ಟಿವಿ9 ಆರಂಭವಾದ ದಿನದಿಂದ ಇಲ್ಲಿಯವರೆಗೂ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ: ಹೆಚ್​ಡಿ ದೇವೇಗೌಡ

| Updated By: ganapathi bhat

Updated on: Jan 05, 2022 | 9:22 PM

ಮಂಡ್ಯದ ರೈತ ಒಬ್ಬರನ್ನು ಸನ್ಮಾನಿಸುವ ಅವಕಾಶ ನನಗೆ ಮಾಡಿಕೊಟ್ಟಿದ್ದಾರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬರುಣ್ ದಾಸ್ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಟಿವಿ9 ಆರಂಭವಾದ ದಿನದಿಂದ ಇಲ್ಲಿಯವರೆಗೂ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ: ಹೆಚ್​ಡಿ ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ
Follow us on

ಬೆಂಗಳೂರು: ಟಿವಿ9 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಟಿವಿ9 ಎಲ್ಲಾ ಸಿಬ್ಬಂದಿಗಳು, ಟಿವಿ9 ಪ್ರಾರಂಭವಾದ ಮೊದಲನೇ ದಿನ ಹಿಡಿದು ಇಲ್ಲಿಯವರೆಗೂ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಇದರ ಕೀರ್ತಿ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ರಾಷ್ಟ್ರವ್ಯಾಪ್ತಿ ಕನ್ನಡ ಭಾಷೆಯನ್ನು ಆಡುವ ಎಲ್ಲಾ ಸ್ನೇಹಿತರಿಗೂ ಹೊರದೇಶದಲ್ಲಿ ಇರುವವರೂ ಟಿವಿ9 ನೋಡುತ್ತಾರೆ. ವಿಶ್ವದ ಅನೇಕ ದೇಶಗಳಲ್ಲಿ ಟಿವಿ9 ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಟಿವಿ9 ಕನ್ನಡ ವಾಹಿನಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ.

ಟಿವಿ9 15 ವರ್ಷ ತುಂಬಿದ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಮಾಡಿಕೊಂಡಿದ್ದಾರೆ. ಕಷ್ಟ ಆಗುತ್ತೆ ನನಗೆ ಎಂದರೂ ಅವರು ಸ್ನೇಹ, ಪ್ರೀತಿಯಿಂದ ಕರೆಸಿಕೊಂಡಿದ್ದಾರೆ. ನನ್ನ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಈ ಮೊದಲು ಮಾಡಿದ್ದಾರೆ, ಟಿವಿ9 ಉತ್ತಮ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಜೊತೆಗೆ ಮಂಡ್ಯದ ರೈತ ಒಬ್ಬರನ್ನು ಸನ್ಮಾನಿಸುವ ಅವಕಾಶ ನನಗೆ ಮಾಡಿಕೊಟ್ಟಿದ್ದಾರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬರುಣ್ ದಾಸ್ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟಿವಿ9 15ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಇದನ್ನೂ ಓದಿ: ಕರ್ನಾಟಕದ ಸಾಕ್ಷಿಪ್ರಜ್ಞೆ ಟಿವಿ9 ಮಾರ್ಗದರ್ಶನ ಸದಾ ಬಯಸುವೆ: ನವನಕ್ಷತ್ರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ