ಈಗಾಗಲೇ FSSAI ಇರುವಾಗ ಹಲಾಲ್​ನ ಪ್ರತ್ಯೇಕ ಅಗತ್ಯವಿಲ್ಲ; 2020ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಹಿಂದೂ ಮುಖಂಡ

| Updated By: ganapathi bhat

Updated on: Mar 30, 2022 | 1:05 PM

ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳಿಂದ ಒಟ್ಟಾಗಿ ಸಮರ ಸಾರಿವೆ. ಪೂಜಿಸುವ ಗೋವನ್ನು ಕಡಿದು ತಿನ್ನೋರ ಬಳಿ ವ್ಯಾಪಾರ ಬೇಡ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ಅಭಿಯಾನ ಮಾಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿಗೆ ಹಿಂದೂ ಪರ ಸಂಘಟನೆ ಸಾಥ್ ನೀಡಿದೆ.

ಈಗಾಗಲೇ FSSAI ಇರುವಾಗ ಹಲಾಲ್​ನ ಪ್ರತ್ಯೇಕ ಅಗತ್ಯವಿಲ್ಲ; 2020ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಹಿಂದೂ ಮುಖಂಡ
ಹಲಾಲ್​
Follow us on

ಬೆಂಗಳೂರು: ಹಲಾಲ್ ಸರ್ಟಿಫಿಕೇಟ್ ವಿರುದ್ಧ ಹಿಂದೂ ಸಂಘಟನೆ ಮುಖಂಡ ಒಬ್ಬರು 2020 ರಲ್ಲಿಯೇ ಕೇಂದ್ರಕ್ಕೆ ಪತ್ರ ಬರೆದಿರುವುದು ಈಗ ತಿಳಿದುಬಂದಿದೆ. ಹಲಾಲ್ ಬಾಯ್ಕಾಟ್​ಗೆ ಕೇಂದ್ರದ ಮೊರೆ ಹೋದ ದೂರಿನ ಪತ್ರ ಟಿವಿ9ಗೆ ಲಭ್ಯವಾಗಿದೆ. ಹಲಾಲ್ ಸರ್ಟಿಫೈಡ್ ಕಂಪನಿಗಳು ಈ ದುಡ್ಡನ್ನು ಉಗ್ರಗಾಮಿಗಳಿಗೆ ರವಾನೆ ಮಾಡುತ್ತಿದೆ. ಟೆರರಿಸಂ ಚಟುವಟಿಕೆಗೆ ಫಂಡಿಂಗ್ ಮಾಡುತ್ತೆ. ಜೊತೆಗೆ ಜಿಹಾದ್​ಗೆ ಪ್ರೋತ್ಸಾಹ ಕೊಡೋದಕ್ಕೆ ದುಡ್ಡು ಬಳಕೆ ಮಾಡುತ್ತೆ ಎಂದು ಗಿರೀಶ್ ಭಾರಧ್ವಜ್ ಎನ್ನುವವರಿಂದ ಪತ್ರ ಬರೆಯಲಾಗಿತ್ತು. ಹಲಾಲ್ ಸರ್ಟಿಫಿಕೇಟ್ ಅನ್ನೋದು ಒಂದು ದಂಧೆ. ಈಗಾಗಲೇ FSSAI ಇರುವಾಗ ಇದರ ಪ್ರತ್ಯೇಕ ಅಗತ್ಯವಿಲ್ಲ. ಹೀಗಾಗಿ ಬ್ಯಾನ್ ಮಾಡಿ ಎಂದು 2020 ರಲ್ಲಿಯೇ ಗಿರೀಶ್ ಭಾರದ್ವಾಜ್‌ ಪತ್ರ‌ ಬರೆದಿರುವುದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆಗೂ ಹಲಾಲ್, ಜಟ್ಕಾ ಕಟ್ ಫೈಟ್ ಕಾಲಿಟ್ಟಿದೆ. ನಾಗಮಂಗಲದ ಬಿ.ಎಂ. ರಸ್ತೆಯಲ್ಲಿ ಅಂಗಡಿ ಆರಂಭ ಮಾಡಲಾಗಿದೆ. ಹಿಂದವೀ ಜಟ್ಕಾ ಕಟ್ ಚಿಕನ್ ಸೆಂಟರ್ ಆರಂಭ ಮಾಡಲಾಗಿದೆ. ಅವರು ಅವರಿಗಾಗಿ ಹಲಾಲ್ ಮಾಡಿದ್ರೆ, ನಾವು ನಮ್ಮವರಿಗೋಸ್ಕರ ಜಟ್ಕಾ ಕಟ್​ ಮಾಡ್ತೀವಿ. ಇಲ್ಲಿ ಜಟ್ಕಾ ಮಾಡಿದ ಮಾಂಸ ಸಿಗುತ್ತದೆ ಎಂದು ಬೋರ್ಡ್ ಹಾಕಲಾಗಿದೆ. ಹಲಾಲ್ ಮಾಂಸ ನಿಷೇಧಕ್ಕೆ ಬಜರಂಗದಳದಿಂದ ಅಭಿಯಾನ ಆರಂಭವಾಗಿದೆ. ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳಿಂದ ಒಟ್ಟಾಗಿ ಸಮರ ಸಾರಿವೆ. ಪೂಜಿಸುವ ಗೋವನ್ನು ಕಡಿದು ತಿನ್ನೋರ ಬಳಿ ವ್ಯಾಪಾರ ಬೇಡ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ಅಭಿಯಾನ ಮಾಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿಗೆ ಹಿಂದೂ ಪರ ಸಂಘಟನೆ ಸಾಥ್ ನೀಡಿದೆ.

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಬಳಿ ಹಲಾಲ್ ಬಾಯ್ಕಾಟ್ ಅಭಿಯಾನ ಆರಂಭ ಮಾಡಲಾಗಿದೆ. ಹಲಾಲ್ ಬಾಯ್ಕಾಟ್ ಯಾಕೆ ಮಾಡಬೇಕು ಎಂದು ಹಿಂದೂ ಕಾರ್ಯಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ. ಹಲಾಲ್ ಸರ್ಟಿಫಿಕೇಟ್ ಇರುವ ಆಹಾರ ಉತ್ಪನ್ನ ತೋರಿಸಿ ಜಾಗೃತಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಕರಪತ್ರ ಹಂಚಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಪ್ರಶಾಂತ್ ಸಂಬರ್ಗಿ, ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿದೆ.

ಹಲಾಲ್, ಜಟ್ಕಾ ಕಟ್ ಬಗ್ಗೆ ಪ್ರಶಾಂತ್ ಸಂಬರ್ಗಿ, ಪುನೀತ್ ಕೆರೆಹಳ್ಳಿ ಹೇಳಿಕೆ

ಹಲಾಲ್ ಬಾಯ್ಕಾಟ್ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್ ಸಂಬರ್ಗಿ ಹೇಳಿಕೆ ನೀಡಿದ್ದಾರೆ. ನಾವು ಎರಡು ವರ್ಷ ಈ ಅಭಿಯಾನದ ಆರಂಭ ಮಾಡಿದ್ವಿ. ಹಲಾಲ್ ಮಾಡಿದ್ದ ಹಣ ಎಲ್ಲಿ ಹೋಗುತ್ತೆ, ಹಲಾಲ್ ಮಾಡಿದ್ದ ಹಣ ಮುಸ್ಲಿಮರಿಗೆ, ಹಾಗೂ ಭಯೋತ್ಪಾದಕರಿಗೆ ಈ ಹಲಾಲ್ ಹಣ ಹೋಗುತ್ತೆ. ಒಬ್ಬ ಮುಲ್ಲಾ ಹಲಾಲ್ ಮಾಡಿದ್ರೆ ಮೆಕ್ಕ ಕಡೆ ಮುಖ ಮಾಡಿ ಮಾಡ್ತಾನೆ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರ ದೇವರಿಗೆ ಪ್ರಾರ್ಥನೆ ಮಾಡಿ ಆಮೇಲೆ ಹಿಂದುಗಳಿಗೆ ಮಾರಾಟ ಮಾಡುತ್ತಾರೆ. ಇದು ಒಳ್ಳೆದಲ್ಲ. ಹಿಂದು ಜಟ್ಕಾ ಮೀಟ್ ಆರಂಭ ಆಗಬೇಕು. ಮುಸ್ಲಿಂ ಭಯೋತ್ಪಾದಕರ ಚಟುವಟಿಕೆ ಈ ಹಲಾಲ್ ದುಡ್ಡು ಹೋಗುತ್ತೆ. ಹಲಾಲ್ ಅನ್ನೋದು ದೇಶಕ್ಕೆ ಮಾರಕ, ಇದು ಮುಸ್ಲಿಂ ಸಂಸ್ಕೃತಿ. 15 ವರ್ಷಗಳಿಂದ ಹಲಾಲ್ ಮಾಡಿಕೊಂಡು ಬರ್ತಿದ್ದಾರೆ. ಹಲಾಲ್ ಬೇಡ ಅನ್ನೊದು ಗ್ರಾಹಕನ ಹಕ್ಕು. ಇದನ್ನ ಗ್ರಾಹಕ ಕೇಳಿ ಪಡೆಯಬೇಕು. ನಾವು ಈ ಅಭಿಯಾನ ಮುಂದಿನ ಹಂತಕ್ಕೆ ಕೊಂಡೊಯ್ತಿವಿ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

ಹಲಾಲ್ ಬಗ್ಗೆ ನಮ್ಮ ಹಿಂದೂ ಜನರಲ್ಲಿ ಜಾಗೃತಿ ಮೂಡಿಸ್ತಿದ್ದೀವಿ ಎಂದು ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಹೇಳಿಕೆ ನೀಡಿದ್ದಾರೆ. ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಈ ಹಲಾಲ್ ಬರುತ್ತಿರುವ ಹಣ ಯಾವ ಬಡ ಮುಸ್ಲಿಂ ವ್ಯಕ್ತಿಗಳಿಗೆ ಹೋಗ್ತಿಲ್ಲ. ಹಲಾಲ್ ಕೇವಲ ಮಾಂಸವಲ್ಲ. ಹಲಾಲ್ ವಸತಿ ಕೇಂದ್ರಗಳು, ಹಲಾಲ್ ಅಪಾರ್ಟ್ಮೆಂಟ್, ಹೇರ್ ಆಯಿಲ್, ಚಪ್ಪಲಿ ಸಹ ಹಲಾಲ್ ಅಲ್ಲಿ ಬರುತ್ತೆ. ದೊಡ್ಡ ದೊಡ್ಡ ಬಿಜಿನೆಸ್ ಮಾಡುವ ವ್ಯಕ್ತಿಗಳಿಗೆ ಹಣ ನೀಡಲಾಗುತ್ತೆ. ಈ ದೇಶದ ವಿರುದ್ಧ ಭಯೋತ್ಪಾದನೆ ಮಾಡುವ ವ್ಯಕ್ತಿಗಳಿಗೆ ಹಣ ಕೊಡ್ತಾರೆ. ಬಡ ಮುಸ್ಲೀಮರಿಗೆ ಈ ಹಣ ಸಿಗೋದಿಲ್ಲ. ಹೀಗಾಗಿ ಈ ಹಲಾಲ್ ಸರ್ಟಿಫಿಕೇಟ್ ಇರುವ ವಸ್ತುಗಳು ಖರೀದಿ ಮಾಡಬಾರದು. ಹೀಗಾಗಿ ಇಂದು ಪ್ರತಿ ಮನೆಗೆ ಪ್ರತಿ ಅಂಗಡಿಗಳಿಗೆ ಹಲಾಲ್ ಆಂದೋಲನ ಅಭಿಯಾನ ಆರಂಭ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾನೂನು, ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ; ನಾವು ಶಾಂತಿ, ಭದ್ರತೆ, ಅಭಿವೃದ್ಧಿ ಸಿದ್ಧಾಂತ ನಂಬುತ್ತೇವೆ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಹಲಾಲ್ VS ಜಟ್ಕಾ ಕಟ್: ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ, ಎರಡೂ ಪ್ರಾಣಿವಧೆ ಪದ್ಧತಿಗಳ ವಿವರ ಇಲ್ಲಿದೆ

Published On - 1:03 pm, Wed, 30 March 22