ಚೊಚ್ಚಲ ಹೆರಿಗೆ ಆಗಿದೆ, ಮಗುವೂ ಆರೋಗ್ಯವಾಗಿ ಇದೆ ಎಂದು ಬಜೆಟ್ ಮೇಲಿನ ಭಾಷಣ ವೇಳೆ ಹಾಸ್ಯ ಮಾಡಿದ ಹೆಚ್.ವಿಶ್ವನಾಥ್
ಚೊಚ್ಚಲ ಹೆರಿಗೆ ಆಗಿದೆ, ಮಗುವೂ ಆರೋಗ್ಯವಾಗಿ ಇದೆ. ಈ ಮಗು ನಮ್ಮ ಬಳಿ ಇದ್ದರೆ ನಗುತ್ತೆ, ಕಾಂಗ್ರೆಸ್ ಬಳಿ ಅಳುತ್ತೆ. ಮರಿತಿಬ್ಬೇಗೌಡರ ಬಳಿ ಹೋದ್ರೆ ಕಿಟಾರ್ ಅಂತ ಕೂಗುತ್ತೆ. ಜೆಡಿಎಸ್ ಈ ಮಗುವನ್ನು ತಮ್ಮದು ಅಂತ ಆಡಿಸುತ್ತಿದೆ ಎಂದು ಬಜೆಟ್ ಮೇಲಿನ ಭಾಷಣ ವೇಳೆ ಹೆಚ್.ವಿಶ್ವನಾಥ್ ಹಾಸ್ಯ ಮಾಡಿದ್ದಾರೆ.
ಬೆಂಗಳೂರು: ವಿಧಾನಪರಿಷತ್‌ನಲ್ಲಿ ಬಜೆಟ್ ಮೇಲೆ ಹೆಚ್.ವಿಶ್ವನಾಥ್(H Vishwanath) ಚರ್ಚೆ ನಡೆಸಿದ್ದು ಈ ವೇಳೆ ಹಾಸ್ಯ ಮಾಡಿ ಹೆಸರು ಹೇಳದೆ ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಅಭಿಮಾನದಿಂದ ಸ್ವಾಗತ ಮಾಡ್ತೀನಿ. ಚೊಚ್ಚಲ ಹೆರಿಗೆ ಆಗಿದೆ, ಮಗುವೂ ಆರೋಗ್ಯವಾಗಿ ಇದೆ. ಈ ಮಗು ನಮ್ಮ ಬಳಿ ಇದ್ದರೆ ನಗುತ್ತೆ, ಕಾಂಗ್ರೆಸ್ ಬಳಿ ಅಳುತ್ತೆ. ಮರಿತಿಬ್ಬೇಗೌಡರ ಬಳಿ ಹೋದ್ರೆ ಕಿಟಾರ್ ಅಂತ ಕೂಗುತ್ತೆ. ಜೆಡಿಎಸ್ ಈ ಮಗುವನ್ನು ತಮ್ಮದು ಅಂತ ಆಡಿಸುತ್ತಿದೆ ಎಂದು ಬಜೆಟ್ ಮೇಲಿನ ಭಾಷಣ ವೇಳೆ ಹೆಚ್.ವಿಶ್ವನಾಥ್ ಹಾಸ್ಯ ಮಾಡಿದ್ದಾರೆ.
ಇವತ್ತು ನಾವು ರಾಜಕಾರಣಿಗಳು ಓಟಿನ ಜನ. ಮತ್ತೊಮ್ಮೆ ಸಿಎಂ ಮಾಡಿ 10 ಕೆಜಿ ಅಕ್ಕಿ ಕೊಡ್ತೀನಿ ಅಂತಾರೆ. ಇದೇನಾ ನಿಮ್ ಕನಸ್ಸು. ರಾಜ್ಯದ ಅಭಿವೃದ್ಧಿ ಮಾಡ್ತೀನಿ ಅನ್ನೋದಿಲ್ಲ ಯಾಕೆ ಎಂದು ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ದ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಸೊಂಟದ ಮೇಲೆ ಕೈ ಇಟ್ಟು ಸಿದ್ದರಾಮಯ್ಯ ತರಹ ವಿಶ್ವನಾಥ್ ಆಕ್ಷನ್ ಮಾಡಿದ್ರು. ಕನ್ನಡ ಭಾಷೆ ಇವತ್ತು ಕೊಂದು ಹಾಕಿದ್ದಾರೆ. ಧಮ್ ಇದ್ಯಾ, ಟಗರು ಗುಮ್ಮುತ್ತೆ ಅಂತಾರೆ ಇದು ಭಾಷೆನಾ? ಏಯ್.. ಮೋದಿ ಯೂಸ್ ಲೆಸ್ ಫೆಲೋ ಅಂತಾರೆ. ಒಬ್ಬ ಚುನಾಯಿತ ಪ್ರಧಾನಿಗಳಿಗೆ ಕೊಡೋ ಗೌರವ ಇದೆನಾ? ಪ್ರಧಾನಿ ಮೋದಿ 3 ಬಾರಿ ಸಿಎಂ ಆಗಿದ್ರು, 2 ಪ್ರಧಾನಿ ಆಗಿದ್ದಾರೆ. ಒಂದು ಬಾರಿ ಸಿಎಂ ಆಗಿ 36 ಸಾವಿರ ಓಟ್ ನಿಂದ ಸೋತವರು 3 ಬಾರಿ ಗೆದ್ದವರ ಬಗ್ಗೆ ಮಾತಾಡ್ತಾರೆ. ಪ್ರಧಾನಿ ಆಗಿ ಯಾವತ್ತು ಅವ್ರು ಹಿಂದುತ್ವದ ಬಗ್ಗೆ ಮಾತಾಡಿಲ್ಲ. 2 ಕೋಟಿ ಮುಸ್ಲಿಂ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೋದಿ ನೀಡಿದ್ದಾರೆ. ಮೋದಿ ಯಾರಿಗೂ ವಿರುದ್ಧ ಮಾತಾಡಿಲ್ಲ ಎಂದು ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ದ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಜಲಜೀವನ್ ಮಿಷನ್ ದೊಡ್ಡ ಯೋಜನೆ. ವಿಪರ್ಯಾಸವೆಂದರೆ ವಿಪಕ್ಷಗಳು ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಜಲಜೀವನ್ ಮಿಷನ್ ಶೇಕಡಾ 40ರಷ್ಟು ಮುಗಿದಿದೆ ಅಂತಾರೆ. ಜಲಜೀವನ್ ಮಿಷನ್ ಯೋಜನೆ ಬಗ್ಗೆ ಸಿಎಂ ಗಮನ ಹರಿಸಲಿ. ಆಡಳಿತ, ಅಭಿವೃದ್ಧಿ, ಹಣಕಾಸು ಇಲಾಖೆ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡುವಂತೆ ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮನವಿ ಮಾಡಿದ್ರು.
ಇದನ್ನೂ ಓದಿ: 12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು ಹಿನ್ನೆಲೆ; ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪರಿಶೀಲನಾ ಸಭೆ