ಕರ್ನಾಟಕದ ಸಾಕ್ಷಿಪ್ರಜ್ಞೆ ಟಿವಿ9 ಮಾರ್ಗದರ್ಶನ ಸದಾ ಬಯಸುವೆ: ನವನಕ್ಷತ್ರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

'ಟಿವಿ9 ಕರ್ನಾಟಕ ಸಾಕ್ಷಿಪ್ರಜ್ಞೆಯಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿ ಏನಾದರೂ ನಡೆಯುತ್ತಿದ್ದರೆ, ನಡೆಯಬೇಕಿದ್ದರೆ ಅದನ್ನು ಟಿವಿ9 ಮೂಲಕ ಬಿಂಬಿಸಿದಾಗ ಪರಿಣಾಮಕಾರಿಯಾಗಿ ಆಗುತ್ತದೆ’ ಎಂಬ ಮಾತು ಜನಜನಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕದ ಸಾಕ್ಷಿಪ್ರಜ್ಞೆ ಟಿವಿ9 ಮಾರ್ಗದರ್ಶನ ಸದಾ ಬಯಸುವೆ: ನವನಕ್ಷತ್ರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ನವನಕ್ಷತ್ರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2022 | 6:11 PM

ಬೆಂಗಳೂರು: ಟಿವಿ9 ಸುದ್ದಿವಾಹಿನಿಯು ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಟಿವಿ9 ಆಯೋಜಿಸಿದ್ದ ‘ನವನಕ್ಷತ್ರ’ ಕರ್ನಾಟಕದ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ 15 ವರ್ಷಗಳಲ್ಲಿ ಟಿವಿ9 ಕರ್ನಾಟಕ ಸಾಕ್ಷಿಪ್ರಜ್ಞೆಯಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿ ಏನಾದರೂ ನಡೆಯುತ್ತಿದ್ದರೆ, ನಡೆಯಬೇಕಿದ್ದರೆ ಅದನ್ನು ಟಿವಿ9 ಮೂಲಕ ಬಿಂಬಿಸಿದಾಗ ಪರಿಣಾಮಕಾರಿಯಾಗಿ ಆಗುತ್ತದೆ’ ಎಂಬ ಮಾತು ಜನಜನಿತವಾಗಿದೆ ಎಂದರು.

ಇದು ಜನರ ಮನಸ್ಸಿಗೆ ಹತ್ತಿರ ಇರುವ ಚಾನೆಲ್. ಕರ್ನಾಟಕದಲ್ಲಿ ಮನೆಮನೆಗೂ ಪರಿಚಿತವಾಗಿದೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಟಿವಿ9 ಹಲವು ಗಣ್ಯರು, ತಜ್ಞರು, ನಾಯಕರು, ವಿಜ್ಞಾನಿಗಳು, ಆಡಳಿತಗಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದೆ. ಕನ್ನಡಿಗರಿಗೆ, ಕರ್ನಾಟಕಕ್ಕೆ ಸಂಕಷ್ಟವಾದಾಗ ಟಿವಿ9 ಸರ್ಕಾರದ ಜೊತೆಗೆ ನಿಂತು, ಹೆಗಲಿಗೆ ಹೆಗಲು ಕೊಟ್ಟು ಜನರನ್ನು ರಕ್ಷಿಸುವ ಕೆಲಸ ಮಾಡಿದೆ. ಎಲ್ಲಿ ಸಾಧನೆಯಿದೆ, ಎಲ್ಲಿ ಆಪತ್ತಿದೆ, ಎಲ್ಲಿ ಒಳ್ಳೇ ಪ್ರಯತ್ನ ಇದೆಯೇ ಅಲ್ಲೆಲ್ಲಾ ಟಿವಿ9 ಇದೆ ಎಂದರು.

ಕನ್ನಡಿಗರ ಅಚ್ಚುಮೆಚ್ಚಿನ ಟಿವಿ ಚಾನೆಲ್ ಇದು. ನವನಕ್ಷತ್ರಗಳು ಯಾವ ರೀತಿ ತಮ್ಮ ಕೆಲಸಗಳನ್ನು ಮಾಡಿದಾಗ ಸೂರ್ಯಚಂದ್ರರು ಉದಯ-ಅಸ್ತ ಆಗ್ತಾರೋ ಹಾಗೆ ದಿನವಿಡೀ (24X7) ನವನಕ್ಷತ್ರದ ರೀತಿ ಟಿವಿ9 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಒಂಬತ್ತು ಎಂಬ ಸಂಖ್ಯೆ ಬಂದಿದೆ ಎಂದು ನಾನು ಭಾವಿಸುತ್ತೇನೆ. ಸೂರ್ಯಚಂದ್ರರ ಸಮೇತ ಯಾವುದೇ ನಕ್ಷತ್ರಗಳು ಎಂದಿಗೂ ವಿಶ್ರಮಿಸುವುದಿಲ್ಲ. ಅವರ ಶಬ್ದಕೋಶದಲ್ಲಿ ವಿಶ್ರಾಮ ಇಲ್ಲ. ಟಿವಿ9 ಸಹ ಅದೇ ರೀತಿ ಕೆಲಸ ಮಾಡುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಜನರ ಕಷ್ಟದ ಜೊತೆಗೆ ನಿಂತಿದೆ ಎಂದು ಶ್ಲಾಘಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರೇರಣೆ, ಸ್ಫೂರ್ತಿ ಕೊಡುವ ಕೆಲಸವನ್ನೂ ಟಿವಿ9 ಮಾಡುತ್ತಿದೆ. ಇದರ ಹಿಂದೆ ದೊಡ್ಡ ಪರಿಶ್ರಮ ಇದೆ. ಭಾರತ ದೇಶದ ಹಲವು ಭಾಷೆಗಳಲ್ಲಿ ಟಿವಿ9 ಇದೆ. ಸಿಇಒ ಬರುಣ್ ದಾಸ್ ಅವರು, ಟಿವಿ9 ವಾಹಿನಿಯ ಮಾದರಿಯಲ್ಲಿಯೇ 24X7 ಕೆಲಸ ಮಾಡುತ್ತಾರೆ. ಹಲವು ಭಾಷೆಗಳಲ್ಲಿ ಟಿವಿ9 ಈಗಾಗಲೇ ನಂ 1 ಆಗಿದೆ. ಉಳಿದ ಭಾಷೆಗಳಲ್ಲೂ ಮುಂದಿನ ದಿನಗಳಲ್ಲಿ ನಂ 1 ಆಗುತ್ತೆ. ಟಿವಿ9 ಸಂಪಾದಕರಾದ ಶ್ರೀಧರ್ ಅವರು ಒಳ್ಳೆಯ ಪ್ಲಾನಿಂಗ್, ಸ್ಟ್ರಾಜಟಿ ಕೊಟ್ಟಿದ್ದಾರೆ. ವಾಹಿನಿಯನ್ನು ಜನಸ್ನೇಹಿ ಆಗಿಸಿದ್ದಾರೆ. ಇದು ಜನರ ನಿಜವಾದ ಧ್ವನಿ. ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಚಾನೆಲ್ ಮಾರ್ಗದರ್ಶನವನ್ನು ಸದಾ ಪಡೆದುಕೊಳ್ಳುತ್ತಿರುತ್ತೇನೆ. ಸಮಾಜದ ಸುಧಾರಣೆ ವಿಚಾರದಲ್ಲಿಯೂ ಟಿವಿ9 ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸುದ್ದಿವಾಹಿನಿಗಳಲ್ಲಿ ಟಿವಿ9 ಹೇಗೆ ನಂಬರ್ ಆಗಿದೆಯೋ, ಅಭಿವೃದ್ಧಿಯಲ್ಲಿ ಕರ್ನಾಟಕವು ನಂಬರ್ 1 ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: 250 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಕಾಪಾಡಿ ಸಂಶೋಧನೆ ಮೂಲಕ ಸಾಧನೆ ಮಾಡಿದ ಮಂಡ್ಯ ರೈತ ಬೋರೇಗೌಡರಿಗೆ ನವನಕ್ಷತ್ರ ಸನ್ಮಾನ ಇದನ್ನೂ ಓದಿ: ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿಗೆ ಟಿವಿ9 ನವನಕ್ಷತ್ರ ಗೌರವ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ