ಬೆಂಗಳೂರು, ಸೆ.2023: ಇಷ್ಟು ದಿನ ಬಾರ್, ಪಬ್ ಅಂತಾ ಹುಡುಕಾಡ್ತಿದ್ದ ಮದ್ಯಪ್ರಿಯರಿಗೆ ರಾಜ್ಯಸರ್ಕಾರ (State Government) ಗುಡ್‌ನ್ಯೂಸ್ ಕೊಡೋಕೆ ಸಜ್ಜಾಗಿದೆ. ಶಾಪಿಂಗ್‌ಗೆ ಅಂತಾ ಹೊರಗಡೆ ಹೋದಾಗ ಪತ್ನಿಯರ ಶಾಪಿಂಗ್ ಮಧ್ಯೆ ಮಂಕಾಗ್ತಿದ್ದ ಮದ್ಯಪ್ರಿಯರಿಗೆ (Alcohol) ಸಿಹಿಸುದ್ದಿ ಕೊಡೋಕೆ ಸರ್ಕಾರ ಪ್ಲಾನ್ ಮಾಡ್ತಿದ್ದು ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಿದೆ. ಅತ್ತ ಸಾಲು ಸಾಲು ಗ್ಯಾರಂಟಿಗಳನ್ನ ಜಾರಿ ಮಾಡಿ ಹಣ ಕಾಸು ಹೊಂದಿಸಲು ಪರದಾಡುತ್ತಿರುವ ಸರ್ಕಾರ, ಇದೀಗ ತನ್ನ ಆದಾಯವನ್ನ ಹೆಚ್ಚಿಸಿಕೊಳ್ಳೋಕು ಈ ಅಸ್ತ್ರ ಬಳಸಲು ತಯಾರಿ ನಡೆಸಿದೆ. ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಕೊಡೋದರ ಜೊತೆಗೆ ಆದಾಯ ಏರಿಕೆಗೂ ಪ್ಲಾನ್ ಮಾಡಿಕೊಂಡಿದೆ. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಜನರಿಗೆ ಸಾಲು ಸಾಲು ಗ್ಯಾರಂಟಿಗಳನ್ನ ನೀಡಿದ್ದ ಸರ್ಕಾರ, ಇದೀಗ ತನ್ನ ಬೊಕ್ಕಸ ತುಂಬಿಸಿಕೊಳ್ಳೋಕೆ ಮಾರ್ಗಗಳನ್ನ ಹುಡುಕೋಕೆ ಸಜ್ಜಾಗಿದೆ. ರಾಜ್ಯದ ಬಹುಪಾಲು ಆದಾಯ ತಂದುಕೊಡ್ತಿರೋ ಅಬಕಾರಿ ಇಲಾಖೆ ಮೇಲೆ ಕಣ್ಣಿಟ್ಟಿರೋ ಸರ್ಕಾರ, ಮದ್ಯ ಮಾರಾಟದ ಮೂಲಕ ತನ್ನ ಖಜಾನೆ ತುಂಬಿಸಿಕೊಳ್ಳೋಕೆ ಪ್ಲಾನ್ ಮಾಡಿಕೊಂಡಿದೆ. ಸದ್ಯ ಬಾರ್, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಲೈಸೆನ್ಸ್ ನೀಡಲಾಗಿತ್ತು. ಆದರೆ ಇನ್ಮುಂದೆ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡೋಕೆ ಸರ್ಕಾರ ಮುಂದಾಗಿದೆ.
ಈಗಾಗಲೇ ಸೂಪರ್ ಮಾರ್ಕೆಟ್, ಮಾಲ್ ನಲ್ಲಿ ಮದ್ಯ ಮಾರಾಟ ಮಾಡಲು ಲೈಸೆನ್ಸ್ ನೀಡಲು ಅಬಕಾರಿ ಇಲಾಖೆಯ ಅಧಿಕಾರಿಗಳು ಮೂರು ಸುತ್ತಿನ ಸಭೆ ನಡೆಸಿ ಲೈಸೆನ್ಸ್ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಅನ್ನೋ ಮಾಹಿತಿ ಇದೆ. ಸಿಎಂ ಒಕೆ ಮಾಡಿದ್ರೆ ರಾಜ್ಯದ ಎಲ್ಲಾ ಮಾಲ್, ಸೂಪರ್ ಮಾರ್ಕೆಟ್ ಗಳಲ್ಲಿ ಎಣ್ಣೆ ಸಿಗೋದು ಪಕ್ಕ ಎನ್ನಲಾಗ್ತಿದೆ. ಈ ಬಗ್ಗೆ ಅಬಕಾರಿ ಸಚಿವರ ಜೊತೆ ಕೂಡ ಅಂತಿಮ ಸಭೆ ನಡೆಸಿದ್ದಾರೆ ಎನ್ನಲಾಗ್ತಿದೆ. ಸಿಎಂ ಮುಂದೆ ಪ್ರಸ್ತಾವನೆಯನ್ನು ಇಡಲಾಗಿದ್ಯಂತೆ ಸಿಎಂ ಒಕೆ ಮಾಡಿದ್ರೆ ಇನ್ಮುಂದೆ ಮಾಲ್ ಸೂಪರ್ ಮಾರ್ಕೆಟ್ ನಲ್ಲಿ ಎಣ್ಣೆ ಸಿಗೋದು ಪಕ್ಕ. ಆದರೆ ಮತ್ತೊಂದೆಡೆ ಮಾಲ್ ಸೂಪರ್ ಮಾರ್ಕೆಟ್ ನಲ್ಲಿ ಎಣ್ಣೆ ಮಾರಾಟಕ್ಕೆ ಬಾರಿ ವಿರೋಧ ವ್ಯಕ್ತವಾಗ್ತಿದೆ. ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ಆಕ್ರೋಶ ವ್ತಕ್ತವಾಗಿದ್ದು, ಈ ಪ್ರಸ್ತಾವನೆಯನ್ನು ಸಿಎಂ ಅಂಗೀಕಾರ ಮಾಡಬಾರದು ಒಂದು ವೇಳೆ ಸೂಪರ್ ಮಾರ್ಕೆಟ್, ಮಾಲ್ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ್ರೆ ಹೋರಾಟ ಮಾಡುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಮದ್ಯಪ್ರೀಯರ ಪ್ರತಿಭಟನೆ; ಕೂಡಲೇ ಬಾರ್ ಓಪನ್ ಮಾಡುವಂತೆ ಮನವಿ
ಸದ್ಯ ದೊಡ್ಡ ದೊಡ್ಡ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಸಿಎಲ್-2 ಪರವಾನಗಿ ಹೊಂದಿರುವವರಿಂದ ಮದ್ಯ ಖರೀದಿಸಿ ಮಾರಾಟ ಮಾಡಲಾಗ್ತಿದೆ. ಆದ್ರೆ ಮಾಲ್‌ಗಳಿಗೆ ಪ್ರತ್ಯೇಕ ಪರವಾನಗಿ ನೀಡಿಲ್ಲ. ಇದೀಗ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡೋದಕ್ಕೆ ಸರ್ಕಾರ ಪ್ಲಾನ್ ಮಾಡ್ತಿದೆ. ಇನ್ನು ಈ ಹಿಂದೆ ಅಬಕಾರಿ ಸುಂಕವನ್ನ ಹೆಚ್ಚಿಸಿದ್ದ ಸರ್ಕಾರ 30 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್ ನೀಡಿತ್ತು. ಸದ್ಯ ಏಪ್ರಿಲ್ 1ರಿಂದ ಆ.28ವರೆಗೆ 13,515 ಕೋಟಿ ಆದಾಯ ಸಂಗ್ರಹವಾಗಿದೆ. ಇದೀಗ 1994ರ ನಂತರ ಹೊಸ ಸಿಎಲ್-2, ಸಿಎಲ್-9 ಪರವಾನಗಿ ನೀಡದ ಸರ್ಕಾರ, ಹೊಸ ಪಬ್‌ಗಳಿಗೂ ಲೈಸೆನ್ಸ್ ನೀಡೋ ಮೂಲಕ ಆದಾಯ ಹೆಚ್ಚಿಸಿಕೊಳ್ಳೋಕೆ ಸಜ್ಜಾಗಿದೆ. ಅಲ್ಲದೇ ಲೈಸೆನ್ಸ್ ವರ್ಗಾವಣೆ ಶುಲ್ಕವನ್ನ ಕೂಡ ಶೇಕಡ 5 ರಷ್ಟು ಹೆಚ್ಚಳ ಮಾಡುವುದಕ್ಕೂ ಚಿಂತನೆ ನಡೆದಿದೆ ಎನ್ನಲಾಗ್ತಿದ್ದು, ಆ ಮೂಲಕ ತನ್ನ ಬೊಕ್ಕಸದ ಆದಾಯ ಹೆಚ್ಚಿಸಿಕೊಳ್ಳೋಕೆ ಸಿದ್ಧತೆ ನಡೆದಿದೆ. ಈ ಬಗ್ಗೆ ಮಾತಾನಾಡಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಈ ಪ್ರಸ್ತಾವನೆ ಚರ್ಚೆ ಆಗಿದೆ. ಜಾರಿಗೆ ತರುವ ಬಗ್ಗೆ ತೀರ್ಮಾನ ಆಗಿಲ್ಲ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಇದರ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ ಚರ್ಚೆಯ ಹಂತದಲ್ಲಿ ಇದೆ ಹೊರತು ತೀರ್ಮಾನ ಆಗಿಲ್ಲ ಸಿಕ್ಕಾಪಟ್ಟೆ ಮದ್ಯ ಮಾರಾಟ ಮಾಡುವ ಉದ್ದೇಶ ಇಲ್ಲ ಸಿಎಂ ಅಬಕಾರಿ ಇಲಾಖೆಗೆ ಯಾವುದೇ ತೆರಿಗೆ ಸಂಗ್ರಹ ಟಾರ್ಗೆಟ್ ನೀಡಿಲ್ಲ ಎಂದರು.
ಒಟ್ಟಾರೆ, ತನ್ನ ಗ್ಯಾರಂಟಿಗಳ ಮೂಲಕ ಆರ್ಥಿಕ ಸ್ಥಿತಿಯಲ್ಲಿ ಅಸಮತೋಲನ ಕಾಣ್ತಿರೋ ಸರ್ಕಾರಕ್ಕೆ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣ್ತಿದೆ. ಮದ್ಯದ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದ್ರು ಮದ್ಯ ಖರೀದಿಸೋ ಮದ್ಯಪ್ರಿಯರನ್ನ ನೆಚ್ಚಿಕೊಂಡ ಸರ್ಕಾರ, ಇದೀಗ ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಕೊಡೋ ನೆಪದಲ್ಲಿ ಆದಾಯ ಹೆಚ್ಚಳಕ್ಕೆ ಪ್ಲಾನ್ ಮಾಡ್ತಿದ್ದು, ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:51 pm, Sat, 23 September 23