AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ; ಶಿಕ್ಷಣ ಸಚಿವ ಬಿಸಿ ನಾಗೇಶ್​ ಮಹತ್ವದ ಸುದ್ದಿಗೋಷ್ಠಿ

ಪಠ್ಯಪುಸ್ತಕ ಪರಿಷ್ಕರಣೆ ಮುಗಿದಿದೆ, ಪುಸ್ತಕಗಳು ಪ್ರಿಂಟ್ ಕೂಡ ಆಗಿವೆ. ಹೀಗಾಗಿ ಈಗ ಆ ವಿಚಾರದ ಕುರಿತು ಚರ್ಚೆ ಅನಗತ್ಯ. ಅಂದು ಕುವೆಂಪು ಪಠ್ಯ ತೆಗೆದಾಗ, ಅವಮಾನ ಆದಾಗ ಪ್ರಶ್ನಿಸಿರಲಿಲ್ಲ. ಬಿಜೆಪಿಯನ್ನ ತೆಗಳುವುದೇ ಅವರ ಕೆಲಸ, ಅದನ್ನೇ ಮಾಡ್ತಿದ್ದಾರೆ ಅಷ್ಟೇ. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ; ಶಿಕ್ಷಣ ಸಚಿವ ಬಿಸಿ ನಾಗೇಶ್​ ಮಹತ್ವದ ಸುದ್ದಿಗೋಷ್ಠಿ
ಶಿಕ್ಷಣ ಸಚಿವ ಬಿಸಿ ನಾಗೇಶ್
TV9 Web
| Updated By: ಆಯೇಷಾ ಬಾನು|

Updated on:May 31, 2022 | 3:18 PM

Share

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ತಾರಕ್ಕೇರಿದೆ. ನಾಡಿನ ಪ್ರಮುಖ ಸಾಹಿತಿಗಳ ಬರಹಗಳನ್ನು ಕೈಬಿಟ್ಟು ಹೆಗ್ಡೇವಾರ್‌, ಚಕ್ರವರ್ತಿ ಸೂಲಿಬೆಲೆಯವರ ಲೇಖನ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸದ್ಯ ಈಗ ಈ ಗೊಂದಲಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

2017ರಲ್ಲಿ ನಡೆದ ಘಟನೆ ಬಗ್ಗೆ ಕೆಲವರು ಈಗ ಮಾತಾಡುತ್ತಿದ್ದಾರೆ. ವಾಟ್ಸಾಪ್​ನಲ್ಲಿ ಬಂದಿದ್ದನ್ನು ಫಾರ್ವರ್ಡ್ ಮಾಡಿದ್ದಾರೆ. ಅಂದು ಉನ್ನತ ಮಟ್ಟದ ತನಿಖೆ ಆಗಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಬಿ ರಿಪೋರ್ಟ್ ಸಲ್ಲಿಸಿದೆ. ರೋಹಿತ್ ನಿರ್ದೋಷಿ ಅಂತಾ ಕಾಂಗ್ರೆಸ್ ಅವಧಿಯಲ್ಲೇ ಹೇಳಲಾಗಿದೆ. ರೋಹಿತ್ ಚಕ್ರತೀರ್ಥ RSS ಹುಡುಗ ಅಂತ ವಿರೋಧ ಮಾಡಲಾಗಿತ್ತು. ನನಗೂ ಇದಕ್ಕೂ ಸಂಬಂಧವಿಲ್ಲ ಅಂತ ರೋಹಿತ್​ ಸ್ಪಷ್ಟಪಡಿಸಿದ್ದಾರೆ. ಅದನ್ನು ಯಾರು ಬರೆದಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರ್ತೇನೆ. ನಾಡಗೀತೆಗೆ ಅವಮಾನ ಆಗಿದೆ ಅನ್ನೋದು ಶ್ರೀಗಳ ಮನಸ್ಸಿನಲ್ಲಿ ಇತ್ತು. ಈ ಬಗ್ಗೆ ನಿರ್ಮಲಾನಂದನಾಥಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಸ್ವಾಮೀಜಿ ಸಹ ಹೇಳಿದ್ದಾರೆ. ರೋಹಿತ್ ಚಕ್ರತೀರ್ಥ ಬಗ್ಗೆ ವಿರೋಧ ಮಾಡುವುದು ಸರಿಯಲ್ಲ. ಹಂಪನಾ ಸೇರಿ ಕೆಲ ಸಾಹಿತಿಗಳು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಸಾಹಿತಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ ರೋಹಿತ್ ಚಕ್ರತೀರ್ಥರ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್​ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡಲು ಈ ಟ್ರಿಕ್ ಉಪಯೋಗಿಸಿ

ಇನ್ನು ಪಠ್ಯಪುಸ್ತಕ ಪರಿಷ್ಕರಣೆ ಮುಗಿದಿದೆ, ಪುಸ್ತಕಗಳು ಪ್ರಿಂಟ್ ಕೂಡ ಆಗಿವೆ. ಹೀಗಾಗಿ ಈಗ ಆ ವಿಚಾರದ ಕುರಿತು ಚರ್ಚೆ ಅನಗತ್ಯ. ಅಂದು ಕುವೆಂಪು ಪಠ್ಯ ತೆಗೆದಾಗ, ಅವಮಾನ ಆದಾಗ ಪ್ರಶ್ನಿಸಿರಲಿಲ್ಲ. ಬಿಜೆಪಿಯನ್ನ ತೆಗಳುವುದೇ ಅವರ ಕೆಲಸ, ಅದನ್ನೇ ಮಾಡ್ತಿದ್ದಾರೆ ಅಷ್ಟೇ. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. 7ನೇ ತರಗತಿ ಮಕ್ಕಳಿಗೆ sex ಎಜುಕೇಶನ್ ಕೊಟ್ಟಾಗ ಕೇಳಲಿಲ್ಲ ಈಗ್ಯಾಕೆ ಕೇಳ್ತಿದ್ದಾರೆ. ಇವರಿಗೆ ಹಿಂದುತ್ವ, ರಾಷ್ತ್ರೀಯತೆ, ಬಿಜೆಪಿಯನ್ನ ತೆಗಳುವುದೇ ಕೆಲಸ ಅದನ್ನ‌ ಮಾಡ್ತಿದ್ದಾರೆ ಅಷ್ಟೇ. ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಮಾಡಲಿ, ಅವರ ತಪ್ಪಿನ ಅರಿವಾದಾಗ ಸುಮ್ಮನಾಗ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳಬೇಕಾ? ಇದನ್ನ ಬರಗೂರು ಸಮಿತಿ ಮಾಡಿತ್ತು. ಒಡೆಯರ್ ಬಗ್ಗೆ ಯಾಕೆ ‌ಪಠ್ಯ ಬಿಟ್ಟಿದ್ದರು. ಒಡೆಯರ್ ಲೆಫ್ಟೋ ರೈಟೋ ಹೇಳಿದ್ಯಾರು? ಒಡೆಯರ್ ಹಿಂದೂ ಧರ್ಮದ ಬಗ್ಗೆ ಹೇಳಿದ್ದರೆ ಅದನ್ನು ರೈಟ್ ಅನ್ನಬಹುದಿತ್ತು. ಆದರೆ ಒಡೆಯರ್ ಪಠ್ಯ ಅನಗತ್ಯವಾಗಿ ಕೈಬಿಟ್ಟಿದ್ದೇಕೆ? ನೀವೇ ಹೇಳಿ ಒಡೆಯರ್ ಯಾವ ಕಡೆಗೆ ಸೇರಿದವರು ಬೆಂಗಳೂರಿನಲ್ಲಿ ದೇವಸ್ಥಾನ ಇರಲಿಲ್ಲವಾ? ಯಾಕೆ ದೇವಾಲಯದ ಫೋಟೋ ಹಾಕಿಲ್ಲ. ಪಠ್ಯದಲ್ಲಿ ಸೇರಿಸೋದಕ್ಕೆ ಕೇವಲ ಚರ್ಚ್ ಮತ್ತು ಮಸೀದಿ ಮಾತ್ರ ಇತ್ತಾ? ಇದನ್ನ ಸರಿ ಮಾಡೋ ಕೆಲಸ ನಾವು ಮಾಡಿದ್ದೇವೆ ಎಂದರು. ಇದನ್ನೂ ಓದಿ: iQOO Neo 6: ಭಾರತಕ್ಕೆ ಬಂದೇ ಬಿಡ್ತು ಐಕ್ಯೂ ನಿಯೋ 6 5G: ಇಷ್ಟು ಕಡಿಮೆ ಬೆಲೆಗೆ ಎಂಥಾ ಸ್ಮಾರ್ಟ್​​ಫೋನ್

Published On - 3:00 pm, Tue, 31 May 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?