ಬೆಂಗಳೂರಿನಲ್ಲಿ ಗಗನಕ್ಕೇರಿದ ದಿನಸಿ, ತರಕಾರಿ ಬೆಲೆ: ಟೊಮೆಟೋ ಬೆಲೆ 50 ರೂ.ಗೆ ಏರಿಕೆ, 200 ರ ಗಡಿದಾಟಿದ ತೊಗರಿ ಬೇಳೆ
Vegetables Price in Bangalore Today; ಬೆಂಗಳೂರಿನಲ್ಲಿ ಮತ್ತೆ ತರಕಾರಿ ದುಬಾರಿಯಾಗಿದೆ. ಈ ಬಾರಿ ತರಕಾರಿ ಜೊತೆಗೆ ದಿನಸಿ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಹಾಗಾದರೆ, ಸದ್ಯ ಯಾವ ತರಕಾರಿಗೆ ಎಷ್ಟಿದೆ ಬೆಲೆ? ದಿನಸಿ ವಸ್ತುಗಳ ಬೆಲೆ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ.
ಬೆಂಗಳೂರು, ಜೂನ್ 13: ಕಳೆದ ಕೆಲವು ವಾರಗಳಿಂದ ಬೆಂಗಳೂರಿನಲ್ಲಿ (Bengaluru) ನಿರಂತರವಾಗಿ ಹೆಚ್ಚಾಗುತ್ತಿರುವ ತರಕಾರಿ ಬೆಲೆ (Vegetable Prices) ಈ ವಾರ ಗಗನಕ್ಕೇರಿದೆ. ಇದೀಗ ಇದರ ಜೊತೆಗೆ ದಿನಸಿ ವಸ್ತುಗಳ ಬೆಲೆಯೂ ತೀವ್ರವಾಗಿ ಏರಿಕೆಯಾಗಿದೆ. ಈ ಹಿಂದೆ 50 ರೂ. ಅಸುಪಾಸಿನಲ್ಲಿ ಸಿಗುತ್ತಿದ್ದ ತರಕಾರಿಗಳು ಇದೀಗ 100 ರೂ. ಗಡಿ ದಾಟಿದ್ದು, ತರಕಾರಿ ತೆಗೆದುಕೊಳ್ಳಬೇಕು ಎಂದರೆ ಯೋಚನೆ ಮಾಡಬೇಕಾದ ಅನಿವಾರ್ಯತೆ ಶುರುವಾಗಿದೆ. ಸದ್ಯ ರಾಜಾಧಾನಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪರಿಣಾಮವಾಗಿ ಬಂದಂತಹ ಬೆಳೆಯೂ ಹಾಳಾಗುತ್ತಿದೆ. ಜೊತೆಗೆ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ತರಕಾರಿಗಳು ಸಿಗದ ಪರಿಣಾಮ ತರಕಾರಿ ಬೆಲೆ ಏರಿಕೆಯಾಗಿದೆ.
ಕಳೆದ ತಿಂಗಳು ಬಿಸಿಲಿನ ಪ್ರಮಾಣ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗಿತ್ತು. ಇದೀಗ ಮಳೆ ಎನ್ನುವ ಕಾರಣಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗಿದೆ. ವ್ಯಾಪಾರಸ್ಥರಿಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಸದ್ಯ ಕೇವಲ ಕರ್ನಾಟಕದ ಜಿಲ್ಲೆಗಳಿಂದ ಮಾತ್ರ ತರಕಾರಿ ಪೂರೈಕೆಯಾಗುತ್ತಿದೆ. ಜೊತೆಗೆ ಮಳೆಗೆ ಟೊಮೆಟೋ ಹಾಗೂ ಈರುಳ್ಳಿ ಸರಿಯಾಗಿ ಫಸಲು ಬರುತ್ತಿಲ್ಲ. ಈ ಕಾರಣದಿಂದಾಗಿ ತರಕಾರಿಗಳ ಬೆಲೆ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಹಾಗೆಂದು ಕೆಲವೇ ಕೆಲವು ತರಕಾರಿಗಳ ಬೆಲೆಯಲ್ಲಿ ತುಸು ಇಳಿಕೆಯೂ ಕಂಡುಬಂದಿದೆ. ಯಾವ ತರಕಾರಿಯ ದರ ಎಷ್ಟು ಹೆಚ್ಚಾಗಿದೆ? ಯಾವುದರ ಬೆಲೆ ಎಷ್ಟು ಕಡಿಮೆ ಆಗಿದೆ ಎಂಬ ವಿವರ ಇಲ್ಲಿದೆ.
ಯಾವ ತರಕಾರಿಗೆ ಎಷ್ಟಿದೆ ಬೆಲೆ?
ತರಕಾರಿ | ಹಿಂದಿನ ಬೆಲೆ (ರೂ.ಗಳಲ್ಲಿ) | ಇಂದಿನ ಬೆಲೆ (ರೂ.ಗಳಲ್ಲಿ) |
ಕ್ಯಾರೆಟ್ | 80 | 82 |
ಬೀನ್ಸ್ | 80 | 80 |
ನವಿಲುಕೋಸು | 60 | 102 |
ಬದನೆಕಾಯಿ | 30 | 30 |
ದಪ್ಪ ಮೆಣಸಿನಕಾಯಿ | 40 | 65 |
ಬಟಾಣಿ | 140 | 120 |
ಬೆಂಡೆಕಾಯಿ | 60 | 30 |
ಟೊಮೆಟೊ | 30 | 50 |
ಆಲೂಗಡ್ಡೆ | 30 | 40 |
ಹಾಗಲಕಾಯಿ | 60 | 50 |
ಸೋರೆಕಾಯಿ | 40 | 30 |
ಬೆಳ್ಳುಳ್ಳಿ | 300 | 180 |
ಇದನ್ನೂ ಓದಿ: ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು
ದಿನಸಿಯೂ ದುಬಾರಿ
ತರಕಾರಿಗಳಷ್ಟೇ ಅಲ್ಲದೇ ದಿನಸಿ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗಿದೆ. ಒಂದಹ ಕೆಜಿ ತೊಗರಿ ಬೇಳೆಗೆ ಹೋಲ್ ಸೇಲ್ನಲ್ಲಿ 195 ರೂ. ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ 220 ರೂ. ಇದೆ. ಇನ್ನು ಕಡ್ಲೆ ಬೇಳೆ ಕೆಜಿ 72 ರೂ. ಇತ್ತು. ಇದೀಗ 110 ರೂ. ಆಗಿದೆ. ಅಲ್ಲದೇ ಸ್ಟೀಮ್ ಅಕ್ಕಿ 48 ರೂ. ಇದ್ದುದು ಈಗ 58 ರೂ. ಆಗಿದ್ದು ಹೊಸ ಸ್ಟಾಕ್ ಇಲ್ಲದ ಕಾರಣ ಬೇಳೆ, ಅಕ್ಕಿ ಬೆಲೆ ಜಾಸ್ತಿಯಾಗಿದೆ. ಕೆಜಿ ಚಿಕನ್ನಷ್ಟೇ ಬೇಳೆಗಳ ಬೆಲೆ ಜಾಸ್ತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Thu, 13 June 24