ಮೈದಾನದಲ್ಲಿ ಆಟವಾಡಲು ಬಂದ ಬಾಲಕರಿಗೆ ನಶೆ ಪುಂಡರಿಂದ ಟಾರ್ಚರ್, ಮರಕ್ಕೆ ಕಟ್ಟಿ ಹಾಕಿ ಬೀಡಿ ಸೇದುವಂತೆ ಹಿಂಸೆ

ಬೆಂಗಳೂರಿನ ಕೆ.ಆರ್. ಪುರಂನ ದೇವಸಂದ್ರ ವಾರ್ಡ್ ಬಳಿ ಕಳೆದ ಎರಡು ದಿನಗಳ ಹಿಂದೆ ಒಂದು ಘಟನೆ ನಡೆದಿದೆ. ಶಾಲೆಯ ಮೈದಾನಕ್ಕೆ ಆಟವಾಡಲು ಬಂದ ಬಾಲಕರನ್ನು ಕೆಲ ಯುವಕರ ಗುಂಪು ಹಿಂಸಿಸಿದೆ.

ಮೈದಾನದಲ್ಲಿ ಆಟವಾಡಲು ಬಂದ ಬಾಲಕರಿಗೆ ನಶೆ ಪುಂಡರಿಂದ ಟಾರ್ಚರ್, ಮರಕ್ಕೆ ಕಟ್ಟಿ ಹಾಕಿ ಬೀಡಿ ಸೇದುವಂತೆ ಹಿಂಸೆ
ಕೆಲ ಪುಂಡರು ಆಟವಾಡಲು ಬಂದ ಬಾಲಕರನ್ನು ಹಿಡಿದು ಟಾರ್ಚರ್ ಕೊಟ್ಟಿದ್ಧಾರೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಶೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಒಂದಿಲೊಂದು ಕಿರಿಕ್ ಮಾಡುತ್ತ ಜನರಿಗೆ ಕಾಟ ಕೊಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಂದ್ರೆ ಅಕ್ಟೋಬರ್ 23ರಂದು ಕೆಲ ಪುಂಡರು ಆಟವಾಡಲು ಬಂದ ಬಾಲಕರನ್ನು ಹಿಡಿದು ಟಾರ್ಚರ್ ಕೊಟ್ಟು ಸಂತೋಷ ಪಟ್ಟಿದ್ದಾರೆ. ಗಾಂಜಾ ಮತ್ತಿನಲ್ಲಿ ಕ್ರೂರಿ ವರ್ತನೆ ತೋರಿದ್ದಾರೆ.

ಬೆಂಗಳೂರಿನ ಕೆ.ಆರ್. ಪುರಂನ ದೇವಸಂದ್ರ ವಾರ್ಡ್ ಬಳಿ ಕಳೆದ ಎರಡು ದಿನಗಳ ಹಿಂದೆ ಒಂದು ಘಟನೆ ನಡೆದಿದೆ. ಶಾಲೆಯ ಮೈದಾನಕ್ಕೆ ಆಟವಾಡಲು ಬಂದ ಬಾಲಕರನ್ನು ಕೆಲ ಯುವಕರ ಗುಂಪು ಹಿಂಸಿಸಿದೆ. ಆಟವಾಡಲು ಬಂದ ಬಾಲಕರನ್ನು ಯುವಕರು ಸುತ್ತುವರೆದು ಸತತ ಒಂದು ಗಂಟೆಗೂ ಅಧಿಕ ಅವಧಿ ಟಾರ್ಚರ್ ಕೊಟ್ಟಿದ್ದಾರೆ. ಅಲ್ಲದೆ ಟಾರ್ಚರ್ ನೀಡುವುದನ್ನು ವಿಡಿಯೋ ಮಾಡಿ ಕುಚೇಷ್ಟೆ ಮೆರೆದಿದ್ದಾರೆ. ಬಳಿಕ ಬಾಲಕರನ್ನು ಒಂದೆಡೆ ಕೂರಿಸಿ ಹಲ್ಲೆ ನಡೆಸಿ ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಹಿಂಸೆ ಮಾಡಿದ್ದಾರೆ. ಮಕ್ಕಳು ಕಣ್ಣೀರಿಡುತ್ತ ಎಷ್ಟೇ ಗೋಳಾಡಿದರು ಪುಂಡರ ಗ್ಯಾಂಗ್ ಬಾಲಕರನ್ನು ಬಿಡದೆ ಟಾರ್ಚರ್ ಮಾಡಿದ್ದಾರಂತೆ.

ಕೃತ್ಯ ಬಳಿಕ ಕಣ್ಣೀರು ಹಾಕುತ್ತ ಬಾಲಕರು ಮನೆಗೆ ತೆರಳಿದ್ದಾರೆ. ತಮ್ಮ ತಮ್ಮ ಪೊಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಘಟನೆ ಸಂಬಂಧ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ಪೊಲೀಸರು ಈ ವಿಚಾರವನ್ನು ಸ್ಥಳೀಯ ಮುಖಂಡನಿಗೆ ತಿಳಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುಮೋಟೋ ಪ್ರಕರಣ ದಾಖಲಿಸಿ ಐವರ ಬಂಧನ
ಇನ್ನು ಮಕ್ಕಳಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ರಾಜು(18) ಸೇರಿ ಐವರನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಐವರು ಆರೋಪಿಗಳ ಪೈಕಿ ನಾಲ್ವರು ಅಪ್ರಾಪ್ತರು. ಸದ್ಯ ಮಹದೇವಪುರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: Sreeleela: ಸಿನಿಮಾ ಸೋತರೂ ಶ್ರೀಲೀಲಾಗೆ ಭರ್ಜರಿ ಬೇಡಿಕೆ; ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಚಿಂತೆ ಶುರು?

Click on your DTH Provider to Add TV9 Kannada