ಕೊರೊನಾ ಸಂಕಷ್ಟ ಮುಗಿಯುತ್ತಿದ್ದಂತೆ ಕೊರೊನಾ ವಾರಿಯರ್ಸ್ಗೆ ಕರ್ತವ್ಯದಿಂದ ಮುಕ್ತಿಗೊಳಿಸಲು ಮುಂದಾದ ಆರೋಗ್ಯ ಇಲಾಖೆ

ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ.ಗ್ರೂಪ್ ನೌಕರರು ಎಲ್ಲರನ್ನೂ ಸೆಪ್ಟೆಂಬರ್ ಅಂತ್ಯಕ್ಕೆ ಕರ್ತವ್ಯದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೊರೊನಾ ಸಂಕಷ್ಟ ಮುಗಿಯುತ್ತಿದ್ದಂತೆ ಕೊರೊನಾ ವಾರಿಯರ್ಸ್ಗೆ ಕರ್ತವ್ಯದಿಂದ ಮುಕ್ತಿಗೊಳಿಸಲು ಮುಂದಾದ ಆರೋಗ್ಯ ಇಲಾಖೆ
TV9kannada Web Team

| Edited By: Ayesha Banu

Sep 15, 2021 | 3:27 PM

ಬೆಂಗಳೂರು: ಮಹಾಮಾರಿ ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕೊರೊನಾ ವಾರಿಯರ್ಸ್ ಬದುಕು ಅತಂತ್ರವಾಗಿದೆ. ಅಂದು ಹಾರ ತುರಾಯಿ ಸನ್ಮಾನ ಮಾಡಿ ಇಂದು ಹೊರಟು ಹೋಗಿ ಎಂದು ಅವಮಾನ ಮಾಡಲಾಗುತ್ತಿದೆ.

ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ.ಗ್ರೂಪ್ ನೌಕರರು ಎಲ್ಲರನ್ನೂ ಸೆಪ್ಟೆಂಬರ್ ಅಂತ್ಯಕ್ಕೆ ಕರ್ತವ್ಯದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ಕೊರೊನಾ ಆಸ್ಪತ್ರೆಗಳಲ್ಲಿ, ವಾರ್ಡ್ ಗಳಲ್ಲಿ ಕೆಲಸಕ್ಕೆಂದು ನೇಮಕ ಮಾಡಿಕೊಂಡು ಕೊರೊನಾ ಕಡಿಮೆ ಆಗುತ್ತಿದ್ದಂತೆ ಒಂದುವರೆ ವರ್ಷ ಕೊರೊನಾ ಸೇವೆ ಮಾಡಿದ ಕೊರೊನಾ ವಾರಿಯರ್ಸ್ ಬದುಕು ಬೀದಿಗೆ ಬಿದ್ದಿದೆ.

ಸದ್ಯ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್ ವಿಧಾನ ಸೌಧ ಬಳಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. 144 ಸೆಕ್ಷನ್ ಇದೆ ಯಾರ ಭೇಟಿಗೂ ಅವಕಾಶ ಇಲ್ಲ ಎಂದು ಪೊಲೀಸರು ತಡೆದಿದ್ದು ಪೊಲೀಸರ ಜೊತೆ ವಾರಿಯರ್ಸ್ ವಾಗ್ವಾದಕ್ಕಿಳಿದಿದ್ದಾರೆ. ನಮಗೆ ನ್ಯಾಯ ಕೊಡಿಸಿ ಒಳಗೆ ಬಿಡಿ ಎಂದು ವಾಗ್ವಾದ ಮಾಡಿದ್ದಾರೆ.

ಇನ್ನು ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಆರೋಗ್ಯ ಇಲಾಖೆಯ ವರ್ತನೆ ಅಸಮಾಧಾನ ತಂದಿದೆ. ಏಕಾಏಕಿ ಎಲ್ಲ ಗುತ್ತಿಗೆ ಆದರಿತ ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ಷಿಷಿಯನ್ಸ್, ಡಿ ಗ್ರೂಪ್ ನೌಕರರನ್ನ ಕರ್ತವ್ಯದಿಂದ ಕೈಬಿಡಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಆರ್​ಡಿಪಿಆರ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿದ ಸರ್ಕಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada