ಕುಮಾರ್ ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ರು
ಇನ್ನು ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅನಂತ್ ಕುಮಾರ್ ಒಬ್ಬ ನೈಜ ನಾಯಕ. ಯಾವುದೆ ಸ್ಥಿತಿಯಲ್ಲಿ ಯಾವುದೆ ಹಂತ ಇರಲಿ ಆ ಎಲ್ಲಾ ಸ್ಥಿತಿಗಳಲ್ಲಿ ನಾಯಕತ್ವ ವಹಿಸುವ ನಿಜವಾದ ನಾಯಕ. ಕಾಲೇಜು ದಿನಗಳಿಂದ ಹಿಡಿದು ಎಬಿವಿಪಿ, ಬಿಜೆಪಿಯಲ್ಲಿ ಪಕ್ಷವನ್ನ ಅಧಿಕಾರ ತರಲು ನಾಯಕತ್ವ ವಹಿಸಿದ್ದರು. 10 ಜನ ಇದ್ರು 10 ಲಕ್ಷ ಜನ ಇದ್ರು ನಾಯಕತ್ವವಹಿಸಿದ ಅಪರೂಪದ ನಾಯಕ. ನನ್ನ ಅವರ ಸ್ನೇಹ ಬಹಳ ಚಿಕ್ಕಂದಿನಿಂದ ಇದೆ. ಅವರ ತಂದೆಯವರು ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂಟಿಎಸ್ ಕಾಲೋನಿ ಹುಬ್ಬಳ್ಳಿಯಲ್ಲಿ ಇರ್ತಿದ್ದರು. ನಾವಿಬ್ಬರು ಕಾಲೇಜ್ ಮೇಟ್ಸ್. ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್. ಕ್ಲಾಸ್ನಲ್ಲಿ ನಾವೂ ಒಬ್ಬರಿಗೊಬ್ಬರಿಗಾಗಿ ಸೀಟ್ ಹಿಡಿದುಕೊಳ್ಳುತ್ತಿದ್ವಿ. ಎಮರ್ಜಿನ್ಸಿ ಡಿಕ್ಲೇರ್ ಸಮಯದಲ್ಲಿ ಕಾಲೇಜ್ ಡೇಸ್ನಲ್ಲೇ ನಾಯಕರಾಗಿ ಹೋರಾಟ ಮಾಡಿದ್ವಿ. ಲಾಠಿ ಚಾರ್ಜ್ ಆಯ್ತು, ನನ್ನ ಕಣ್ಣೆದುರಿಗೆ ಅವರನ್ನ ಅವತ್ತು ಪೊಲೀಸರು ಅರೆಸ್ಟ್ ಮಾಡಿದ್ರು. ಸುಮಾರು 4 ತಿಂಗಳು ಜೈಲಿನಲ್ಲಿದ್ರು ಒಂದು ವರ್ಷ ಕಾಲೇಜು ಆಯ್ತು. ಬಳಿಕ ಆರ್ಟ್ಸ್ ಕಾಲೇಜ್ ನಿಂದ ಲಾ ಕಾಲೇಜ್ ಗೆ ಬಂದ್ರು. ಅವತ್ತಿನಿಂದಲೇ ನಾಯಕತ್ವ ಗುಣ ನೋಡಿದೆ. ತುಂಬಾ ದೂರದೃಷ್ಟಿ ಹೊಂದಿದ್ದ ವ್ಯಕ್ತಿ.

ರಾಜಕೀಯವನ್ನ ಎಷ್ಟು ಗಂಭೀರವಾಗಿ ಮಾಡ್ತಿದ್ದರೋ ಅಷ್ಟೇ ಹಾಸ್ಯಪ್ರಜ್ನೆ ಉಳ್ಳವರು. ಎಂಥಹ ಸ್ಥಿತಿಯನ್ನೂ ನಗು ನಗುತ್ತಾ ಎದುರಿಸುತ್ತಿದ್ದರು. ಇನ್ನೊಬ್ಬರಿಗೆ ಊಟ ಹಾಕಿಸೋದು ಅವರಿಗೆ ಬಹಳ ಇಷ್ಟ. ನಾನು ಅವರ ಎಲ್ಲಾ ಮನೆಗಳಲ್ಲೂ ಊಟ ಮಾಡಿದ್ದೇನೆ. ನಾವಿಬ್ರು ಬೇರೆ ಬೇರೆ ಪಕ್ಷದಲ್ಲಿದ್ರು ನನ್ನನ್ನ ಗಾಳಹಾಕ್ತನೇ ಇದ್ದರು. ನಾನು ಬಿಜೆಪಿ ಸೇರಿದಾಗ ಕೊನೆಗೂ ಬಂದಲಪ್ಪ ಅಂದ್ರು. ನಾನು ನಿನ್ನ ಪ್ರೀತಿಗೆ ಸೋತು ಬಂದೇ ಎಂದಿದ್ದೇ. ಅವರು ಯಾವತ್ತು ಸಚಿವರು ಅನ್ನೋದನ್ನ ನಮ್ಮತ್ರ ತೋರಿಸದೇ ಸರಳತೆಯಿಂದ ಇದ್ರು. ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯದ ನೆಲ ಜಲದ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದವರು ಅನಂತ್ ಕುಮಾರ್. ಕೃಷ್ಣಾ ನದಿ ವಿಚಾರದಲ್ಲಿ ಆಂಧ್ರ ಹಾಗೂ ನಮ್ಮ ನಡುವೆ ಗಲಾಟೆ ಆಗೋ ಸಂದರ್ಭ ಬಂದಿತ್ತು. ಅಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಾಗಿ ಬರೆಯಬೇಕು ಅಂತಾ ಲಾ ಕಮೀಷನ್ ಜೊತೆ ಗುದ್ದಾಡಿ ಕರ್ನಾಟಕಕ್ಕೆ ಬಂದಿದ್ದ ಆಪತ್ತನ್ನ ತಪ್ಪಿಸಿದ್ದರು. ನನಗೆ ವೈಯಕ್ತಿಕವಾಗಿ ಅವರು ಇಲ್ಲ ಅಂತಾ ಎನಿಸ್ತಿಲ್ಲ. ಅವರ ಚಟುವಟಿಕೆಗಳು ಮುಂದುವರಿಯುತ್ತಿವೆ. ಬಟ್ ನಾವೂ ಒಂದು ದೊಡ್ಡ ಶಕ್ತಿಯನ್ನ ಕಳೆದುಕೊಂಡಿದ್ದೇವೆ. ಅವರ ಆಶಯಗಳನ್ನ ಮುಂದುವರಿಸೋಣ. ಅವರ ಶ್ರೀಮತಿ ತೇಜಸ್ವಿನಿಯವರು ನಾಯಕಿಯಾಗಿ ಮುಂದುವರಿಸಿದ್ದಾರೆ. ಅದಮ್ಯ ಚೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಅನಂತ್ ಕುಮಾರ್ ರವರ ಪ್ರತಿಮೆ ಬಗ್ಗೆ ಅವರಿಗೆ ಕನಸಿದೆ ಅದಕ್ಕೆ ಸರ್ಕಾರದ ಸಹಕಾರವಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಾನು ಮಧ್ಯಪ್ರದೇಶದಲ್ಲಿ ಯುವ ಮೋರ್ಚಾ ಕಾರ್ಯಕರ್ತ ಆಗಿದ್ದೆ. ಆಗಿಂದಲೂ ನಾನು ಅನಂತ್ ಕುಮಾರ್ ಅವರ ಹೆಸರು ಕೇಳುತ್ತಾ ಬಂದಿದ್ದೇನೆ. 1996 ರಲ್ಲಿ ನಾನು ಸಂಸದನಾದೆ. ಅನಂತ್ ಕುಮಾರ್ ಅವರೂ ಸಂಸದರಾಗಿದ್ದರು. ಆಗಿಂದಲೂ ಅವರ ಜೊತೆ ಸ್ನೇಹ ಇತ್ತು. ಅನಂತ್ ಕುಮಾರ್ ಜೊತೆ ಕೆಲಸ ಮಾಡಿದ್ದೇನೆ. ಅನಂತ್ ಕುಮಾರ್ ಅವರಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ಅಟಲ್ ಜೀ ಅವರ ಸರ್ಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದರು. ಆಗ ನಾನು ಒಂದ್ಸಲ ಕ್ಷೇತ್ರದ ಸಮಸ್ಯೆ ಇಟ್ಕೊಂಡು ಅವರನ್ನು ಭೇಟಿ ಮಾಡಿದ್ದೆ. ನಮ್ಮ ಕ್ಷೇತ್ರದ ಸಮಸ್ಯೆ ಕೇಳಿ ಖುದ್ದು ಅವರೇ ನನ್ನ ಕ್ಷೇತ್ರಕ್ಕೆ ಬಂದಿದ್ರು. ಅವರು ಮಧ್ಯಪ್ರದೇಶಕ್ಕೆ ಬಂದಿದ್ದಾಗ ಅಲ್ಲಿನ ಕೆಟ್ಟ ರಸ್ತೆಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಅನಂತ್ ಕುಮಾರ್ ಅವರ ಆರೋಗ್ಯ ಕೆಡುತ್ತಿದ್ದ ಸಂದರ್ಭ ನಾನು ಅವರ ಅನಾರೋಗ್ಯ ಬಗ್ಗೆ ವಿಚಾರಿಸಿದ್ದೆ. ಅನಾರೋಗ್ಯದಲ್ಲೂ ತಮ್ಮ ಇಲಾಖೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡ್ತಿದ್ರು. ಅನಾರೋಗ್ಯ ಇದೆ ಅಂತನೇ ಮರೆತಿದ್ರು. ಅನಾರೋಗ್ಯ ನೆಪದಲ್ಲಿ ಕೆಲಸ ಮಾಡದೇ ಇರ್ತಿರ್ಲಿಲ್ಲ. ಅನಾರೋಗ್ಯ ಇದ್ರೂ ಮುಖದಲ್ಲಿ ಕಳೆ ಹಾಗೇ ಇತ್ತು. ಅನಾರೋಗ್ಯ ಅಂತ ಹೊಣೆಗಾರಿಕೆಯಿಂದ ಅನಂತ್ ಕುಮಾರ್ ತಪ್ಪಿಸಿಕೊಂಡವರಲ್ಲ ಎಂದು ಥಾವರ್ ಚಂದ್ ಗೆಹ್ಲೋಟ್ ತಮ್ಮ ಹಾಗೂ ಅನಂತ್ ಕುಮಾರ್ ಅವರ ಸ್ನೇಹದ ಬಗ್ಗೆ ನೆನಪುಗಳನ್ನು ಹಂಚಿಕೊಂಡ್ರು.

Published On - 1:05 pm, Fri, 6 May 22