ಟಿವಿ9 ಕನ್ನಡ ಕರ್ನಾಟಕದ ನಂ1 ಸುದ್ದಿ ವಾಹಿನಿಯಾಗಿ ಬೆಳೆಯಲು ಮೆಟ್ಟಿಲಾಗಿ ನಿಂತ ಸಿಇಒ ಬರುಣ್ ದಾಸ್ ಮತ್ತು ಎಡಿಟರ್ ಆರ್. ಶ್ರೀಧರನ್
Navanakshatra Sanman 2021: ದೇಶದ ಅತಿ ದೊಡ್ಡ ಸುದ್ದಿ ಜಾಲವಾಗಿ ಬೆಳೆಯುತ್ತಿರುವ TV9 ನ್ಯೂಸ್ ನೆಟ್ವರ್ಕ್ನ ಭಾಗವಾಗಿರುವ ಟಿವಿ9 ಕನ್ನಡ, ಬರೀ ಸುದ್ದಿ ಚಾನೆಲ್ ಅಲ್ಲ. ನಾವು ಸುದ್ದಿಯನ್ನು ಪ್ರಸ್ತುತ ಪಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಧ್ವನಿ ಇಲ್ಲದವರಿಗೆ ದನಿಯಾಗಿ, ದುರ್ಬಲರು, ದೀನ ದಲಿತರಿಗೆ ಆಶಾಕಿರಣವಾಗಿರುವ ಚಾನೆಲ್ ಟಿವಿ9. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಸಮಾಜದ ನಿರ್ಮಾಣವೇ ನಮ್ಮ ಗುರಿ. ಪ್ರಗತಿ ಪಥದಲ್ಲಿ ದಾಪುಗಾಲು ಹಾಕುವ ಕರ್ನಾಟಕದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾವು ಕಂಕಣಬದ್ಧರಾಗಿದ್ದೇವೆ. ಟಿವಿ 9 ಕನ್ನಡ ಚಾನೆಲ್ಗೆ 15ರ ವಸಂತ ತುಂಬಿದೆ. ಒಂದು ಸುದ್ದಿ ಚಾನೆಲ್ ಆಗಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ ನಾವಿನ್ನೂ ಸಾಧಿಸಬೇಕಾದುದು ಬಹಳಷ್ಟಿದೆ. ಈ ಸಾಧನೆಗೆ ಮೆಟ್ಟಿಲಾಗಿ ನಿಂತವರು ಟಿವಿ9 ನೆಟ್ವರ್ಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರುಣ್ ದಾಸ್ ಮತ್ತು ಟಿವಿ9 ಕನ್ನಡ ವ್ಯವಸ್ಥಾಪಕ ಸಂಪಾದಕ ಆರ್. ಶ್ರೀಧರನ್.
Published On - 9:31 am, Wed, 5 January 22