AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲು

ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಮ್ಮುಖದಲ್ಲೇ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಯಾಗಿದ್ದಾರೆ. ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ಧರಾಮಯ್ಯನವರ ಮುಂದೆಯೇ ಶರಣಾದರು. ಈ ಮೂಲಕ ಶಸ್ತ್ರಾಸ್ತ್ರ ಹೋರಾಟಕ್ಕೆ ಗುಡ್​ಬೈ ಹೇಳಿ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಜೈ ಎಂದಿದ್ದಾರೆ.

ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲು
ನಕ್ಸಲರು ಶರಣಾಗತಿ
ರಮೇಶ್ ಬಿ. ಜವಳಗೇರಾ
|

Updated on:Jan 08, 2025 | 8:01 PM

Share

ರಾಯಚೂರು, ಜನವರಿ 08): ಇಂದು (ಜನವರಿ 08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾಕಂದ್ರೆ, ಕಳೆದ ಹಲವು ವರ್ಷಗಳಿಂದ ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಇದೀಗ ಮುಖ್ಯವಾಹಿನಿಗೆ ಬಂದಿದ್ದಾರೆ. ಆರು ನಕ್ಸಲರು ಇಂದು (ಜನವರಿ 08) ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಸಮ್ಮುಳದಲ್ಲೇ ಶರಣಾಗಿದ್ದಾರೆ. ಇನ್ನು ಶರಣಾದ ನಕ್ಸಲರಿಗೆ ಸಿಎಂ, ಸಂವಿಧಾನದ ಪುಸ್ತಕ ನೀಡಿದರು.  ಈ ಮೂಲಕ ಕರ್ನಾಟಕ ನಕ್ಸಲ ಮುಕ್ತ ರಾಜ್ಯ ಎಂದು ವ್ಯಾಖ್ಯಾನಿಸಬಹುದು.

ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಹಲವು ವರ್ಷಗಳ ಸಶಸ್ತ್ರ ಹೋರಾಟಕ್ಕೆ ಗುಡ್​ಬೈ ಹೇಳಿ ಮುಖ್ಯವಾಹಿನಿಗೆ ಬಂದಿದ್ದಾರೆ. ಈ ವೇಳೆ ಡಿಜಿ ಐಜಿಪಿ ಅಲೋಕ್‌ ಮೋಹನ್‌, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶರಣಾಗತಿಯಾದ ಆರು ನಕ್ಸಲರ ಕುಟುಂಬದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಶಸ್ತ್ರ ಹೋರಾಟಕ್ಕೆ ಧುಮುಕಿದ್ಯಾಕೆ? ಶರಣಾಗುತ್ತಿರುವ 6 ನಕ್ಸಲರ ಬಗ್ಗೆ ಒಂದಿಷ್ಟು ಮಾಹಿತಿ

ಅನ್ಯಾಯವಾದಗ ನ್ಯಾಯ ಸಿಗದಿದ್ದಕ್ಕೆ , ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು ಕಳೆದ ಹಲವು ವರ್ಷಗಳಿಂದ ಕಾಡಿನಲ್ಲಿ ನೆಲೆಸಿ ಸಶಸ್ತ್ರ ಹೋರಾಟ ನಡೆಸಿದ್ದರು. ಆರು ಜನರ ಹಿಂದೆ ಒಂದೊಂದೇ ಹಿನ್ನೆಲೆ ಇದೆ. ಇದೀಗ ಅಂತಿಮವಾಗಿ ಕಾಡಿಗೆ ವಿದಾಯ ಹೇಳಿ ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಲು ಮುಖ್ಯವಾಹಿನಿಗೆ ಆಗಮಿಸಿದ್ದಾರೆ.

ನಕ್ಸಲರ ಜೊತೆ ಸಿಎಂ ಸಭೆ

ಇನ್ನು ತಮ್ಮ ಸಮ್ಮುಖದಲ್ಲೇ ಮುಖ್ಯವಾಹಿನಿ ಬಂದಿರುವ ನಕ್ಸಲರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭ ನಡೆಸಿದ್ದು, ಅವರ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ್ದಾರೆ. ಅಲ್ಲದೇ ಅವರ ಪ್ರೋತ್ಸಾಹ ಧನದ ಚರ್ಚಿಸಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚರ್ಚಿಸಿ ಮುಖ್ಯವಾಹಿನಿಗೆ ಬರಲು ಇಂಗಿತ ವ್ಯಕ್ತಡಿಸಿದ್ದರು. ಈ ಮೂಲಕ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮುಂದೆ ಶರಣಾಗತಿಗೆ ಎಲ್ಲಾ ಮಾತುಕತೆ ಆಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಲು ತೀರ್ಮಾನಿಸಿದ್ದು, ಅದರಂತೆ ಇಂದು(ಜನವರಿ 08) ಬೆಳಗ್ಗೆ ಪೊಲೀಸ್ ಬಂದೋಬಸ್ತ್​ನಲ್ಲಿ. ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಚಿಕ್ಕಮಗಳೂರಿನಲ್ಲಿ ಮಾತುಕತೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸಂಜೆ 6 ಗಂಟೆ ಹೊತ್ತಿಗೆ ಸಿಎಂ ಗೃಹ ಕಚೇರಿ ಕೃಷ್ಣಗೆ ತಲುಪಿತು. ಆ ತಂಡವನ್ನು ಚೆಕ್ ಇನ್ ಮಾಡಿ ಪೊಲೀಸರು ಒಳಗೆ ಬಿಟ್ಟರು. ಸಿಎಂ ಕಚೇರಿ ಮುಂದೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:58 pm, Wed, 8 January 25

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಕಾಜಿರಂಗದಲ್ಲಿ ಕಂಡಿತು ಹಾಲಿನ ಬಣ್ಣದ ಜಿಂಕೆ; ವಿಡಿಯೋ ವೈರಲ್
ಕಾಜಿರಂಗದಲ್ಲಿ ಕಂಡಿತು ಹಾಲಿನ ಬಣ್ಣದ ಜಿಂಕೆ; ವಿಡಿಯೋ ವೈರಲ್
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು