ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿಗೆ ಟಿವಿ9 ನವನಕ್ಷತ್ರ ಗೌರವ
Navanakshatra Sanman 2021: ಡಾ. ಖಾದರ್ ವಲಿ ಹೆಸರಾಂತ ಆಹಾರ ವಿಜ್ಞಾನಿ. ಅಮೆರಿಕದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಇತ್ತು. ಆದ್ರೆ ಅಲ್ಲಿನ ಆಹಾರ ಪದ್ಧತಿ ಬಗ್ಗೆ ಕಸಿವಿಸಿ. ಅಮೆರಿಕದಲ್ಲಿ ಕೇವಲ 6 ವರ್ಷದ ಬಾಲಕಿ ಋತುಮತಿಯಾಗ್ತಾಳೆ. ಅದನ್ನು ನೋಡಿದ ಅವರಿಗೆ ಅನೇಕ ಪ್ರಶ್ನೆಗಳು ಕಾಡಿದವು. ಈ ಅಸ್ವಾಭಾವಿಕ ಬೆಳವಣಿಗೆಗೆ ಕಾರಣವೇನು ಅಂತಾ ವಿಜ್ಞಾನಿ, ಡಾ. ವಲಿ ಸಂಶೋಧನೆಗೆ ಇಳಿದಾಗ ಸತ್ವರಹಿತ ಆಹಾರವೇ ಇದಕ್ಕೆ ಕಾರಣ ಎನ್ನುವ ಉತ್ತರ ತಿಳಿಯಿತು. ಹಾಗಾದ್ರೆ, ಉತ್ತಮ ಆಹಾರ ಯಾವುದು ಅಂತಾ ಡಾ. ವಲಿ ಆರಂಭಿಸಿದ ಸಂಶೋಧನೆಯ ಫಲವೇ ಇಂದು ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಅವರ ಹೋರಾಟ. ಈ ವಿಜ್ಞಾನಿಯೇ ‘ಮಿಲೆಟ್ ಮ್ಯಾನ್ ಆಫ್ ಇಂಡಿಯಾ’ ಡಾಕ್ಟರ್ ಖಾದರ್ ವಲಿ.
Published On - 10:58 am, Wed, 5 January 22