ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ನಾನೂ ಕೂಡ ಜರ್ನಲಿಸಂ ಹಿನ್ನೆಲೆಯಿಂದ ಬಂದವಳು. ಈ ವಿಭಾಗದಲ್ಲಿ ಜನರ ಹೃದಯ ಮುಟ್ಟುವ ಕೆಲಸ ಮಾಡುವ ಶಕ್ತಿ ಇರುತ್ತದೆ. ಜನರು ಹಾಗೂ ನಾವು ಸರಿಯಾದ ಕ್ರಮದಲ್ಲಿ ಅದನ್ನು ಬಳಸಿಕೊಂಡರೆ ಅತ್ಯುತ್ತಮ ಕೆಲಸ ಅದು ಎಂದು ಹೇಳಿಕೊಂಡಿದ್ದಾರೆ.

TV9kannada Web Team

| Edited By: ganapathi bhat

Jan 05, 2022 | 9:17 PM

ಬೆಂಗಳೂರು: ಒಂದೆಡೆ ಪುಷ್ಪ ಸಿನಿಮಾ ಬಿಡುಗಡೆ ಆಗಿದೆ. ಮತ್ತೊಂದೆಡೆ ಟಿವಿ9 ಕನ್ನಡ ವಾಹಿನಿಯ 15ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ಬೆಂಗಳೂರಿನಲ್ಲಿ ಇರುವುದು ತುಂಬಾ ಖುಷಿ ಕೊಟ್ಟಿದೆ. ಟಿವಿ9ನ 15ನೇ ವಾರ್ಷಿಕೋತ್ಸವಕ್ಕೆ ಶುಭಾಶಯ ಎಂದು ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಟಿವಿ9 ಕನ್ನಡ ವಾಹಿನಿ ಆಯೋಜಿಸಿದ್ದ ‘ನವನಕ್ಷತ್ರ’ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

ನಾನೂ ಕೂಡ ಜರ್ನಲಿಸಂ ಹಿನ್ನೆಲೆಯಿಂದ ಬಂದವಳು. ಈ ವಿಭಾಗದಲ್ಲಿ ಜನರ ಹೃದಯ ಮುಟ್ಟುವ ಕೆಲಸ ಮಾಡುವ ಶಕ್ತಿ ಇರುತ್ತದೆ. ಜನರು ಹಾಗೂ ನಾವು ಸರಿಯಾದ ಕ್ರಮದಲ್ಲಿ ಅದನ್ನು ಬಳಸಿಕೊಂಡರೆ ಅತ್ಯುತ್ತಮ ಕೆಲಸ ಅದು ಎಂದು ಹೇಳಿಕೊಂಡಿದ್ದಾರೆ.

ನನಗೆ ಸಿಗುತ್ತಿರುವ ಸಿನಿಮಾ, ಅದರಲ್ಲಿನ ಹಾಡುಗಳು, ಡ್ಯಾನ್ಸ್ ಇತ್ಯಾದಿ ಕಾರಣಗಳಿಂದ ನನ್ನ ಡ್ಯಾನ್ಸ್ ಸ್ಟೆಪ್ಸ್ ಟ್ರೆಂಡ್ ಆಗುವಂತೆ ಮಾಡ್ತಿದೆ. ಆ ಬಗ್ಗೆ ತುಂಬಾ ಖುಷಿ ಇದೆ. ಸದ್ಯ ರಿಲೀಸ್ ಆಗಿರುವ ಪುಷ್ಪ ಸಿನಿಮಾ ಟ್ರೆಂಡ್ ಸೂಪರ್ ಆಗಿ ಇದೆ ಎಂದೂ ಅವರು ಈ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಸಾಕ್ಷಿಪ್ರಜ್ಞೆ ಟಿವಿ9 ಮಾರ್ಗದರ್ಶನ ಸದಾ ಬಯಸುವೆ: ನವನಕ್ಷತ್ರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಇಸ್ರೋ ವಿಜ್ಞಾನಿ ಎಂ.ವಿ ರೂಪಾ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

Follow us on

Related Stories

Most Read Stories

Click on your DTH Provider to Add TV9 Kannada