ಕಾರ್​ ಪಾರ್ಕಿಂಗ್​ ವಿಚಾರವಾಗಿ ಯುವತಿಗೆ ಕಿರುಕುಳ: ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು

ಮನೆ ಮುಂದೆ ಕಾರ್​ ನಿಲ್ಲಿಸಿದ್ದಕ್ಕೆ ಯುವತಿಗೆ ಓರ್ವ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಸ್ನೇಹಿತರು ಸಾಕ್ಷಿ ಸಮೇತ ಸಂಜಯನಗರ ಪೊಲೀಸ್​ ಠಾಣೆಗೆ ದೂರು ನೀಡಲು ಹೋಗಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ...

ಕಾರ್​ ಪಾರ್ಕಿಂಗ್​ ವಿಚಾರವಾಗಿ ಯುವತಿಗೆ ಕಿರುಕುಳ: ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು
ಸಂಜಯನಗರ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: Dec 01, 2023 | 11:47 AM

ಬೆಂಗಳೂರು ಡಿ.01: ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಸಂಜಯನಗರ ಪೊಲೀಸರು (Police) ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಆರೋಪ ಕೇಳಿಬಂದಿದೆ. ಸಂಜಯ್ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಮನೆಯೊಂದರ ಮುಂದೆ ಓರ್ವ ಯುವತಿ ಕಾರ್ ಪಾರ್ಕಿಂಗ್ ಮಾಡಿದ್ದರು. ಈ ಸಂಬಂಧ ಮನೆಯ ಸದಸ್ಯ ಯುವತಿಗೆ (Youth) ಮನಬಂದಂತೆ ನಿಂದಿಸಿದ್ದಾನೆ. ಈ ವೇಳೆ ಯುವತಿ ಸ್ನೇಹಿತರು (Friends) ಆತನಿಗೆ ಸಮಾಧಾನ ಮಾಡಿದರೂ, ಸುಮ್ಮನಾಗದ ವ್ಯಕ್ತಿ ಬಾಯಿಗೆ ಬಂದಂತೆ ಬೈದಾಡಿದ್ದಾನೆ.

ಈ ದೃಶ್ಯವನ್ನು ಯುವತಿಯ ಸ್ನೇಹಿತರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಯುವತಿಗೆ ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಸಾಕ್ಷಿ ಸಮೇತ ದೂರು ಕೊಡಲು ಸಂಜಯನಗರ ಪೊಲೀಸ್​ ಠಾಣೆಗೆ ಹೋಗಿದ್ದಾರೆ. ಆದರೆ ಪೊಲೀಸ್​ ಅಧಿಕಾರಿಗಳು ದೂರು ಸ್ವೀಕರಿಸಿಲ್ಲ. ಸಂಜಯ್ ನಗರ ಪೊಲೀಸರ ಕಾರ್ಯವೈಕರಿಗೆ ಯುವತಿ ಸ್ನೇಹಿತರು ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಹಿಳೆಯರ 13 ಸಾವಿರ ನಗ್ನ ಚಿತ್ರಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪಿ ಅರೆಸ್ಟ್

ಯುವತಿ ಸ್ನೇಹಿತ ಎಕ್ಸ್​ (ಟ್ವಿಟರ್​)ನಲ್ಲಿ ತಾನು ಸೆರೆ ಹಿಡಿದ ವಿಡಿಯೋ ಪೋಸ್ಟ್​ ಮಾಡಿ, ವಿಡಿಯೋ ಸಮೇತ ಹೋಗಿ ದೂರು ಕೊಟ್ಟರು ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಾರೆ. ಹೀಗಾದರೆ ಬೆಂಗಳೂರಿನಲ್ಲಿ ಯುವತಿಯರು ಬದುಕುವುದು ಹೇಗೆ? ಎಂದು ಕಿರುಕುಳಕ್ಕೆ ಒಳಗಾಗಿರುವ ಯುವತಿ ಸ್ನೇಹಿತ ಬರೆದುಕೊಂಡಿದ್ದಾರೆ. ಮತ್ತು ಬೆಂಗಳೂರು ನಗರ ಕಮಿಷನರ್ ಅವರಿ​ಗೆ ಟ್ಯಾಗ್ ಮಾಡಿದ್ದಾರೆ.

 ಟ್ವೀಟ್​ ಮಾಡಿದ ಮೂರೇ ಗಂಟೆಯಲ್ಲಿ ಎಚ್ಚೆತ್ತ ಖಾಕಿ

ನಗರ ಪೊಲೀಸ್ ಕಮಿಷನರ್ ಅವರಿಗೆ ಟ್ವೀಟ್​ ಮೂಲಕ ಯುವತಿ ಸ್ನೇಹಿತ ದೂರು ನೀಡುತ್ತಿದ್ದಂತೆ ಸಂಜಯನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಗರ ಆಯುಕ್ತ ಬಿ ದಯಾನಂದ್​​ ಅವರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಮಿಷನರ್​ ಬಿ ದಯಾನಂದ್​ ಅವರ ಸೂಚನೆ ಮೇರೆಗೆ ಸಂಜಯನಗರ ಪೊಲೀಸರು ಯುವತಿಗೆ ನಿಂದಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Fri, 1 December 23

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us