ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ ಡಿ.ರೂಪಾ ಮೌದ್ಗಿಲ್ ದೂರು

| Updated By: ಆಯೇಷಾ ಬಾನು

Updated on: May 31, 2022 | 6:30 PM

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿರುವ ಸಿಸಿಟಿವಿ ಡಿವಿಆರ್ ವಿರೂಪಗೊಳಿಸಿರುವ ಬಗ್ಗೆ ದೂರು ನೀಡಿದ್ದಾರೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ ಡಿ.ರೂಪಾ ಮೌದ್ಗಿಲ್ ದೂರು ಸಲ್ಲಿಸಿದ್ದಾರೆ.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ  ಡಿ.ರೂಪಾ ಮೌದ್ಗಿಲ್ ದೂರು
ಡಿ.ರೂಪಾ ಮೌದ್ಗಿಲ್
Follow us on

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ ಡಿ.ರೂಪಾ ಮೌದ್ಗಿಲ್ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿರುವ ಸಿಸಿಟಿವಿ ಡಿವಿಆರ್ ವಿರೂಪಗೊಳಿಸಿರುವ ಬಗ್ಗೆ ದೂರು ನೀಡಿದ್ದಾರೆ. ಮೇ 27 ರಂದು ಬೆಳಗ್ಗೆ ಕಚೇರಿ ಅಟೆಂಡರ್ ರನ್ನು ಕರೆಸಿಕೊಂಡು ಅಪರಿಚಿತ ವ್ಯಕ್ತಿ ಮೂಲಕ ಡಿವಿಆರ್ ವಿರೂಪಗೊಳಿಸಿರುವುದಾಗಿ ಎಂಡಿ ಡಿ.ರೂಪಾ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ.

ಡಿ. ರೂಪಾ‌ ಮೌದ್ಗಿಲ್ ಬರೆದ ಪತ್ರದಲ್ಲೇನಿದೆ?
ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ರಾಘವೇಂದ್ರ ಶೆಟ್ಟಿ ಇವರು ನಿಗಮದ ಪ್ರಧಾನ ಕಛೇರಿಯ ಸಿಸಿಟಿ/ಡಿವಿಆರ್‌ ಅನ್ನು ಉದ್ದೇಶಪೂರ್ವಕವಾಗಿ ತಿದ್ದಿ ವಿರೂಪಗೊಳಿಸಿರುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯರಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ದಿನಾಂಕ: 27.05.2022 ರಂದು ಬೆಳಿಗ್ಗೆ ಎಂ.ಜಿ.ರಸ್ತೆಯಲ್ಲಿರುವ ನಿಗಮದ ಕೇಂದ್ರ ಕಛೇರಿಯ ಬಾಗಿಲ ಕೀಗಳ ಜವಾಬ್ದಾರಿ ಇರುವ ಶ್ರೀ ಎನ್.ಹೆಚ್. ಮೂರ್ತಿ, ಅಟೆಂಡರ್, ಇವರು ಕೊಟ್ಟಿರುವ ಲಿಖಿತ ಹೇಳಿಕೆ ಪ್ರಕಾರ ತಿಳಿದುಬಂದಿರುವುದೇನೆಂದರೆ, ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ರಾಘವೇಂದ್ರ ಶೆಟ್ಟಿ ಇವರು ಫೋನ್ ಕರೆ ಮಾಡಿ ದಿನಾಂಕ: 27.05.2022 ರಂದು ಬೆಳಿಗ್ಗೆ 8.30 ಕ್ಕೆ ಕರೆಸಿಕೊಂಡು ನಿಗಮದ ಪ್ರಧಾನ ಕಛೇರಿಯ ಬಾಗಿಲು ತೆರೆಸಿಕೊಂಡಿರುತ್ತಾರೆ. ಹಾಗೂ ಕಛೇರಿಯ ಬಾಗಿಲು ತೆರೆದ ತಕ್ಷಣ ಅಧ್ಯಕ್ಷರ ಜೊತೆಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ಒಳಗೆ ಬಂದಿದ್ದು ಡಿವಿಆರ್ ಎಲ್ಲಿದೆ ಎಂದು ಕೇಳಿರುತ್ತಾನೆ.

ಶ್ರೀ ಎನ್.ಹೆಚ್.ಮೂರ್ತಿ, ಅಟೆಂಡರ್, ಇವರು ಡಿವಿಆರ್ ಯಾಕೆ ಬೇಕು ಎಂದು ಕೇಳಿರುತ್ತಾರೆ. ಮುಂದುವರೆದು, ಡಿವಿಆರ್, ಸಿಸಿಟಿವಿ ಯಾವುದನ್ನೂ ಕಛೇರಿಯ ಅಧಿಕಾರಿಗಳ ಪರವಾನಗಿ ಇಲ್ಲದೇ ಮುಟ್ಟಿಕೂಡದೆಂದು ತಿಳಿಸಿದಾಗ್ಯೂ ಕೂಡ ಅಧ್ಯಕ್ಷರ ಸಮ್ಮುಖದಲ್ಲೇ ಅಧ್ಯಕ್ಷರು ಕರೆದುಕೊಂಡು ಬಂದ ಆ ಅಪರಿಚಿತ ವ್ಯಕ್ತಿಯು ಡಿವಿಆರ್ ಉಪಕರಣವನ್ನು ಮುಟ್ಟಿ ಏನೋ ಮಾಡಿರುತ್ತಾನೆ ಎಂದು ಶ್ರೀ ಎನ್.ಹೆಚ್.ಮೂರ್ತಿ, ಅಟೆಂಡರ್, ಇವರು ಲಿಖಿತ ಹೇಳಿಕೆ ನೀಡಿರುತ್ತಾರೆ. (ಪ್ರತಿಯನ್ನು ಲಗತ್ತಿಸಲಾಗಿದೆ)

ತದನಂತರ ಸಿಸಿಟಿವಿ ಡಿಸ್‌ಪ್ಲೇ ಆಗಲೀ ಡಿವಿಆರ್ ಆಗಲಿ ಕೆಲಸ ಮಾಡುತ್ತಿರಲಿಲ್ಲ. ಎಷ್ಟರ ಮಟ್ಟಿಗೆ ಡಿ.ವಿ.ಆರ್‌. ವಿರೂಪಗೊಳಿಸಲಾಗಿದೆ ಎಂದು ತಿಳಿದು ಬರಬೇಕಾಗಿರುತ್ತದೆ. ಅಪರಿಚಿತ ವ್ಯಕ್ತಿಯು, ಸರ್ಕಾರದ ಕಛೇರಿಗೆ ಸೇರಿದ ಡಿವಿಆರ್‌ ಉಪಕರಣವನ್ನು ವಿರೂಪಗೊಳಿಸಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುತ್ತದೆ. ಕಛೇರಿಯ ಸ್ವತ್ತಾದ ಸಿಸಿಟಿವಿ/ಡಿವಿಆರ್ ಅನ್ನು ತಮ್ಮ ಸ್ವಂತ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅಧ್ಯಕ್ಷರು ಅಪರಿಚಿತ ವ್ಯಕ್ತಿಯಿಂದ ಸಿದ್ದಿ ವಿರೂಪಗೊಳಿಸಿರುವ ಈ ವಿಷಯವನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಗೋಧಿ ರಫ್ತು: ಲೋಪದೋಷಗಳನ್ನು ಸರಿಪಡಿಸಲು ಕಟ್ಟು ನಿಟ್ಟಾದ ಹೊಸ ನಿಯಮ ಹೊರಡಿಸಿದ ಸರ್ಕಾರ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:56 pm, Tue, 31 May 22