ಬಾಣಂತಿಯರ ಸಾವು, HMPV ವೈರಸ್ ಬೆನ್ನಲ್ಲೇ ಸಿಎಂ ಆರೋಗ್ಯ ಇಲಾಖೆ ಸಭೆ: ಇಲ್ಲಿವೆ ಮುಖ್ಯಾಂಶಗಳು

|

Updated on: Jan 08, 2025 | 3:57 PM

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರೂ. 11182 ಕೋಟಿ ಬಜೆಟ್‌ನ 58% ವೆಚ್ಚವಾಗಿದೆ ಎಂದು ತಿಳಿಸಲಾಗಿದೆ. ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಲು, ಆಸ್ಪತ್ರೆಗಳ ಮೂಲಸೌಕರ್ಯ ಸುಧಾರಣೆ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ, ಹಾಗೂ ಎಎನ್‌ಎಂ ಮತ್ತು ಎಚ್‌ಐಒ ಹುದ್ದೆಗಳ ಭರ್ತಿಗೆ ಒತ್ತು ನೀಡಲಾಗಿದೆ.

ಬಾಣಂತಿಯರ ಸಾವು, HMPV ವೈರಸ್ ಬೆನ್ನಲ್ಲೇ ಸಿಎಂ ಆರೋಗ್ಯ ಇಲಾಖೆ ಸಭೆ: ಇಲ್ಲಿವೆ ಮುಖ್ಯಾಂಶಗಳು
ಬಾಣಂತಿಯರ ಸಾವು, HMPV ವೈರಸ್ ಬೆನ್ನಲ್ಲೇ ಸಿಎಂ ಆರೋಗ್ಯ ಇಲಾಖೆ ಸಭೆ: ಇಲ್ಲಿವೆ ಮುಖ್ಯಾಂಶಗಳು
Follow us on

ಬೆಂಗಳೂರು, ಜನವರಿ 08: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮಾಡಲಾಗಿದೆ. ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ, ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ, ಹೆಚ್​ಎಂಪಿವಿ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಕೆಲ ಸೂಚನೆಗಳನ್ನು ನೀಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.

ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಅಂಶಗಳು ಹೀಗಿವೆ

  • ಪ್ರಸ್ತುತ ಸಾಲಿನಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ ರೂ.11182 ಕೋಟಿ ಅನುದಾನ. ಇದುವರೆಗೆ ರೂ. 6593 ಕೋಟಿ ವೆಚ್ಚ, ಶೇ. 5896 ಪ್ರಗತಿ
  • ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸಲು ವ್ಯಾಪಕ ಅಭಿಯಾನ ಆರಂಭಕ್ಕೆ ಸೂಚನೆ.
  • ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ. 2018-20ರಲ್ಲಿ ಒಂದು ಲಕ್ಷಕ್ಕೆ 69 ಮರಣ ಸಂಭವಿಸುತ್ತಿದ್ದು, 2022-24ರ ಅವಧಿಯಲ್ಲಿ ರಾಜ್ಯದಲ್ಲಿ ಇದರ ಪ್ರಮಾಣ 55 ಕ್ಕೆ ಇಳಿಕೆ.
  • ಹೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರು ಮತ್ತು ಅರವಳಿಕೆ ತಜ್ಞರ ನೇಮಕ ಮಾಡುವುದು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ಲಭ್ಯತೆ ಖಾತ್ರಿಪಡಿಸಲು ಆದೇಶಿಸಲಾಗಿದೆ.
  • ಔಷಧಿ ಖರೀದಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.
  • ಒಟ್ಟು 3927 ಎಎನ್‌ಎಂ ಖಾಲಿ ಹುದ್ದೆಗಳ ಪೈಕಿ 1205 ಹಾಗೂ 2990 ಎಚ್‌ಐಒ ಖಾಲಿ ಹುದ್ದೆಗಳ ಪೈಕಿ 300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದಿಸಲಾಗಿದೆ.
  • ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ.
  • ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಅಗತ್ಯ ಮೂಲಸೌಕರ್ಯಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡುವುದು.
  • ನಗರ ಪ್ರದೇಶಗಳಲ್ಲಿ 817 ನಮ್ಮ ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ 512 ಕಾರ್ಯಾಚರಣೆ ಮಾಡಲಾಗುತ್ತಿದ್ದು, ನಮ್ಮ ಕ್ಲಿನಿಕ್ ಬಲಪಡಿಸಲು ಕ್ರಮಕ್ಕೆ ಸೂಚನೆ ನೀಡಲಾಗಿದೆ.
  • ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಚಿಕಿತ್ಸಾ ಪ್ಯಾಕೇಜ್ ಮೊತ್ತ ಹೆಚ್ಚಳ ಕುರಿತು ಚರ್ಚೆ ಮಾಡಲಾಗಿದೆ.
  • ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಮಗ್ರ ಸುಧಾರಣೆ ಕುರಿತು ಚರ್ಚಿಸಲಾಗಿದೆ.
  • ಹೆಚ್​​ಎಂಪಿವಿ ಪ್ರಾಣಾಂತಿಕವಲ್ಲ, ಆತಂಕ ಬೇಡ. ವೈರಸ್ ಪರೀಕ್ಷೆ ಅಗತ್ಯವಿಲ್ಲ.

ಜನರು ಅನಗತ್ಯವಾಗಿ ತಪಾಸಣೆ ಮಾಡಿಸುವುದು ಬೇಡ

ಹೆಚ್​​ಎಂಪಿವಿ ಟೆಸ್ಟ್ ಮಾಡಿಸಿ ದುಂದು ವೆಚ್ಚ ಮಾಡುವ ಅಗತ್ಯವಿಲ್ಲವೆಂದು ಟಿವಿ9ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. HMP ವೈರಸ್ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. HMP ವೈರಸ್​ನಿಂದ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ. ಜನರು ಅನಗತ್ಯವಾಗಿ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:55 pm, Wed, 8 January 25