ಬೆಂಗಳೂರು: ವರ್ಗಾವಣೆ ದಂಧೆ, ಹಿರಿಯ ಅಧಿಕಾರಿಗಳ ಕಿರುಕುಳದಿಂದ ಸಾವಾಗಿದೆ ಎಂದು ಮೃತ ಇನ್ಸ್‌ಪೆಕ್ಟರ್ ನಂದೀಶ್ ಕುಟುಂಬಸ್ಥರು ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆ.ಆರ್.ಪುರ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆಯಲು ಹೋದಾಗ ಆಕ್ರೋಶ ವ್ಯಕ್ತಪಡಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ದ ಸಚಿವ ಎಂಟಿಎಬಿ ನಾಗರಾಜ್ ಕಿಡಿ ಕಾರಿದ್ದು, ಏನು ಅಂತಹ ಮಾಡಬಾರದ ತಪ್ಪು ಮಾಡಿರಲಿಲ್ಲಾ. ಒಂದು ನೋಟಿಸ್ ಕೊಟ್ಟು ವಿಚಾರ ಮಾಡಬಹುದು. ಅದಕ್ಕೆ ಒಂದು ದೊಡ್ಡ ತೀರ್ಮಾನ ಮಾಡುವ ಅವಶ್ಯಕತೆ ಇರ್ಲಿಲ್ಲಾ. ಕಮಿಷನರ್ ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಇದನ್ನು ನಾನು ಸುಮ್ಮನೆ ಬಿಡಲ್ಲಾ. ಮಕ್ಕಳಿಲ್ಲದ ಮನೆಗೆ ಈಗ ಯಾರಾಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ:
ಸಸ್ಪೆಂಡ್ ಆಗಿದ್ದ ಇನ್ಸ್‌ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R.ಪುರ ಠಾಣೆ ಇನ್ಸ್‌ಪೆಕ್ಟರ್ ನಂದೀಶ್ ಮೃತ ಇನ್ಸ್‌ಪೆಕ್ಟರ್. ಹೃದಯಾಘಾತದಿಂದ ಕೆ.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಂದೀಶ್ ಮೈಸೂರಿನ ಹುಣಸೂರು ಮೂಲದವರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ ಇನ್ಸ್‌ಪೆಕ್ಟರ್ ನಂದೀಶ್ ಸಸ್ಪೆಂಡ್ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.
Published On - 9:00 pm, Thu, 27 October 22