
ಬೆಂಗಳೂರು, ಮಾ.05: ಬೆಂಗಳೂರಿನಲ್ಲಿ ಗ್ರೆನೇಡ್ ಪತ್ತೆ ಹಿನ್ನೆಲೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಎನ್‌ಐಎ(NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಹಾಗೂ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಲಾಗಿ, ಈ ವೇಳೆ 25 ಮೊಬೈಲ್ ಫೋನ್, 6 ಲ್ಯಾಪ್ ಟ್ಯಾಪ್, ಕೆಲ ಡಿವೈಸ್ಗಳು ಹಾಗೂ ಕೆಲ ದಾಖಲೆಗಳು ಸೀಜ್ ಮಾಡಲಾಗಿದೆ. ಇನ್ನು ಸಿಸಿಬಿ ಪೊಲೀಸರು ದಾಳಿ ವೇಳೆ ಏಳು ಪಿಸ್ತೂಲ್, ನಾಲ್ಕು ಹ್ಯಾಂಡ್ ಗ್ರೆನೈಡ್, 45 ಜೀವಂತ ಗುಂಡುಗಳು ಹಾಗೂ ನಾಲ್ಕು ವಾಕಿಟಾಕಿಗಳು ಪತ್ತೆಯಾಗಿತ್ತು. ಈ ತನಿಖೆ ಭಾಗವಾಗಿ ಇಂದು ನಡೆದ ದಾಳಿಯಲ್ಲಿ ಕರ್ನಾಟಕದಲ್ಲಿ ಮೂವರನ್ನು ಮನೆಗಳ ಮೇಲೆ ಎನ್‌ಐಎ ದಾಳಿ ಮಾಡಿದೆ.
ಬೆಂಗಳೂರು ಪರಪ್ಪನ ಆಗ್ರಹಾರ ಜೈಲಿನಲ್ಲಿ ಉಗ್ರವಾದಕ್ಕೆ ಪರಿವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಎನ್‌ಐಎ ದಾಳಿ ಮಾಡಿದ್ದು, ತನಿಖೆ ಭಾಗವಾಗಿ ಇಂದು ನಡೆದ ದಾಳಿಯಲ್ಲಿ ಕರ್ನಾಟಕದಲ್ಲಿ ಮೂವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಮಂಗಳೂರಿನಲ್ಲಿ ನವೀದ್, ಬೆಂಗಳೂರಿನಲ್ಲಿ ಸೈಯದ್ ಖಾಲಿ ಹಾಗೂ ದಕ್ಷಿಣ ಕನ್ನಡದಲ್ಲಿ ಬಿಜ್ಜಿ ಎಂಬಾತನ ಮನೆಗಳನ್ನು ಪರಿಶೀಲನೆ ನಡೆಸಲಾಗಿದೆ. ಸದ್ಯ ದಾಳಿ ವೇಳೆ ಬೆಂಗಳೂರು ರಾಮೇಶ್ವರಂ ಬ್ಲಾಸ್ಟ್ಗೂ ಸಂಬಂಧ ಇದೆಯಾ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ: ಎನ್‌ಐಎ ತನಿಖೆ ಆರಂಭ, ಕೆಫೆಯಲ್ಲಿ ಅಧಿಕಾರಿಗಳ ತಲಾಶ್
ಇನ್ನು ಬೆಂಗಳೂರು ಜೈಲಿನಲ್ಲಿರುವ ಕೈದಿಗಳಲ್ಲಿ ಉಗ್ರವಾದ ಬೆಳೆಸುವುದು, ಆತ್ಮಾಹುತಿ ದಾಳಿಗೆ ಪ್ರಚೋದನೆ ನೀಡುವುದು ಸೇರಿ ಹಲವು ಉಗ್ರ ಚಟುವಟಿಕೆಗಳಿಗೆ ಪಿತೂರಿ ನಡೆಸಿರುವ ಕುರಿತು ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ. ಹಲವು ಶಂಕಿತ ಉಗ್ರರು ಪಾಲ್ಗೊಂಡಿರುವ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ ಎಂದು ಕೂಡ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Tue, 5 March 24